ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದ ಪತ್ರ ಸದ್ಯ ಭಾರೀ ವಿವಾದವನ್ನು ಎಬ್ಬಿಸಿದೆ.
ಆರ್‌ಎಸ್‌ಎಸ್ ಕುರಿತು ಪತ್ರ ಬರೆಯುತ್ತಿದ್ದಂತೆ ಬಿಜೆಪಿ ನಾಯಕರು ರೊಚ್ಚಿಗೆದ್ದಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದ್ದಕ್ಕೆ ಕೇವಲ ರಾಜಕೀಯವಾಗಿ ಮಾತ್ರವಲ್ಲದೇ ವೈಯಕ್ತಿಕವಾಗಿ ಸಹ ಟೀಕೆಗಳು ಬರತೊಡಗಿದ್ದು, ಜೀವ ಬೆದರಿಕೆ ಸಹ ಬಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತಾಗಿ ಸಾಮಾಜಿಕ ಜಾಲತಾಣದ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಹಂಚಿಕೊಂಡಿರುವ ದಿನೇಶ್ ಗುಂಡೂರಾವ್ ʼಶಾಲಾ ಕಾಲೇಜು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ RSS ಚಟುವಟಿಕೆಗೆ ಅವಕಾಶ ಕೊಡಬಾರದು ಎಂಬ ನನ್ನ ಸಹದ್ಯೋಗಿ ಮಿತ್ರ
ಪ್ರಿಯಾಂಕ್ ಖರ್ಗೆಗೆ ಪತ್ರಕ್ಕೆ ಅಂಧ ಭಕ್ತರು ಜೀವ ಬೆದರಿಕೆ ಒಡ್ಡಿದ್ದಾರೆ. ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದವರನ್ನು ಕೊಲ್ಲುವುದಾಗಿ ಹೇಳಿದ್ದಾರೆʼ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ಈ ರೀತಿ ಬೆದರಿಕೆ ಹಾಕುತ್ತಿರುವ ಅಂಧಭಕ್ತರದ್ದು ತಾಲಿಬಾನ್ ಮನಸ್ಥಿತಿ ಎಂದಿರುವ ದಿನೇಶ್ ಗುಂಡೂರಾವ್ ಆರ್‌ಎಸ್‌ಎಸ್ ಒಂದು ಜೀವ ಮುಖಿ ಸಂಘಟನೆಯಾಗಿದ್ದರೆ ಅವರೇಕೆ ಜೀವ ಬೆದರಿಕೆ ಹಾಕುತ್ತಾರೆ ಎಂದಿದ್ದಾರೆ. ಇನ್ನು ಪಾನ್ಸೋರೆ, ಗೌರಿ ಲಂಕೇಶ್ ಹಾಗೂ ಕಲಬುರಗಿಯವರ ಹತ್ಯೆಯಲ್ಲೇಕೆ ನೇರವಾಗಿ ಭಾಗಿಯಾಗುತ್ತಾರೆ, ಗಾಂಧಿಯನ್ನು ಕೊಂದ ಕೊಲೆಗಾರ ಗೂಡ್ಸೆಯನ್ನೇಕೆ ಆರಾಧಿಸುತ್ತಾರೆ? ಎಂದು ಕಾಲೆಳೆದಿದ್ದಾರೆ.
ಆರ್‌ಎಸ್‌ಎಸ್‌ನವರು ಗೂಡ್ಸೆ ಪರ ನಿಂತಿದ್ದು, ಗಾಂಧಿ ತತ್ವಕ್ಕೆ ಸಾವು ಬಂದಿಲ್ಲ. ಹಾಗೆಯೇ ಪಾನ್ಸೋರೆ, ಗೌರಿ ಲಂಕೇಶ್ ಹಾಗೂ ಕಲಬುರಗಿಯವರ ತತ್ವ ಸಿದ್ಧಾಂತಕ್ಕೂ ಸಹ ಸಾವು ಬಂದಿಲ್ಲ ಎಂದರು. ಸೈದಾಂತಿಕವಾಗಿ ಗಟ್ಟಿಯಿದ್ದಾಗ ಯಾವ ಗೊಡ್ಡು ಬೆದರಿಕೆಗಳು ಅಡ್ಡಿಯಾಗುವುದಿಲ್ಲ, ನಾನು ಪ್ರಿಯಾಂಕ್ ಖರ್ಗೆ ಪರ ನಿಲ್ಲುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಯುವಜನತೆಯಲ್ಲಿ ಇ-ಸಿಗರೇಟ್ ಬಳಕೆ ಹೆಚ್ಚಳ:WHO ವರದಿಯಲ್ಲಿ ಶಾಕಿಂಗ್ ಸಂಗತಿ ಬಹಿರಂಗ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


