ಕ್ಯಾಲಿಫೋರ್ನಿಯಾ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಬಂದಿಳಿದಿದ್ದಾರೆ.
ಶುಭಾಂಶು ಶುಕ್ಲಾ ಪೋಷಕರು ಲಕ್ನೋದಲ್ಲಿರುವ ಸಿಟಿ ಮಾಂಟೆಸರಿ ಶಾಲೆಯಲ್ಲಿ ಲೈವ್ ವೀಕ್ಷಿಸಿ ಈ ಖುಷಿಯ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.
ಶುಭಾಂಶು ಶುಕ್ಲಾ ಅವರು 18 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಇದೀಗ ಹಿಂದಿರುಗಿದ್ದು, ಎಲ್ಲೆಡೆ ಸಂತಸ ಮನೆ ಮಾಡಿದೆ.
ಜುಲೈ.14ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ನಂತರ ತಂಡವು ಈಗ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸ್ಲ್ಲಾಶ್‌ಡೌನ್ ಮಾಡಿದೆ.
ಜೂನ್.25ರಂದು ಆಕ್ಸಿಯಂ-4 ಮಿಷನ್ ಮೂಲಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ, ಅಮೇರಿಕಾ ಮಹಿಳಾ ಗಗನಯಾತ್ರಿ ಪೆಗ್ಗಿ ವಿಟ್ಸನ್, ಹಂಗೇರಿಯ ಟಿಬೋರ್ ಕಾಪು ಹಾಗೂ ಫೋಲೆಂಡ್ ಗಗನಯಾತ್ರಿ ಸ್ಲಾವೋಸ್ಜ್ ಉನ್ನಾನ್ಸ್ಕಿ ಅಂತರಿಕ್ಷ ಯಾನಕ್ಕೆ ತೆರಳಿದ್ದರು.
ಈಗ ಗಗನಯಾತ್ರಿಗಳಿಗೆ 7 ದಿನ ಪುನಶ್ಚೇತನ ಕಾರ್ಯಕ್ರಮ ನಡೆಸಲಾಗುತ್ತದೆ. ನಂತರ ಅವರು ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ.
ಚಹಾ ಜೊತೆಗೆ ಕ್ರಿಸ್ಪಿ ಅಲಸಂದೆ ವಡೆ: ಮಳೆಗಾಲದ ಪರ್ಫೆಕ್ಟ್ ಕಾಂಬೊ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


