ವಿರಾಟ್ ಕೊಹ್ಲಿ.. ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಹೆಸರು. ಭಾರತ ಯಾವುದೇ ದೇಶದ ಪ್ರವಾಸ ಕೈಗೊಂಡರೂ ಅಲ್ಲಿ ವಿರಾಟ್ ಕೊಹ್ಲಿ ಜಪ ತಪ್ಪಲ್ಲ. ಹಿಂಡು ಹಿಂಡು ಪ್ರತಿಭಾವಂತ ಆಟಗಾರನ್ನೊಂದಿರುವ ಆಸ್ಟ್ರೇಲಿಯಾಗೆ ವಿರಾಟ್ ಕೊಹ್ಲಿ ಕಾಲಿಟ್ಟರೆ ಅಲ್ಲಿ ಕೇವಲ ವಿರಾಟ್ ಕೊಹ್ಲಿಯೇ ನ್ಯೂಸ್ ಪೇಪರ್ ಫ್ರಂಟ್ ಪೇಜ್ ಸುದ್ದಿ.
ಇಷ್ಟರ ಮಟ್ಟಿಗೆ ವಿಶ್ವದಾದ್ಯಂತ ಹೆಸರು ಗಳಿಸಲು ಕಾರಣ ವಿರಾಟ್ ಕೊಹ್ಲಿಯ ಅತ್ಯದ್ಭುತ ಆಟ ಹಾಗೂ ಆ ಆಟಕ್ಕಿರುವ ಅಪಾರವಾದ ಅಭಿಮಾನಿ ಬಳಗ. ಇನ್ನು ಇಷ್ಟು ದಿನಗಳ ಕಾಲ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾಗಳಂತಹ ದೇಶಗಳಲ್ಲಿ ಕೊಹ್ಲಿಗೆ ಅಲ್ಲಿನ ಅಭಿಮಾನಿಗಳು ಜೈಕಾರ ಹಾಕಿದ್ದನ್ನು ಕಂಡಿದ್ದೇವೆ.
ಆದರೆ ಇದೀಗ ಪಾಕಿಸ್ತಾನದಲ್ಲೂ ಸಹ ವಿರಾಟ್ ಕೊಹ್ಲಿ ಅಭಿಮಾನಿಗಳು ಕೊಹ್ಲಿ ಮೇಲಿನ ಅಭಿಮಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ. ಹೌದು, ನಿನ್ನೆ (ಫೆಬ್ರವರಿ 14) ಕರಾಚಿಯ ನ್ಯಾಷನಲ್ ಕ್ರೀಡಾಂಗಣದಲ್ಲಿ ಪಾಕ್, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳ ತ್ರಿಕೋನ ಸರಣಿಯ ಫೈನಲ್ ಪಂದ್ಯ ನಡೆದಿತ್ತು.
ಈ ಪಂದ್ಯದಲ್ಲಿ ಪಾಕ್ ವಿರುದ್ಧ ನ್ಯೂಜಿಲೆಂಡ್ ಗೆದ್ದು ಬೀಗಿದೆ. ಈ ಸೋಲಿನ ಬೆನ್ನಲ್ಲೇ ಕ್ರೀಡಾಂಗಣಕ್ಕೆ ಬಂದಿದ್ದ ಪಾಕ್ ಕ್ರಿಕೆಟ್ ಅಭಿಮಾನಿಗಳು ಮಾಧ್ಯಮದ ಮುಂದೆ ಪಂದ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇನ್ನು ಇದೇ ಸಂದರ್ಭದಲ್ಲಿ ಅಲ್ಲಿನ ಕೆಲ ಕ್ರಿಕೆಟ್ ಪ್ರೇಮಿಗಳು ಪಾಕ್ ಆಟಗಾರರ ಕಳಪೆ ಪ್ರದರ್ಶನವನ್ನು ಟೀಕಿಸಿ ವಿರಾಟ್ ಕೊಹ್ಲಿಯನ್ನು ಉದಾಹರಣೆ ಕೊಟ್ಟು ಹೊಗಳಿದರು. ಇದೇ ಸಂದರ್ಭದಲ್ಲಿ ಅಲ್ಲಿದ್ದ ಕೊಹ್ಲಿ ಫ್ಯಾನ್ಸ್ ಜೈಕಾರ ಕೂಗಿದರು. ಬಾಬರ್ ಅಜಮ್ ಅಭಿಮಾನಿಗಳು ತಮ್ಮ ಆಟಗಾರನನ್ನು ಸಮರ್ಥಿಸಿಕೊಳ್ಳುವುದಕ್ಕೂ ಸಹ ಅವಕಾಶ ಕೊಡದೇ ಕೊಹ್ಲಿಗೆ ಜೈಕಾರ ಹಾಕಿದರು. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


