Sunday, November 1, 2026
spot_img
More
    spot_img
    HomeStateDistrictಧರ್ಮಸ್ಥಳ: ಈ ಕಾರಣದಿಂದಲೇ ತೋರಿಸಿದ ಎಲ್ಲ ಕಡೆ ಅಸ್ತಿಪಂಜರ ಸಿಗಲಿಲ್ಲ; ಬಾಯಿಬಿಟ್ಟ ಮಾಸ್ಕ್‌ಮ್ಯಾನ್

    ಧರ್ಮಸ್ಥಳ: ಈ ಕಾರಣದಿಂದಲೇ ತೋರಿಸಿದ ಎಲ್ಲ ಕಡೆ ಅಸ್ತಿಪಂಜರ ಸಿಗಲಿಲ್ಲ; ಬಾಯಿಬಿಟ್ಟ ಮಾಸ್ಕ್‌ಮ್ಯಾನ್

    ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಈ ಹಿಂದೆ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಅನಾಮಿಕ ವ್ಯಕ್ತಿಯೊಬ್ಬ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿದ್ದು, ಅವುಗಳ ಶವಗಳನ್ನು ತಾನೇ ಹೂತಿದ್ದಾಗಿ ಹೇಳಿಕೊಂಡು ದೂರು ದಾಖಲಿಸಿದ್ದ.

    ದೂರಿನಲ್ಲಿ ಹೂತು ಹಾಕಿರುವ ಹೆಣಗಳ ಕಳೇಬರವನ್ನು ಸಹ ತೋರಿಸುವುದಾಗಿ ಉಲ್ಲೇಖಿಸಿದ್ದ. ಅದರ ಮೇರೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆಗೆ ಆದೇಶ ನೀಡಿದ್ದು, ಸದ್ಯ ಶೋಧ ಕಾರ್ಯ ಭರದಿಂದ ಸಾಗಿದೆ.

    ಕೆಲವರು ಆರೋಪ ಮಾಡುತ್ತಿರುವ ಅನಾಮಿಕ ವ್ಯಕ್ತಿ ಸುಳ್ಳು ಎಂದೆಲ್ಲ ಟೀಕೆ ಮಾಡಿದ್ದರು. ಆದರೆ ಗುರುತಿಸಿದ್ದ ಆರನೇ ಪಾಯಿಂಟ್‌ನಲ್ಲಿ ಹಾಗೂ ಬಂಗ್ಲ ಗುಡ್ಡದಲ್ಲಿ ಈತ ಹೇಳಿದೆಡೆ ಅಸ್ತಿಪಂಜರಗಳು ಪತ್ತೆಯಾದಾಗ ಪ್ರಕರಣ ತಿರುವು ಪಡೆದುಕೊಂಡಿತು.

    ಆದರೆ ಈಗಲೂ ಸಹ ಅನೇಕರು ಈತನ ವಿರುದ್ಧ ಅನುಮಾನ ಹೊರಹಾಕುತ್ತಿದ್ದು, ಈತ ಮಾತ್ರ ತಾನು ಗುರುತಿಸಿದ್ದ ಜಾಗದಲ್ಲಿ ಹೆಣ ಹೂತಿದ್ದು ನಿಜ ಎಂದು ವಾದಿಸುತ್ತಿದ್ದಾನೆ.

    ಈ ಕುರಿತು ಅನಾಮಿಕ ವ್ಯಕ್ತಿಯನ್ನು ಇಂಡಿಯಾ ಟುಡೇ ಸಂದರ್ಶನ ಮಾಡಿದ್ದು, ಈ ಸಂದರ್ಶನದಲ್ಲಿ ಈತ ತಾನು ಗುರುತಿಸಿದ್ದ ಜಾಗಗಳಲ್ಲಿ ಹೆಣ ಹೂತಿದ್ದು ನಿಜ. ಆದರೆ ತದನಂತರ ಆ ಜಾಗಗಳಲ್ಲಿ ಮಣ್ಣಿನ ಕೆಲಸಗಳು ನಡೆದಿರುವುದರಿಂದ ತುಸು ಗೊಂದಲ ಉಂಟಾಗಿದೆ ಎಂದಿದ್ದಾನೆ.

    ಈ ಹಿಂದೆ ಇದ್ದ ದಾರಿಗಳಿಗೂ ಈಗ ಇರುವ ದಾರಿಗಳಿಗೂ ವ್ಯತ್ಯಾಸವಿದೆ. ಹೀಗಾಗಿ ಕೆಲ ಜಾಗಗಳು ಹೊಂದಾಣಿಕೆಯಾಗಿಲ್ಲ ಎಂದು ಮಾಸ್ಕ್‌ ಮ್ಯಾನ್‌ ಆರೋಪಿಸಿದ್ದಾನೆ. ಅಲ್ಲದೇ ಸಂದರ್ಶನದಲ್ಲಿ ನೇತ್ರಾವತಿ ಸ್ನಾನಘಟ್ಟ ಮಾತ್ರವಲ್ಲದೇ ಇನ್ನೂ ಹಲವು ಕಡೆ ಹೆಣಗಳನ್ನು ಹೂತಿದ್ದಾಗಿ ಹೇಳಿಕೊಂಡಿದ್ದಾನೆ.

    ದರ್ಶನ್ ಜಾಮೀನು ರದ್ದು ಕುರಿತು ರಮ್ಯಾ ಹೀಗೆ ಪೋಸ್ಟ್ ಹಾಕಿದ್ದಾರೆ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search