ಬೆಂಗಳೂರು: ಮೂಡಬಿದ್ರೆಯ ಕಾಲೇಜೊಂದರ ಉಪನ್ಯಾಸಕರಿಬ್ಬರು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಯುವತಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಆಯೋಗದ ನಿರ್ದೇಶನದ ಮೇಲೆ ಪೊಲೀಸ್ ದೂರು ದಾಖಲಾಗಿದೆ.
ಮೂಡಬಿದ್ರೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಫಿಸಿಕ್ಸ್ ಪ್ರಾಧ್ಯಾಪಕ ನರೇಂದ್ರ ಹಾಗೂ ಬಯಾಲಜಿ ಪ್ರಾಧ್ಯಾಪಕ ಸಂದೀಪ್ ಪರಿಚಯವಿತ್ತು. ಬಳಿಕ ಬೆಂಗಳೂರಿಗೆ ಬಂದ ನಂತರ ನೋಟ್ಸ್ ಕೊಡುವ ನೆಪದಲ್ಲಿ ನರೇಂದ್ರ ಕರೆಸಿಕೊಂಡು ತನ್ನ ಗೆಳೆಯನ ರೂಮ್‌ನಲ್ಲಿ ಅತ್ಯಾಚಾರವೆಸಗಿದ್ದ. ಹೀಗೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದನ್ನು ತನ್ನ ಗೆಳೆಯ, ಮತ್ತೋರ್ವ ಪ್ರಾಧ್ಯಾಪಕ ಸಂದೀಪ್‌ಗೆ ತಿಳಿಸಿದ್ದ.
ಈ ವಿಷಯವನ್ನಿಟ್ಟುಕೊಂಡು ಯುವತಿಗೆ ಬ್ಲಾಕ್‌ಮೇಲ್ ಮಾಡಲು ಶುರು ಮಾಡಿದ ಸಂದೀಪ್ ಸಹ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಇನ್ನು ಈ ಕೃತ್ಯಗಳು ಅನೂಪ್ ಎಂಬ ಗೆಳೆಯನ ರೂಮ್‌ನಲ್ಲಿ ಜರುಗಿರುತ್ತದೆ. ಈ ವಿಷಯ ತಿಳಿದ ಅನೂಪ್ ಸಹ ಆ ಯುವತಿಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದಾನೆ.
ಹೀಗೆ ಅತ್ಯಾಚಾರವೆಸಗಿದ ಮೂವರ ವಿರುದ್ಧವೂ ದೂರನ್ನು ದಾಖಲಿಸಲಾಗಿದ್ದು, ಮೂವರನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಹುಲಿಗಳಿಗೆ ವಿಷಪ್ರಾಶನ ಪ್ರಕರಣ: ಡಿಸಿಎಫ್ ಅಮಾನತು
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


