Thursday, November 5, 2026
spot_img
More
    spot_img
    HomeSportsCricketAsia Cup 2025: ಪಂದ್ಯ ಮುಗಿಯುತ್ತಿದ್ದಂತೆ ಬಾಗಿಲು ಹಾಕಿಕೊಂಡು ಪಾಕಿಸ್ತಾನಕ್ಕೆ ಭಾರೀ ಅವಮಾನ ಮಾಡಿದ ಭಾರತದ...

    Asia Cup 2025: ಪಂದ್ಯ ಮುಗಿಯುತ್ತಿದ್ದಂತೆ ಬಾಗಿಲು ಹಾಕಿಕೊಂಡು ಪಾಕಿಸ್ತಾನಕ್ಕೆ ಭಾರೀ ಅವಮಾನ ಮಾಡಿದ ಭಾರತದ ಆಟಗಾರರು!

    ದುಬೈ: ನಿನ್ನೆ ( ಸೆಪ್ಟೆಂಬರ್‌ 14 ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ 2025ರ ಏಷ್ಯಾ ಕಪ್‌ ( Asia Cup 2025 ) ಗ್ರೂಪ್‌ ಹಂತದ 6ನೇ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ತನ್ನ ಸಾಂಪ್ರದಾಯಕ ಎದುರಾಳಿಯನ್ನು ಮಣಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 127 ರನ್‌ ಕಲೆಹಾಕಿ ಭಾರತಕ್ಕೆ 128 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ ಈ ಗುರಿಯನ್ನು 15.5 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 131 ರನ್‌ ಕಲೆಹಾಕಿತು. ಈ ಗೆಲುವಿನೊಂದಿಗೆ ಭಾರತ 4 ಅಂಕಗಳನ್ನು ಪಡೆದು ಗ್ರೂಪ್‌ ಎ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

    ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಈ ಪಂದ್ಯ ಘೋಷಣೆಯಾದ ದಿನದಿಂದಲೂ ಬಿಸಿಸಿಐ ವಿರುದ್ಧ ಭಾರತೀಯರು ಕಿಡಿಕಾರಿದ್ದರು. ಭಯೋತ್ಪಾದಕರಿಂದ ಪಹಲ್ಗಾಮ್‌ ದಾಳಿ ನಡೆದಿದೆ ಎಂಬ ಕಾರಣವನ್ನು ನೀಡಿ ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್‌ ನಡೆಯುತ್ತಿದ್ದಾಗ ಪಾಕ್‌ ಜತೆ ಆಡಲಾರೆವು ಎಂದು ಭಾರತದ ಮಾಜಿ ಆಟಗಾರರು ಹೇಳಿಕೆ ನೀಡಿ ಪಂದ್ಯದಿಂದ ಹಿಂದೆ ಸರಿದಿದ್ದರು.

    ಆದರೆ ಈಗ ಮಾತ್ರ ಭಾರತದ ಆಟಗಾರರು, ಬಿಸಿಸಿಐ, ಅಂದು ಪಂದ್ಯ ಬ್ಯಾನ್‌ ಆಗಬೇಕು ಎಂದು ಗುಡುಗಿದ್ದ ಮಾಧ್ಯಮಗಳು ಸುಮ್ಮನಿವೆ ಎಂದು ಜನರು ಪ್ರಶ್ನಿಸಿ ಈ ಪಂದ್ಯವನ್ನೂ ಸಹ ಆಡಬೇಡಿ, ಕ್ರಿಕೆಟ್‌ಗಿಂತ ದೇಶ ಮುಖ್ಯ ಎಂದಿದ್ದರು. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಬಿಸಿಸಿಐ ಏಷ್ಯಾಕಪ್‌ನಲ್ಲಿ ಭಾರತವನ್ನು ಪಾಕ್‌ ಎದುರು ಕಣಕ್ಕಿಳಿಸಿಯೇಬಿಟ್ಟಿತು.

    ಇದನ್ನು ಕೆಟ್ಟ ನಡೆ, ನಾವು ಪಂದ್ಯವನ್ನು ನೋಡುವುದಿಲ್ಲ ಎಂದು ಭಾರತ ಕ್ರಿಕೆಟ್‌ ತಂಡದ ಕೆಲ ಅಭಿಮಾನಿಗಳು ಪಂದ್ಯವನ್ನು ಬಹಿಷ್ಕರಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿಕೊಂಡಿದ್ದರು. ಅಂತಹ ದೇಶ ಪ್ರೇಮಿಗಳಿಗೆ ಇಷ್ಟವಾಗುವಂತಹ ನಡೆಯನ್ನು ಪಂದ್ಯ ಮುಗಿದ ಬಳಿಕ ಭಾರತ ತಂಡದ ಆಟಗಾರರು ತೋರಿದ್ದಾರೆ.

    ಪಂದ್ಯ ಮುಗಿಯುತ್ತಿದ್ದಂತೆ ಕಣದಲ್ಲಿದ್ದ ಶಿವಮ್‌ ದುಬೆ ಹಾಗೂ ನಾಯಕ ಸೂರ್ಯಕುಮಾರ್‌ ಯಾದವ್‌ ಎದುರಾಳಿ ಪಾಕಿಸ್ತಾನ ತಂಡದ ಆಟಗಾರರ ಕೈಕುಲುಕದೇ ಡ್ರೆಸಿಂಗ್‌ ರೂಮ್‌ಗೆ ತೆರಳಿದ್ದಾರೆ. ಅಲ್ಲದೇ ಡ್ರೆಸಿಂಗ್‌ ರೂಮ್‌ನಲ್ಲಿದ್ದ ಆಟಗಾರರೂ ಸಹ ಆಚೆ ಬರದೇ ಬಾಗಿಲು ಹಾಕಿಕೊಳ್ಳುವ ಮೂಲಕ ಕೈಕುಲುಕದೇ ಪರೋಕ್ಷವಾಗಿ ಅವಮಾನಿಸಿದ್ದಾರೆ. ಈ ಕುರಿತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಕೆಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದು ಕ್ರೀಡಾಸ್ಪೂರ್ತಿಯಲ್ಲ, ಕ್ರೀಡೆಯಲ್ಲಿ ಈ ರೀತಿಯ ವೈರತ್ವ ತರುವುದು ಒಳ್ಳೆಯ ನಡೆಯಲ್ಲ ಎಂದೂ ಸಹ ಕಾಮೆಂಟ್‌ ಮಾಡುತ್ತಿದ್ದಾರೆ.

    ಪಂದ್ಯ ಮುಗಿದ ನಂತರ ಮಾತ್ರವಲ್ಲದೇ ಟಾಸ್‌ ವೇಳೆ ಸಹ ನಾಯಕ ಸೂರ್ಯಕುಮಾರ್‌ ಯಾದವ್‌ ಪಾಕ್‌ ನಾಯಕನ ಕೈ ಕುಲುಕದೇ ಹಾಗೆಯೇ ಬಂದಿದ್ದರು.

    ಏಷ್ಯಾಕಪ್ T20: ಪಾಕ್‌ ವಿರುದ್ಧ ಭಾರತಕ್ಕೆ ಗೆಲುವಿನ ‘ಸಿಂಧೂರ 7 ವಿಕೆಟ್‌ಗಳ ಭರ್ಜರಿ ಜಯ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search