Tuesday, September 1, 2026
spot_img
More
    spot_img
    HomeLatest newsರಾಜ್ಯಕ್ಕೆ ಮಳೆ ಅಲರ್ಟ್: ಮುಂದಿನ 5 ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಗುಡುಗು, ಗಾಳಿ ಸಹಿತ...

    ರಾಜ್ಯಕ್ಕೆ ಮಳೆ ಅಲರ್ಟ್: ಮುಂದಿನ 5 ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಗುಡುಗು, ಗಾಳಿ ಸಹಿತ ಭಾರಿ ಮಳೆ!

    ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ಸಹಜ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಕರ್ನಾಟಕದ ಹವಾಮಾನ ಮುನ್ಸೂಚನೆಯನ್ನು ಪ್ರಕಟಿಸಿದ್ದು, ಮುಂದಿನ ಕೆಲವು ದಿನಗಳ ಕಾಲ ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ತಿಳಿಸಿದೆ.

    Advertisement

    ಉತ್ತರ ಒಳನಾಡಿಗೆ ಯೆಲ್ಲೋ ಅಲರ್ಟ್:

    ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಮತ್ತು ಯಾದಗಿರಿಯಲ್ಲಿ ಮುಂದಿನ ಕೆಲವು ದಿನಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಗುಡುಗು, ಮಿಂಚು ಮತ್ತು ಜೋರಾದ ಗಾಳಿ ಸಹಿತ ಮಳೆ ಬರುವ ಸಾಧ್ಯತೆ ಇದೆ.

    ಉಳಿದ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ:

    ಕರಾವಳಿ: ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಸಾಧಾರಣದಿಂದ ಮಧ್ಯಮ ಮಟ್ಟದ ಮಳೆಯಾಗುವ ಸಾಧ್ಯತೆ ಇದೆ.

    ದಕ್ಷಿಣ ಒಳನಾಡು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.ಮಲೆನಾಡು ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗದಲ್ಲಿ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.

    ಸೆಪ್ಟೆಂಬರ್ 15-17ರ ನಡುವೆ ಮಳೆಯ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆ ಇದ್ದರೂ, ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರಿಯಲಿದೆ. ಸೆಪ್ಟೆಂಬರ್ 17-19ರ ನಂತರ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಆದರೂ, ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ

    ಕರ್ನಾಟಕದ ವಿವಿಧ ನಗರಗಳಲ್ಲಿ ಇಂದು ದಾಖಲಾಗಿರುವ ಗರಿಷ್ಠ ಮತ್ತು ಕನಿಷ್ಠ ತಾಪಮಾನದ ವಿವರಗಳು ಇಲ್ಲಿವೆ.

    ಬೆಂಗಳೂರು:

    ಎಚ್‌ಎಎಲ್: ಗರಿಷ್ಠ 28.1°C, ಕನಿಷ್ಠ 20.0°C

    ನಗರ: ಗರಿಷ್ಠ 28.0°C, ಕನಿಷ್ಠ 20.4°C

    ಕೆಐಎಎಲ್: ಗರಿಷ್ಠ 28.7°C

    ಜಿಕೆವಿಕೆ: ಗರಿಷ್ಠ 27.0°C, ಕನಿಷ್ಠ 18.2°C

    ಕರಾವಳಿ ಭಾಗ:

    ಹೊನ್ನಾವರ: ಗರಿಷ್ಠ 29.0°C, ಕನಿಷ್ಠ 23.8°C

    ಕಾರವಾರ: ಗರಿಷ್ಠ 29.2°C, ಕನಿಷ್ಠ 24.0°C

    ಮಂಗಳೂರು ವಿಮಾನ ನಿಲ್ದಾಣ: ಗರಿಷ್ಠ 29.6°C, ಕನಿಷ್ಠ 23.1°C

    ಉತ್ತರ ಕರ್ನಾಟಕ:

    ಬೆಳಗಾವಿ ವಿಮಾನ ನಿಲ್ದಾಣ: ಗರಿಷ್ಠ 27.2°C, ಕನಿಷ್ಠ 19.6°C

    ಬೀದರ್: ಗರಿಷ್ಠ 26.8°C, ಕನಿಷ್ಠ 21.4°C

    ವಿಜಯಪುರ: ಗರಿಷ್ಠ 25.6°C, ಕನಿಷ್ಠ 21.4°C

    ಧಾರವಾಡ: ಗರಿಷ್ಠ 26.0°C

    ಗದಗ: ಗರಿಷ್ಠ 27.6°C, ಕನಿಷ್ಠ 20.0°C

    ಕಲಬುರಗಿ: ಗರಿಷ್ಠ 27.8°C, ಕನಿಷ್ಠ 23.0°C

    ಹಾವೇರಿ: ಗರಿಷ್ಠ 27.0°C, ಕನಿಷ್ಠ 20.4°C

    ಕೊಪ್ಪಳ: ಗರಿಷ್ಠ 28.3°C, ಕನಿಷ್ಠ 23.2°C

    ರಾಯಚೂರು: ಗರಿಷ್ಠ 31.4°C, ಕನಿಷ್ಠ 22.0°C

    ಶಕ್ತಿನಗರ: ಗರಿಷ್ಠ 31.0°C, ಕನಿಷ್ಠ 23.7°C

    ಅನರ್ಹ ಪಡಿತರ ಚೀಟಿಗಳಿಗೆ ಬಿಗ್ ಶಾಕ್: ಕರ್ನಾಟಕದಲ್ಲಿ 7.76 ಲಕ್ಷ BPL ಕಾರ್ಡ್‌ ರದ್ದು!


      Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

      Subscribe to get the latest posts sent to your email.

      Leave a Reply

      Related News

      ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

      ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

      ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

      ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

      Most Popular

      Recent Comments

      Home
      Play
      Notification
      Search

      Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

      Subscribe now to keep reading and get access to the full archive.

      Continue reading