ಜಿಟಿಜಿಟಿ ಮಳೆಯಾಗುತ್ತಿರುವ ಸಮಯದಲ್ಲಿ ಗರಿಗರಿಯಾದ ಅಲಸಂದೆ ವಡೆ,ಮಳೆಯ ಸಮಯದಲ್ಲಿ ಗರಿಗರಿಯಾದ ಕುರುಕಲು ತಿಂಡಿ ಸೇವಿಸುವ ಆಸೆ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಕಡಲೆಬೇಳೆ ಮತ್ತು ಹೆಸರುಕಾಳನ್ನು ನೆನೆಸಿ ವಡೆ ತಯಾರಿಸಲಾಗುತ್ತದೆ. ಆದರೆ, ಅಲಸಂದೆ (ಬ್ಲಾಕ್ ಐಡ್ ಪೀಸ್) ಬಳಸಿ ಮಾಡುವ ವಡೆ ಕೂಡ ಅತ್ಯಂತ ರುಚಿಕರವಾಗಿರುತ್ತದೆ. ಸಿಕ್ಕಾಪಟ್ಟೆ ಪ್ರೊಟೀನ್ ಹಾಗೂ ವಿಟಮಿನ್ ಇರೋ ಅಲಸಂದೆ ನಮ್ಮ ಆರೋಗ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ನಾವಿಂದು ಅಲಸಂದೆಕಾಳಿನ ವಡೆ ಮಾಡುವ ವಿಧಾನ ನೋಡೋಣ.

ಅಲಸಂದೆ ವಡೆಗಾಗಿ ಬೇಕಾಗುವ ಸಾಮಗ್ರಿ:
ಅಲಸಂದೆ – 250 ಗ್ರಾಂ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಡೀಪ್ ಫ್ರೈ ಮಾಡಲು ಬೇಕಾದಷ್ಟು
ಕರಿಬೇವು – ಒಂದು ಹಿಡಿಯಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಜೀರಿಗೆ – 1 ಟೀಸ್ಪೂನ್
ಹಸಿಮೆಣಸಿನಕಾಯಿ – 4
ಶುಂಠಿ ಪೀಸ್ಗಳು – 2
ಅಡುಗೆ ಸೋಡಾ – ಸ್ವಲ್ಪ

ಅಲಸಂದೆ ವಡೆ ತಯಾರಿಸುವ ವಿಧಾನ:
ಅಲಸಂದೆ ಕಾಳುಗಳನ್ನು ಒಂದು ಬೌಲ್‌ನಲ್ಲಿ ಚೆನ್ನಾಗಿ ತೊಳೆಯಿರಿ. ಬಳಿಕ ಕನಿಷ್ಠ 6 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಿ.
ನೆನೆಸಿದ ಅಲಸಂದೆ ಕಾಳುಗಳನ್ನು ಜರಡಿಯಲ್ಲಿ ತೆಗೆದುಕೊಂಡು, ನೀರಿಲ್ಲದೆ ಚೆನ್ನಾಗಿ ಸೋಸಿಕೊಳ್ಳಬೇಕು.
ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಹಸಿಮೆಣಸಿನಕಾಯಿ, ಶುಂಠಿ, ಈರುಳ್ಳಿ, ಮತ್ತು 1 ಟೀಸ್ಪೂನ್ ಜೀರಿಗೆ ಸೇರಿಸಿ, ನೀರು ಸೇರಿಸದೆ ಒರಟಾದ ಪೇಸ್ಟ್ ಮಾಡಿ.
ನೀರು ಸೇರಿಸದೆ ಮಿಕ್ಸರ್‌ನಲ್ಲಿ ರುಬ್ಬಿದ ಅಲಸಂದೆ ಹಿಟ್ಟನ್ನು ಈ ಮಸಾಲೆ ಪೇಸ್ಟ್‌ಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಸ್ವಲ್ಪ ಅಡುಗೆ ಸೋಡಾ ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಕಲಸಿ.
ಹಿಟ್ಟು ಸ್ವಲ್ಪ ಗಟ್ಟಿಯಾಗಿರಬೇಕು. ತಳ್ಳಗೆ ಆಗಿದ್ದರೆ, ಸ್ವಲ್ಪ ಒಣ ಅಕ್ಕಿ ಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ.
ಒಲೆ ಆನ್ ಮಾಡಿ, ಕಡಾಯಿಯಲ್ಲಿ ಸಾಕಷ್ಟು ಎಣ್ಣೆ ಹಾಕಿ ಬಿಸಿ ಮಾಡಬೇಕು.
ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದು ವಡೆಗಳ ರೂಪದಲ್ಲಿ ಮಾಡಿ, ಮಧ್ಯಮ ಉರಿಯಲ್ಲಿ ಎರಡೂ ಬದಿಗಳಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ಹೊಂಬಣ್ಣ ಬರುವುದು ಮುಖ್ಯ.
ಹುರಿದ ವಡೆಗಳನ್ನು ತಟ್ಟೆಗೆ ತೆಗೆದು ಬಿಸಿ ಬಿಸಿ ಸೇವಿಸಬಹುದು.ಈ ವಿಧಾನದಿಂದ ತಯಾರಿಸಿದ ಅಲಸಂದೆ ವಡೆಗಳು ತುಂಬಾ ಗರಿಗರಿಯಾಗಿದ್ದು, ರುಚಿಕರವಾಗಿರುತ್ತವೆ. ಮಳೆಯ ಸಮಯದಲ್ಲಿ ಈ ವಡೆಗಳನ್ನು ತಯಾರಿಸಿ, ಬಿಸಿ ಚಹಾ ಅಥವಾ ಕಾಫಿ ಜೊತೆಗೆ ಸೇವಿಸುವುದು ವಿಶೇಷ ಅನುಭವ ನೀಡುತ್ತದೆ
ಕಾಬೂಲ್ ಕಡ್ಲೆಯಿಂದ ತಯಾರಿಸಿ ಟೇಸ್ಟಿ ಮತ್ತು ಹೆಲ್ದಿ ಚೋಲೆ ಚಾಟ್
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


