ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿದ್ದು, 3 ಏಕದಿನ ಪಂದ್ಯ ಹಾಗೂ 5 ಟಿ20 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
ಬಲಿಷ್ಠ ಆಸೀಸ್ ತಂಡವನ್ನು ಅವರ ತವರಿನಲ್ಲಿ ಬಗ್ಗುಬಡಿಯಬೇಕೆಂದರೆ ಈ ಹಿಂದಿನ ಸರಣಿಯಲ್ಲಿ ಕಣಕ್ಕಿಳಿದ ಭಾರತ ತಂಡವನ್ನು ಕಣಕ್ಕಿಳಿಸಿದರೆ ಆಗದ ಕೆಲಸ ಎಂಬುದನ್ನು ಅರಿತ ಬಿಸಿಸಿಐ ಈ ಪ್ರವಾಸಕ್ಕೆ ವಿಭಿನ್ನ ತಂಡವನ್ನೇ ಪ್ರಕಟಿಸಿದೆ.
ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ರೀತಿಯ ದಿಗ್ಗಜರೇ ಮರಳಿದ್ದು, ಇದು ತಂಡಕ್ಕೆ ಬಲವನ್ನು ತಂದಂತಾಗಿದೆ.
ಆದರೆ ಈ ಪ್ರವಾಸಕ್ಕೆ ಈ ಹಿಂದೆ ಇದ್ದ ಎಲ್ಲ ಹಿರಿಯ ಆಟಗಾರರಿಗೂ ಅವಕಾಶ ನೀಡಿಲ್ಲ ಎಂಬ ಟೀಕೆ ಹುಟ್ಟಿಕೊಂಡಿತ್ತು. ಅದರಲ್ಲೂ ಮೊಹಮ್ಮದ್ ಶಮಿ ರೀತಿಯ ನುರಿತ ಬೌಲರ್‌ಗೆ ಅವಕಾಶ ನೀಡದೇ ಇದ್ದದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಈ ಕುರಿತು ಇದೀಗ ಸ್ವತಃ ಮೊಹಮ್ಮದ್ ಶಮಿ ಮಾತನಾಡಿದ್ದು, ʼನಾನು ಮೊದಲೇ ಹೇಳಿದ ಹಾಗೆ ಭಾರತ ತಂಡಕ್ಕೆ ಆಯ್ಕೆಯಾಗುವುದು ನನ್ನ ಕೈನಲ್ಲಿಲ್ಲ. ಫಿಟ್‌ನೆಸ್ ಸಮಸ್ಯೆ ಇದ್ದಿದ್ದರೆ, ನಾನು ಹೇಗೆ ಬಂಗಾಳ ಪರ ರಣಜಿ ಆಡುತ್ತಿದ್ದೆ?ʼ ಎಂದು ಪ್ರಶ್ನಿಸಿದರು. ಅಲ್ಲದೇ ʼನಾನು ಇದರ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಲು ಇಷ್ಟಪಡುವುದಿಲ್ಲ. ನಾನು 4 ದಿನಗಳ ಕಾಲ ನಡೆಯುವ ರಣಜಿ ಟ್ರೋಫಿ ಪಂದ್ಯವನ್ನು ಆಡಲು ಸಮರ್ಥನಿದ್ದೇನೆ ಎಂದರೆ 50 ಓವರ್‌ಗಳ ಏಕದಿನ ಪಂದ್ಯವನ್ನೂ ಸಹ ಆಡಲು ಸಿದ್ಧನಿದ್ದೇನೆʼ ಎಂದು ತಿಳಿಸಿದ ಶಮಿ ಬಿಸಿಸಿಐ ಒಳ ರಾಜಕೀಯವನ್ನು ಪರೋಕ್ಷವಾಗಿ ಬಿಚ್ಚಿಟ್ಟರು.
ಇನ್ನು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಶ್ರಮಿಸುವುದು, ಫಿಟ್‌ನೆಸ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳುವುದಷ್ಟೇ ನನ್ನ ಕೆಲಸ. ನನ್ನ ಫಿಟ್‌ನೆಸ್ ಬಗ್ಗೆ ಅಪ್‌ಡೇಟ್ ಕೊಡುವುದು ನನ್ನ ಕೆಲಸವಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ ಶಮಿ ಫಿಟ್‌ನೆಸ್‌ನಲ್ಲಿ ತಾನು ಸರಿಯಿದ್ದು ಬಿಸಿಸಿಐ ಅದನ್ನು ಪರಿಗಣಿಸಿಲ್ಲ ಎಂಬುದನ್ನು ತಿಳಿಸಿದರು. ಅಲ್ಲದೇ ಆಯ್ಕೆ ಮಾಡದಿದ್ದರೆ ಸಮಸ್ಯೆ ಏನಿಲ್ಲ ನಾನಿಲ್ಲಿ ಬಂದು ಬಂಗಾಳದ ಪರ ರಣಜಿ ಟ್ರೋಫಿಯನ್ನಾಡುತ್ತೇನೆ ಎಂದು ಶಮಿ ಕೌಂಟರ್ ಕೊಟ್ಟಿದ್ದಾರೆ.
ವಿದ್ಯೆ ಮತ್ತು ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ, ಅವಕಾಶ ಸಿಗಬೇಕು ಅಷ್ಟೆ: ಸಿದ್ದರಾಮಯ್ಯ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


