Tuesday, September 1, 2026
spot_img
More
    spot_img
    HomeEntertainmentಲವ್‌ ಜಿಹಾದ್‌ ವಿಡಿಯೊ ಪ್ಲಾನ್‌ ಆಗ್ತಿದೆ ವೈರಲ್‌ ಪಕ್ಕಾ, ಸಮೀರ್‌ ರೀತಿ ನಾನು ಎಡಬಿಡಂಗಿ ಅಲ್ಲ;...

    ಲವ್‌ ಜಿಹಾದ್‌ ವಿಡಿಯೊ ಪ್ಲಾನ್‌ ಆಗ್ತಿದೆ ವೈರಲ್‌ ಪಕ್ಕಾ, ಸಮೀರ್‌ ರೀತಿ ನಾನು ಎಡಬಿಡಂಗಿ ಅಲ್ಲ; ಸುಮಂತ್‌ ಮತ್ತೊಂದು ಆಡಿಯೊ

    ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಒಂದೆಡೆ ಎಸ್‌ಐಟಿ ಅಧಿಕಾರಿಗಳು ಬಂಗ್ಲೆಗುಡ್ಡದ ಹಿಂದೆ ಬಿದ್ದಿದ್ದರೆ, ಇತ್ತ ಯುಟ್ಯೂಬರ್‌ಗಳು ಎಸ್‌ಐಟಿ ವರದಿ ಪ್ರಸಾರ ಮಾಡುವ ಕುರಿತಾಗಿ ಪರ ಹಾಗೂ ವಿರೋಧ ಆಪಾದನೆಗಳಲ್ಲಿ ಮುಳುಗಿದ್ದಾರೆ.

    Advertisement

    ಗೋಲ್ಡನ್‌ ಕನ್ನಡಿಗ ಎಂಬ ಯುಟ್ಯೂಬ್‌ ಚಾನೆಲ್‌ ಹೊಂದಿರುವ ಸುಮಂತ್‌ ಚಂದನ್‌ ಗೌಡ ವಿರುದ್ಧ ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಲು ಹಣ ಪಡೆದಿದ್ದಾರೆಂದು ಗಂಭೀರ ಆರೋಪ ಮಾಡಿದ ಬಳಿಕ ಭಾರೀ ವಿವಾದವೇ ಹುಟ್ಟಿಕೊಂಡಿದ್ದು, ಈ ಮಧ್ಯೆ ಚೇತನ್‌ ಎಂಬ ಯುವಕ ಸುಮಂತ್‌ನದ್ದು ಎಂದು ಆಡಿಯೊಗಳನ್ನು ಲೀಕ್‌ ಮಾಡಿ ಇಡೀ ಚಿತ್ರಣವನ್ನೇ ಬದಲಿಸಿಬಿಟ್ಟಿದ್ದಾನೆ.

    ಸುಮಂತ್‌ ಈ ಆಡಿಯೊದಲ್ಲಿ ಯುಟ್ಯೂಬರ್‌ಗಳ ಮೇಲೆ ಹಲ್ಲೆ ಪೂರ್ವ ನಿಯೋಜಿತ, 13ನೇ ಸ್ಥಳ ಉತ್ಖನನವಾದ ಮೇಲೆ ಜನರಿಂದ ಹಲ್ಲೆ ನಡೆಸಿ ತನಿಖೆಯನ್ನು ನಿಲ್ಲಿಸುವ ಯೋಜನೆಯಿತ್ತು ಎಂದು ಹೇಳಿಕೊಂಡಿದ್ದು, ಸಮೀರ್‌ ಇದ್ದಿದ್ದರೆ ಸಾಯಿಸಿಬಿಡುತ್ತಿದ್ದರು ಎಂದೂ ಸಹ ಹೇಳಿದ್ದಾನೆ.

    ಹೀಗೆ ಮಾತನಾಡಿರುವ ಸುಮಂತ್‌ ಬಳಿಕ ತನ್ನ ಮುಂದಿನ ಯೋಜನೆಯೇನು ಎಂಬುದನ್ನು ಸಹ ಹಂಚಿಕೊಂಡಿದ್ದಾನೆ. ತಾನು ಪುನೀತ್‌ ಕೆರೆಹಳ್ಳಿ ಜತೆ ಇದ್ದು, ಲವ್‌ ಜಿಹಾದ್‌ ವಿಡಿಯೊ ಯೋಜನೆ ನಡೆಯುತ್ತಿದೆ ಎಂದಿದ್ದಾನೆ. ಈ ಬಾರಿ ನೇಹಾ ಹೆಸರನ್ನು ಬಳಸುವುದಿಲ್ಲ, ಇದು ಬೇರೆಯದ್ದೇ ಕಥೆ, ಅದನ್ನು ಕೇಳಿ ನನಗೇ ಕಣ್ಣೀರು ಬಂತು ಎಂದಿರುವ ಸುಮಂತ್‌ ಪುನೀತ್‌ ಕೆರೆಹಳ್ಳಿ ಅವರೇ ಇದಕ್ಕೆ ಹಣ ಹೂಡಲಿದ್ದಾರೆ ಎಂದಿದ್ದಾನೆ. ಅಲ್ಲದೇ ಸಮೀರ್‌ ರೀತಿ ತಾನು ಎಡಬಿಡಂಗಿ ಕೆಲಸ ಮಾಡಿಕೊಳ್ಳುವುದಿಲ್ಲ, ತನ್ನ ಬಳಿ ತಕ್ಕ ಸಾಕ್ಷಿಗಳಿವೆ ಎಂದೂ ಸಹ ಸುಮಂತ್‌ ಹೇಳಿದ್ದಾನೆ.

    ಇನ್ನು ವಿಡಿಯೊ ಬಿಡುಗಡೆಯಾದ ಒಂದು ಗಂಟೆಯಲ್ಲೇ ಚಕ್ರವರ್ತಿ ಸೂಲಿಬೆಲೆಯಂತಹ ದೊಡ್ಡ ದೊಡ್ಡ ಹಿಂದೂಪರ ಹೋರಾಟಗಾರರು ಇದರ ಕುರಿತು ಪೋಸ್ಟ್‌ ಹಂಚಿಕೊಳ್ಳಲಿದ್ದು, 500 ಟ್ರೋಲ್‌ ಪೇಜ್‌ಗಳೂ ಸಹ ಪೋಸ್ಟ್‌ ಮಾಡಲಿವೆ, ಹೀಗಾಗಿ ವಿಡಿಯೊ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಲಿದೆ ಎಂದಿದ್ದಾನೆ. ಇನ್ನು ಇದಕ್ಕೆ ಎಐ ಬಳಕೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸ್ಕ್ರಿಪ್ಟ್‌ ಕೆಲಸ ಸಹ ನಡೆಯುತ್ತಿದೆ ಎಂದಿದ್ದಾನೆ.

    ಬಳಿಕ ಪೊಲೀಸರು ಸುಮೊಟೊ ಕೇಸ್‌ ದಾಖಲಿಸಿಕೊಂಡು ತನ್ನನ್ನು ಬಂಧಿಸಲಿದ್ದಾರೆ, ಆಗ ಪುನೀತ್‌ ಕೆರೆಹಳ್ಳಿ ಅವರ ವಕೀಲರು ತನಗೆ ಸಹಾಯ ಮಾಡಲಿದ್ದಾರೆ, ಮೊದಲ ವಿಚಾರಣೆಗೂ ಹಾಗೂ ಎರಡನೇ ವಿಚಾರಣೆಗೂ 15 ದಿನಗಳ ಅಂತರವಿರಲಿದ್ದು, ಅಷ್ಟು ದಿನಗಳಲ್ಲಿ ವಿಡಿಯೊ ವೈರಲ್‌ ಆಗಲಿದೆ ಎಂದು ಸಹ ಸುಮಂತ್‌ ಮಾತನಾಡಿದ್ದಾನೆ.

    ಅಂದು ಧರ್ಮಸ್ಥಳದಲ್ಲಿ ಸಮೀರ್‌ ಇದ್ದಿದ್ದರೆ ಸಾಯಿಸಿ ಕೇಸ್‌ ಕ್ಲೋಸ್‌ ಮಾಡ್ತಿದ್ರು; ಸುಮಂತ್‌ನ ಮತ್ತೊಂದು ಸ್ಪೋಟಕ ಆಡಿಯೊ ಲೀಕ್‌

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading