ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ನಡೆದ ಸರಣಿ ಕೊಲೆ, ಅತ್ಯಾಚಾರ ಕೊಲೆಗಳಿಗೆ ಸಂಬಂಧಿಸಿದಂತೆ ಭಾರೀ ಬೆಳವಣಿಗೆಗಳು ಕಂಡುಬರುತ್ತಿದ್ದು, ತಿಂಗಳಿನಲ್ಲಿ ಎರಡನೇ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.
ಹೌದು, ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊಲೆಗಾರರ ಒತ್ತಡದ ಮೇರೆಗೆ ಹಲವಾರು ಶವಗಳನ್ನು ಹೂತುಹಾಕಿದ್ದು ಅವುಗಳನ್ನು ಹೊರತೆಗೆದು ತೋರಿಸುತ್ತೇನೆ ಎಂದು ಜುಲೈ 4ರಂದು ದೂರು ನೀಡಿದ್ದ.
ಪಾಪಪ್ರಜ್ಞೆ ಕಾಡಿದ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದ ಆತ ಪ್ರಕರಣಕ್ಕೆ ಬೃಹತ್ ತಿರುವು ತಂದುಕೊಟ್ಟಿದ್ದ. ಇದೀಗ ಮತ್ತೊಂದು ಪ್ರಕರಣದ ಕುರಿತು ದೂರು ದಾಖಲು ಮಾಡಲು ಸಂತ್ರಸ್ತೆ ತಾಯಿ ಮುಂದಾಗಿದ್ದು, ಇದೂ ಸಹ ಧರ್ಮಸ್ಥಳ ಸರಣಿ ಕೊಲೆ ಪ್ರಕರಣವನ್ನು ಮತ್ತಷ್ಟು ಬಲಿಷ್ಟಗೊಳಿಸುವ ಸಾಧ್ಯತೆಯಿದೆ.
ಮಣಿಪಾಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮೊದಲನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಅನನ್ಯ ಭಟ್ ಧರ್ಮಸ್ಥಳದ ತನ್ನ ಸ್ನೇಹಿತೆಯರ ಜತೆ ಪ್ರವಾಸಕ್ಕೆ ಬಂದು ದೇವಸ್ಥಾನದ ದರ್ಶನ ಮುಗಿಸಿ ವಾಪಸ್ ತೆರಳಲು ಮುಂದಾಗಿದ್ದರು. ಈ ವೇಳೆ ಅನನ್ಯ ಭಟ್ ಸ್ನೇಹಿತೆಯರು ಮನೆಗೆ ಹೋಗಿ ಬಟ್ಟೆಗಳನ್ನು ತರುತ್ತೇವೆ ಎಂದು ತೆರಳಿದ್ದು, ವಾಪಸ್ ಬರುವಷ್ಟರಲ್ಲಿ ದೇವಸ್ಥಾನದಲ್ಲಿದ್ದ ಅನನ್ಯ ಭಟ್ ಆ ಸ್ಥಳದಲ್ಲಿರುವುದಿಲ್ಲ.
ಈ ವಿಷಯವನ್ನು ತಿಳಿದ ಕೊಲ್ಕತ್ತಾದಲ್ಲಿ ಕೆಲಸ ಮಾಡುತ್ತಿದ್ದ ಅನನ್ಯ ಭಟ್ ತಾಯಿ ಸುಜಾತಾ ಧರ್ಮಸ್ಥಳ ತಲುಪುವಷ್ಟರಲ್ಲಿ ಎರಡು ದಿನಗಳಾಗಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದರೆ ಪೊಲೀಸರು ತನ್ನನ್ನೇ ಬೆದರಿಸಿದರು ಹಾಗೂ ದೇವಸ್ಥಾನದ ಧರ್ಮಾಧಿಕಾರಿ ಸಹಾಯ ಕೇಳಲು ಹೋದಾಗ ಹಲ್ಲೆ ನಡೆಸಿ, ತನ್ನ ಕೈಕಾಲು ಕಟ್ಟಿ ರೂಮಿನಲ್ಲಿಟ್ಟು ಹಿಂಸಿಸಿದರು ಎಂದು ಸ್ವತಃ ಸುಜಾತಾ ಯುನೈಟೆಡ್ ಮೀಡಿಯಾ ಚಾನೆಲ್‌ನಲ್ಲಿ ಮೂರು ತಿಂಗಳ ಹಿಂದೆ ನಡೆದ ಸಂದರ್ಶನದಲ್ಲಿ ಹೇಳಿದ್ದಾರೆ.
ಇಷ್ಟು ಮಾತ್ರವಲ್ಲದೇ ತನ್ನ ಮೇಲೆ ಕೋಮಾ ತಲುಪುವ ಮಟ್ಟಕ್ಕೆ ಹಲ್ಲೆ ಮಾಡಿದರು, ಮೂರು ತಿಂಗಳ ಬಳಿಕ ಕೋಮಾದಿಂದ ಹೊರಬಂದೆ ಎಂದಿದ್ದಾರೆ. ಇದೇ ಸುಜಾತಾ ಅವರು ಇಂದು ( ಜುಲೈ 15 ) ಸಂಜೆ 5 ಗಂಟೆಗೆ ದೂರನ್ನು ದಾಖಲಿಸಲಿದ್ದಾರೆ.
ಹೀಗೆ ನಾಪತ್ತೆಯಾದ ಮಗಳ ಕುರಿತು ಪ್ರಶ್ನಿಸಿದ್ದಕ್ಕೆ ಹಲವರಿಂದ ಹಲ್ಲೆಗೊಳಗಾದ ಮಹಿಳೆ ದೂರನ್ನು ದಾಖಲಿಸುವುದು ಧರ್ಮಸ್ಥಳ ಸರಣಿ ಕೊಲೆ ಪ್ರಕರಣದ ತೂಕವನ್ನು ಹೆಚ್ಚಿಸಲಿದ್ದು, ಈ ಪ್ರಕರಣದಲ್ಲಿ ಹಲವು ಹೆಸರುಗಳು ಹೊರಬೀಳುವ ಸಾಧ್ಯತೆ ಇದೆ.
ಚಾಮರಾಜನಗರ ಹುಲಿಗಳಿಗೆ ವಿಷಪ್ರಾಶನ ಪ್ರಕರಣ: ಡಿಸಿಎಫ್ ಅಮಾನತು
ಎಐ ಕೃಷಿ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


