ಸದ್ಯ ಭಾರತದಾದ್ಯಂತ ಸಿನಿಮಾ ವಿಚಾರವಾಗಿ ಕೇಳಿಬರುತ್ತಿರುವುದು ಒಂದೇ ಚಿತ್ರದ ಹೆಸರು. ಅದುವೇ ಕನ್ನಡ ನೆಲದ ಚಿತ್ರ ಕಾಂತಾರ ಚಾಪ್ಟರ್ 1ನದ್ದು.
ಕೇವಲ ಕನ್ನಡ ಮಾತ್ರವಲ್ಲದೇ ನೆರೆಯ ಕೇರಳ, ತೆಲುಗು ರಾಜ್ಯಗಳು, ತಮಿಳುನಾಡು ಹಾಗೂ ಹಿಂದಿ ರಾಜ್ಯಗಳಲ್ಲಿಯೂ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕಾಂತಾರ ಚಾಪ್ಟರ್ 1 ಭಾರತ ಬಾಕ್ಸ್ ಆಫೀಸ್ನಲ್ಲಿ 12 ದಿನಗಳಲ್ಲಿ 600 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಸದ್ಯ ಕರ್ನಾಟಕ ಬಾಕ್ಸ್ ಆಫೀಸ್ನಲ್ಲಿ 190 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ರಾಜ್ಯದ ನೂತನ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿರುವ ಕಾಂತಾರ ಚಾಪ್ಟರ್ 1 ತೆಲುಗು ರಾಜ್ಯಗಳಲ್ಲೂ ಸಹ 100 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ತೆಲುಗು ರಾಜ್ಯಗಳಲ್ಲಿ 100 ಕೋಟಿ ಗಳಿಸಿದ ಎರಡನೇ ತೆಲುಗು ಡಬ್ ಚಿತ್ರ ಎಂಬ ದಾಖಲೆಯನ್ನು ಚಿತ್ರ ಬರೆದಿದೆ.
ಈ ಕುರಿತು ಟ್ರ್ಯಾಕ್ ಟಾಲಿವುಡ್ ಎಂಬ ಬಾಕ್ಸ್ಆಫೀಸ್ ಪರಿಣಿತರ ಎಕ್ಸ್ ಖಾತೆಯೊಂದು ಟ್ವೀಟ್ ಮಾಡಿದ್ದು, ಕೆಜಿಎಫ್ ಚಾಪ್ಟರ್ 2 ಬಳಿಕ ಕನ್ನಡದ ಮತ್ತೊಂದು ತೆಲುಗು ಡಬ್ ಚಿತ್ರ ಕಾಂತಾರ ಇದೀಗ ನಮ್ಮ ರಾಜ್ಯಗಳಲ್ಲಿ 100 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ತೆಲುಗು ರಾಜ್ಯಗಳಲ್ಲಿ ತಮಿಳು ಚಿತ್ರಗಳ ಅಬ್ಬರವನ್ನು ಹತ್ತಿಕ್ಕಿವೆ ಎಂದು ಬರೆದುಕೊಂಡಿದೆ.
ಈ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ತೆಲುಗು ರಾಜ್ಯಗಳಲ್ಲಿ 100 ಕೋಟಿ ಗಳಿಸಿದ ಮಾತ್ರಕ್ಕೆ ಅದೊಂದು ದೊಡ್ಡ ಸಾಧನೆಯಲ್ಲ ಎಂದಿದ್ದಾರೆ. ಇನ್ನೂ ಕೆಲವರು ತೆಲುಗು ಜನರು ಕಲಾವಿದರು ಯಾರೆಂದು ನೋಡುವುದಿಲ್ಲ, ಚಿತ್ರದ ಕಂಟೆಂಟ್ ಚೆನ್ನಾಗಿದ್ದರೆ ಈ ರೀತಿ ಯಶಸ್ಸು ನೀಡಲಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ನಾನು ಮಾತನಾಡಿದರೆ ವಿವಾದ ಸೃಷ್ಟಿಯಾಗುತ್ತೆ; ತಂಡಕ್ಕೆ ಆಯ್ಕೆ ಮಾಡದ ಬಿಸಿಸಿಐ ರಾಜಕೀಯ ಬಿಚ್ಚಿಟ್ಟ ಮೊಹಮ್ಮದ್ ಶಮಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


