Sunday, November 1, 2026
spot_img
More
    spot_img
    HomeEntertainmentರಜನಿಕಾಂತ್ ‘ಕೂಲಿ’ ಬಾಕ್ಸ್ ಆಫೀಸ್‌ ದಾಖಲೆ: ಮೊದಲ ದಿನವೇ ವಿಶ್ವಾದ್ಯಂತ ₹130 ಕೋಟಿ ಕಲೆಕ್ಷನ್

    ರಜನಿಕಾಂತ್ ‘ಕೂಲಿ’ ಬಾಕ್ಸ್ ಆಫೀಸ್‌ ದಾಖಲೆ: ಮೊದಲ ದಿನವೇ ವಿಶ್ವಾದ್ಯಂತ ₹130 ಕೋಟಿ ಕಲೆಕ್ಷನ್

    ಬೆಂಗಳೂರು ;ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ವಿಶ್ವಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಈ ಚಿತ್ರದ ಬಿಡುಗಡೆಯನ್ನು ದಕ್ಷಿಣ ಭಾರತದಾದ್ಯಂತ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ,ರಜನಿಕಾಂತ್ ನಟನೆಯ ಬಹುನಿರೀಕ್ಷಿತ ‘ಕೂಲಿ’ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಮೊದಲ ದಿನ ಹೆಚ್ಚಿನೆಡೆ ಹೌಸ್‌ಫುಲ್ ಪ್ರದರ್ಶನ ಕಂಡ ಈ ಚಿತ್ರವು, ವಿಶ್ವಾದ್ಯಂತ ಅಂದಾಜು ₹130 ಕೋಟಿ ಗಳಿಸಿದೆ.

    ಭಾರತದಲ್ಲಿ ಮಾತ್ರವೇ ಸುಮಾರು ₹53 ಕೋಟಿ ಕಲೆಕ್ಷನ್ ದಾಖಲಾಗಿದ್ದು, ಕರ್ನಾಟಕದಲ್ಲೂ ಮೊದಲ ದಿನ ಕೂಲಿ ಅರ್ಭಟ ಜೋರಾಗಿಯೇ ಇತ್ತು. ಟಿಕೆಟ್ ದರ ಗಗನಕ್ಕೇರಿದ್ದರೂ, ಅಭಿಮಾನಿಗಳು ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ಉತ್ಸಾಹದಿಂದ ಸಾಲಿನಲ್ಲಿ ನಿಂತಿದ್ದರು. ಚೆನ್ನೈಯಲ್ಲಿ ಗರಿಷ್ಠ ₹4,500 ಮತ್ತು ಬೆಂಗಳೂರಿನಲ್ಲಿ ₹2,500ವರೆಗೆ ಟಿಕೆಟ್ ದರ ಏರಿದ್ದರೂ, ಎಲ್ಲಾ ಟಿಕೆಟ್‌ಗಳೂ ಸೋಲ್ಡೌಟ್ ಆಗಿದ್ದವು.

    ಬೆಂಗಳೂರಿನಲ್ಲಿ 905ಕ್ಕೂ ಹೆಚ್ಚು ಶೋಗಳು, ರಾಜ್ಯಾದ್ಯಂತ 1,800ಕ್ಕೂ ಅಧಿಕ ಪ್ರದರ್ಶನಗಳು ನಡೆದಿದ್ದು, ಕರ್ನಾಟಕದಲ್ಲಿ ಮಾತ್ರವೇ ಮೊದಲ ದಿನ ₹10 ಕೋಟಿಗಳಷ್ಟು ಕಲೆಕ್ಷನ್‌ ಕಂಡಿದೆ. ಆದರೆ ಮುಂಜಾನೆಯ ಉತ್ಸಾಹ ಸಂಜೆ ವೇಳೆಗೆ ಸ್ವಲ್ಪ ಕುಸಿತ ಕಂಡಿದ್ದು, ನೆಗೆಟಿವ್ ಪ್ರತಿಕ್ರಿಯೆಗಳ ಕಾರಣ ಶುಕ್ರವಾರದ ಬುಕ್ಕಿಂಗ್‌ಗಳಲ್ಲಿ ಇಳಿಕೆಯಾಗಿದೆ.

    ಹಿಂದೆ ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಮೊದಲ ದಿನ ₹140 ಕೋಟಿ ಗಳಿಕೆ ದಾಖಲಿಸಿದ್ದರೆ, ಕೂಲಿ ₹130 ಕೋಟಿಯಲ್ಲಿ ತೃಪ್ತಿ ಪಟ್ಟುಕೊಂಡಿದೆ. ಆದರೂ, ಆಗಸ್ಟ್ 14ರಂದು ಬಿಡುಗಡೆಯಾದ ‘ಕೂಲಿ’ ಭಾರತದಲ್ಲೇ ಮೊದಲ ದಿನ ₹55.36 ಕೋಟಿ ಗಳಿಸಿ, ರಜನಿಕಾಂತ್ ಅವರ ಹಿಂದಿನ ‘ಜೈಲರ್’ ಚಿತ್ರದ ದಾಖಲೆಯನ್ನು ಮೀರಿಸಿದೆ.

    ಎಸ್‌ಐಟಿ ಮುಂದೆ 13 ವರ್ಷದ ಹಿಂದಿನ ಕೇಸ್: ಧರ್ಮಸ್ಥಳಕ್ಕೆ ತೆರಳಿದ್ದ ಯುವತಿ ನಾಪತ್ತೆ, ಸಹೋದರನಿಂದ ದೂರು

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search