ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಾಗೂ ಜನ ಸಾಮಾನ್ಯರಲ್ಲಿಯೂ ಸದ್ಯ ಭಾರೀ ಚರ್ಚೆಯನ್ನು ಹುಟ್ಟುಹಾಕಿರುವ ವಿಷಯವೆಂದರೆ ಅದು ಜಾತಿಗಣತಿ.
ಈಗಾಗಲೇ ಈ ವರದಿಯನ್ನು ಸಿದ್ಧಪಡಿಸಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಿಸದೆ ಕಾಂತರಾಜು ಸಮಿತಿ. ವರದಿ ವಿಧಾನಸೌಧದಲ್ಲಿ ಸಲ್ಲಿಕೆಯಾದ ಬೆನ್ನಲ್ಲೇ ಸಿದ್ದರಾಮಯ್ಯನವರು ಏಪ್ರಿಲ್ 17ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಇನ್ನು ವರದಿಯದ್ದು ಎನ್ನಲಾದ ಜಾತಿವಾರು ಜನಸಂಖ್ಯೆ ಸೋರಿಕೆಯಾಗಿದ್ದು, ಯಾವ ಜಾತಿಯಲ್ಲಿ ಎಷ್ಟು ಜನರಿದ್ದಾರೆ ಎಂಬ ವಿಷಯ ಸದ್ಯ ಭಾರೀ ವಿವಾದವನ್ನು ಹುಟ್ಟುಹಾಕಿದೆ.
ಅನೇಕ ಸಮುದಾಯದ ಮುಖ್ಯಸ್ಥರು ತಮ್ಮ ಜಾತಿಯ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದು, ಈ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ಅಂಕಿಅಂಶ ಸೋರಿಕೆಯಾಗಿದೆ. ಜಾತಿಗಣತಿ ವೇಳೆ ಎಷ್ಟು ಜನ ತಮ್ಮ ಜಾತಿಯನ್ನು ಹೇಳಿಕೊಳ್ಳಲಿಲ್ಲ, ಎಷ್ಟು ಜನಕ್ಕೆ ಜಾತಿ ಗೊತ್ತಿಲ್ಲ ಎಂಬ ಅಂಶವನ್ನು ಟಿವಿ9
ವರದಿ ಮಾಡಿದೆ.
ಈ ವರದಿಯ ಪ್ರಕಾರ ಜಾತಿರಹಿತ ಎಂದು ಗುರುತಿಸಿಕೊಂಡವರ ಸಂಖ್ಯೆ 1,34, 319, ಜಾತಿಯೇ ಗೊತ್ತಿಲ್ಲ ಎಂದವರ ಸಂಖ್ಯೆ 1,94,003 ಹಾಗೂ ಜಾತಿ ಹೆಸರು ಹೇಳಲು ನಿರಾಕರಿಸಿದವರು 2,53,954, ಜಾತಿ ಗುರುತಿಸಲು ಸಾಧ್ಯವಾಗದವರು 3,755 ಜನರಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


