ವಡೋದರಾ: ಇಲ್ಲಿನ ಕೊಟಂಬಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ (ಫೆಬ್ರವರಿ 14) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಟ್ಸ್ ತಂಡಗಳ ನಡುವೆ ನಡೆದ ಪಂದ್ಯದ ಮೂಲಕ 2025ರ ವನಿತೆಯರ ಪ್ರೀಮಿಯರ್ ಲೀಗ್ ಆರಂಭವಾಯಿತು.
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತುವ ಮೂಲಕ ವನಿತೆಯರ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಅತಿದೊಡ್ಡ ಚೇಸ್ ಎಂಬ ದಾಖಲೆಯನ್ನು ಮಾಡಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಹೆಸರಿನಲ್ಲಿದ್ದ ದಾಖಲೆಯನ್ನು ಆರ್‌ಸಿಬಿ ತನ್ನ ಹೆಸರಿಗೆ ಬರೆದುಕೊಂಡಿದೆ.
ನಿನ್ನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ವುಮೆನ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ಆರ್‌ಸಿಬಿ ವುಮೆನ್ಸ್‌ಗೆ 202 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಆರ್‌ಸಿಬಿ 18.3 ಓವರ್‌ಗಳಲ್ಲಿಯೇ 4 ವಿಕೆಟ್ ನಷ್ಟಕ್ಕೆ 202 ರನ್ ಬಾರಿಸಿತು.
ಈ ಮೂಲಕ ಆರ್‌ಸಿಬಿ ವುಮೆನ್ಸ್ ಪ್ರೀಮಿಯರ್ ಲೀಗ್‌ನ ಬಿಗ್ಗೆಸ್ಟ್ ಚೇಸ್ ದಾಖಲೆ ಮಾಡಿದ್ದು, ಈ ದಾಖಲೆ ಪಟ್ಟಿಯ ಟಾಪ್ 5 ಚೇಸ್‌ಗಳಾವುವು ಎಂಬ ಪಟ್ಟಿ ಮುಂದಿದೆ ನೋಡಿ..
202/4 – ಆರ್‌ಸಿಬಿ vs ಗುಜರಾತ್ ಜೈಂಟ್ಸ್, 2025
191/3 – ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್, 2024
189/2 – ಆರ್‌ಸಿಬಿ vs ಗುಜರಾತ್ ಜೈಂಟ್ಸ್, 2023
181/7 – ಉತ್ತರಪ್ರದೇಶ ವಾರಿಯರ್ ವುಮೆನ್ಸ್ vs ಗುಜರಾತ್ ಜೈಂಟ್ಸ್ , 2023
175/7 – ಉತ್ತರಪ್ರದೇಶ ವಾರಿಯರ್ ವುಮೆನ್ಸ್ vs ಗುಜರಾತ್ ಜೈಂಟ್ಸ್, 2023
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


