Saturday, November 7, 2026
spot_img
More
    spot_img
    HomeLatest news8ನೇ ವೇತನ ಆಯೋಗ: ಸರ್ಕಾರಿ ನೌಕರರ ವೇತನ ಏರಿಕೆ ಲೆಕ್ಕಾಚಾರ

    8ನೇ ವೇತನ ಆಯೋಗ: ಸರ್ಕಾರಿ ನೌಕರರ ವೇತನ ಏರಿಕೆ ಲೆಕ್ಕಾಚಾರ

    8ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದೆ. ಶೀಘ್ರದಲ್ಲೇ ವೇತನ ಆಯೋಗದ ವರದಿ ನಿರೀಕ್ಷೆ ಮಾಡಲಾಗಿದ್ದು, ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಾಗಲಿದೆ. ಸುಮಾರು 50 ಲಕ್ಷ ನೌಕರರು, 65 ಲಕ್ಷ ಪಿಂಚಣಿದಾರರಿಗೆ ಇದು ಅನುಕೂಲ ಮಾಡಿಕೊಡಲಿದೆ.

    ವೇತನ ಆಯೋಗದ ವರದಿ ಅನುಷ್ಠಾನದಲ್ಲಿ ಫಿಟ್‌ಮೆಂಟ್ ಅಂಶ ಪ್ರಮುಖ ಪಾತ್ರವಹಿಸಲಿದೆ. 1.96ರಷ್ಟು ಫಿಟ್‌ಮೆಂಟ್‌ನಿಂದ ಕನಿಷ್ಠ ವೇತನ ಎರಡರಷ್ಟಾಗಲಿದೆ. ಡಿಎ ಹೆಚ್ಚಳ, ಹೆಚ್‌ಆರ್‌ಎ ಸೇರಿದರೆ ನೌಕರರ ವೇತನ ಇನ್ನಷ್ಟು ಏರಿಕೆಯಾಗಲಿದೆ.

    ಕೇಂದ್ರ ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ ಭಾರೀ ಬೇಡಿಕೆಯ 8ನೇ ವೇತನ ಆಯೋಗ ನೌಕರರ ವೇತನದಲ್ಲಿ ಭಾರೀ ಬದಲಾವಣೆ ತರಲಿದೆ. 8ನೇ ವೇತನ ಆಯೋಗದ ಪೂರ್ಣ ಅನುಷ್ಠಾನವನ್ನು ಸರ್ಕಾರ 2027ರ ತನಕ ಮುಂದೂಡಿಕೆ ಮಾಡುವ ನಿರೀಕ್ಷೆಯೂ ಇದೆ.

    ಸುಮಾರು 50 ಲಕ್ಷ ಸರ್ಕಾರಿ ನೌಕರರು, 65 ಲಕ್ಷ ಪಿಂಚಣಿದಾರರು 8ನೇ ವೇತನ ಆಯೋಗದ ವರದಿ ಜಾರಿಗೊಂಡರೆ ಪೂರ್ವಾನ್ವಯವಾಗುವಂತೆ ವೇತನ ಹೆಚ್ಚಳವನ್ನು ಪಡೆಯಲಿದ್ದಾರೆ.

    ಫಿಟ್‌ಮೆಂಟ್ ಎಂದರೇನು?; ಫಿಟ್‌ಮೆಂಟ್ ಆಧಾರದ ಮೇಲೆಯೇ 8ನೇ ವೇತನ ಆಯೋಗದ ಹೊಸ ಮೂಲ ವೇತನ ಏರಿಕೆ ಲೆಕ್ಕಾಚಾರ ಹಾಕಲಾಗುತ್ತದೆ. 6ನೇ ವೇತನ ಆಯೋಗದಲ್ಲಿ ಕನಿಷ್ಠ ಮೂಲ ವೇತನ 7000 ರೂ. ಇತ್ತು. 7ನೇ ವೇತನ ಆಯೋಗದ ಸಮಯದಲ್ಲಿ 2.57ರ ಫಿಟ್‌ಮೆಂಟ್ ನೀಡಲಾಯಿತು. ಆಗ ಕನಿಷ್ಠ ಮೂಲ ವೇತನ 18,000 ರೂ. ಆಗಿದೆ. ವರದಿಗಳ ಪ್ರಕಾರ 8ನೇ ವೇತನ ಆಯೋಗ 1.92 ರಿಂದ 2.86ರಷ್ಟು ಫಿಟ್‌ಮೆಂಟ್ ನೀಡಲಿದೆ ಅಂದರೆ ಅಥವ 1.96ರಷ್ಟು ನೀಡುವ ಸಾಧ್ಯತೆ ಇದೆ.

    8ನೇ ವೇತನ ಆಯೋಗ 1.96ರಷ್ಟು ಫಿಟ್‌ಮೆಂಟ್ ನೀಡಿದರೆ ಲೆವೆಲ್-1 ನೌಕರರಿಗೆ ಕನಿಷ್ಠ ಮೂಲ ವೇತನ 18,000 ದಿಂದ 35,280 ರೂ. ಆಗಲಿದೆ. ಆದರೆ ಇದು ಡಿಎ, ಹೆಚ್‌ಆರ್‌ಎ ಹೊರತುಪಡಿಸಿ. ಇದನ್ನು ಯಾವ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ? ಎಂಬ ಅಂಶದ ಮೇಲೆ ಸೇರಿಸಲಾಗುತ್ತದೆ.

    ನೌಕರರು Old Basic Salary x 1.96 = Basic Salary 8ನೇ ವೇತನ ಆಯೋಗದಡಿ ಸೂತ್ರದ ಮೇಲೆ ತಮ್ಮ ಮೂಲ ವೇತನ ಎಷ್ಟು ಏರಿಕೆಯಾಗಲಿದೆ? ಎಂದು ಲೆಕ್ಕಾಚಾರ ಹಾಕಬಹುದು. ಲೆವೆಲ್‌-1 ರಿಂದ ಲೆವೆಲ್-18ರ ತನಕ ಈ ಸೂತ್ರ ಅನ್ವಯವಾಗಲಿದೆ.

    ವೇತನ ಏರಿಕೆ ಲೆಕ್ಕಾಚಾರ: 8ನೇ ವೇತನ ಆಯೋಗದ ಅಡಿ ಲೆವೆಲ್-9ರ ಕೇಂದ್ರ ಸರ್ಕಾರಿ ನೌಕರರ ವೇತನ ಲೆಕ್ಕಾಚಾರ ಹೀಗಿದೆ

    ಪ್ರಸ್ತುತ ಮೂಲ ವೇತನ: 53,100
    ಪ್ರಸ್ತುತ ಡಿಎ: 30,789
    ಮೆಟ್ರೋ ಸಿಟಿ ಹೆಚ್‌ಆರ್‌ಎ (ದೆಹಲಿ): 14,337
    ಒಟ್ಟು ವೇತನ (ಡಿಎ, ಹೆಚ್‌ಆರ್‌ಎ ಸೇರಿ): 98,235 ರೂ.ಗಳು.

    8ನೇ ವೇತನ ಆಯೋಗದ ವರದಿ ಬಳಿಕ

    ಮೂಲ ವೇತನ: ರೂ. 1,04,076
    ಡಿಎ 0% = Rs 0
    ಹೆಚ್‌ಆರ್‌ಎ (27% ಮೂಲ ವೇನತ): ರೂ. 28,100.52
    ಒಟ್ಟು ವೇತನ: ರೂ. 1,32,177


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search