Tuesday, August 11, 2026
spot_img
More
    spot_img
    HomeLatest newsಅನರ್ಹ ಪಡಿತರ ಚೀಟಿಗಳಿಗೆ ಬಿಗ್ ಶಾಕ್: ಕರ್ನಾಟಕದಲ್ಲಿ 7.76 ಲಕ್ಷ BPL ಕಾರ್ಡ್‌ ರದ್ದು!

    ಅನರ್ಹ ಪಡಿತರ ಚೀಟಿಗಳಿಗೆ ಬಿಗ್ ಶಾಕ್: ಕರ್ನಾಟಕದಲ್ಲಿ 7.76 ಲಕ್ಷ BPL ಕಾರ್ಡ್‌ ರದ್ದು!

    ಬೆಂಗಳೂರು: ಕರ್ನಾಟಕದಲ್ಲಿ ಅನರ್ಹರು ಪಡೆದಿರುವ ಬರೋಬ್ಬರಿ 7.76 ಲಕ್ಷ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ಗುರುತಿಸಿರುವ ಅನರ್ಹ ರೇಷನ್ ಕಾರ್ಡ್‌ಗಳ ಜೊತೆಗೆ ರಾಜ್ಯ ಸರ್ಕಾರವೂ ಸ್ವತಂತ್ರವಾಗಿ ಗುರುತಿಸಿದ ಅನರ್ಹರ ಪಟ್ಟಿ ಸೇರಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಇಂದು (ಸೆಪ್ಟೆಂಬರ್ 15) ನಿರ್ಣಾಯಕ ಸಭೆ ನಡೆಯಲಿದ್ದು, ಸಚಿವ ಕೆ.ಎಚ್. ಮುನಿಯಪ್ಪ ಅವರು ಮುಂದಿನ ಹಂತಗಳ ಬಗ್ಗೆ ಸ್ಪಷ್ಟಪಡಿಸಲಿದ್ದಾರೆ.

    Advertisement

    ಯಾರು ಅನರ್ಹರು?

    ಸರ್ಕಾರಿ ಮಾನದಂಡಗಳ ಪ್ರಕಾರ, ಕೆಳಗಿನ ಅರ್ಹತೆಗಳನ್ನು ಹೊಂದಿದವರು ಬಿಪಿಎಲ್ ಕಾರ್ಡ್‌ಗೆ ಅನರ್ಹರು:

    ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚು ಇರುವವರು.

    ಕುಟುಂಬದಲ್ಲಿ ಒಬ್ಬರು ಆದಾಯ ತೆರಿಗೆ ಪಾವತಿದಾರರು ಆಗಿದ್ದರೆ.

    ಕಂಪನಿಗಳಲ್ಲಿ ನಿರ್ದೇಶಕರು ಆಗಿರುವವರು.

    ನಾಲ್ಕು ಚಕ್ರಗಳ ವಾಹನ ಹೊಂದಿರುವವರು.

    ಒಟ್ಟು ₹25 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವ ಜಿಎಸ್‌ಟಿ ನಂಬರ್ ಹೊಂದಿದವರು.

    ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) ಪ್ರಕಾರ, ರಾಜ್ಯದಲ್ಲಿ 5.80 ಲಕ್ಷ ಅನರ್ಹ ಬಿಪಿಎಲ್ ಫಲಾನುಭವಿಗಳಿದ್ದಾರೆ. ಆದರೆ, ರಾಜ್ಯ ಸರ್ಕಾರದ ‘ಕುಟುಂಬ ತಂತ್ರಾಂಶ’ ನಡೆಸಿದ ಸಮೀಕ್ಷೆಯ ಪ್ರಕಾರ ಈ ಸಂಖ್ಯೆ 10.09 ಲಕ್ಷಕ್ಕೆ ಏರಿಕೆಯಾಗಿದೆ.

    ಇದೀಗ ಕೇಂದ್ರದ ಸೂಚನೆಯಂತೆ, ₹1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರಿಗೆ ತಹಶೀಲ್ದಾರ್‌ಗಳ ಮೂಲಕ ನೋಟಿಸ್ ನೀಡಿ ಅವರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ.

    ಈ ಕ್ರಮವು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆಗೆ ನೇರವಾಗಿ ಪರಿಣಾಮ ಬೀರಲಿದೆ. ಪ್ರಸ್ತುತ ಈ ಯೋಜನೆಯಡಿ 4.46 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2.15 ಲಕ್ಷ ಟನ್ ಅಕ್ಕಿ ಹಂಚಿಕೆ ಮಾಡಲಾಗುತ್ತಿದ್ದು, ಇದಕ್ಕೆ ಪ್ರತಿ ತಿಂಗಳು ₹535 ಕೋಟಿ ವೆಚ್ಚವಾಗುತ್ತಿದೆ.

    ಅನರ್ಹ ಕಾರ್ಡ್‌ಗಳನ್ನು ರದ್ದುಗೊಳಿಸುವುದರಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯವಾಗಲಿದೆ. ಬೆಂಗಳೂರು ನಗರವೊಂದರಲ್ಲೇ 1 ಲಕ್ಷಕ್ಕೂ ಹೆಚ್ಚು ಮಂದಿ ಅನರ್ಹರು ಪತ್ತೆಯಾಗಿರುವುದು ಈ ಕಾರ್ಯಾಚರಣೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ.

    ಬೆಂಗಳೂರಿನ ನಿವಾಸಿಗಳೇ ಗಮನಿಸಿ! ಇಂದಿನಿಂದ 3 ದಿನಗಳ ಕಾಲ ಕಾವೇರಿ ನೀರು ಬಂದ್, ಕಾರಣ ಏನು?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading