Sunday, July 5, 2026
spot_img
More
    spot_img
    HomeCrimeಬೆಂಗಳೂರು | ಪತಿಯೂ ಡಾಕ್ಟರ್‌, ಪತ್ನಿಯೂ ಡಾಕ್ಟರ್‌: ಮದುವೆಯಾದ 11 ತಿಂಗಳಿಗೆ ಪತ್ನಿ ಸಾವು; 6...

    ಬೆಂಗಳೂರು | ಪತಿಯೂ ಡಾಕ್ಟರ್‌, ಪತ್ನಿಯೂ ಡಾಕ್ಟರ್‌: ಮದುವೆಯಾದ 11 ತಿಂಗಳಿಗೆ ಪತ್ನಿ ಸಾವು; 6 ತಿಂಗಳ ಬಳಿಕ ಸಿಕ್ಕಿಬಿದ್ದ ಪತಿ!

    ಬೆಂಗಳೂರು: ಜೀವ ಉಳಿಸಬೇಕಾದ ವೈದ್ಯ ತನ್ನ ಪತ್ನಿಯನ್ನು ವೃತ್ತಿಯನ್ನುಪಯೋಗಿಸಿಕೊಂಡು ಕೊಲೆ ಮಾಡಿರುವ ಘಟನೆ ನಗರವನ್ನು ಬೆಚ್ಚಿ ಬೀಳಿಸಿದೆ.

    Advertisement

    ಡಾ. ಮಹೇಂದ್ರ ರೆಡ್ಡಿ ಎಂಬಾತ ತನ್ನ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಡಾ. ಕೃತಿಕಾ ರೆಡ್ಡಿಯನ್ನು ಮದುವೆಯಾದ 11 ತಿಂಗಳ ಬಳಿಕ ಕೊಲೆ ಮಾಡಿರುವುದು ಆಕೆ ಸಾವನ್ನಪ್ಪಿದ 6 ತಿಂಗಳ ಬಳಿಕ ಬೆಳಕಿಗೆ ಬಂದಿದೆ.

    ಇನ್ನು 2024ರ ಮೇ ತಿಂಗಳ 5ರಂದು ಮಹೇಂದ್ರ ರೆಡ್ಡಿ ಹಾಗೂ ಕೃತಿಕಾ ರೆಡ್ಡಿ ಸಪ್ತಪದಿ ತುಳಿದಿದ್ದರು. ಆದರೆ ವಿವಾಹವಾಗಿ 11 ತಿಂಗಳು ಕಳೆದ ಬಳಿಕ ಕೃತಿಕಾ ತನ್ನ ತಂದೆಯ ಮನೆಯಲ್ಲಿದ್ದಾಗಲೇ ಕೊನೆಯುಸಿರೆಳೆದಿದ್ದರು. ಆ ಸಂದರ್ಭದಲ್ಲಿ ಇದೊಂದು ಸಹಜ ಸಾವು ಎಂದು ಮೇಲ್ನೋಟಕ್ಕೆ ಕಂಡುಬಂದಿತ್ತಾದರೂ ಇದೀಗ ಎಫ್‌ಎಸ್‌ಎಲ್‌ ವರದಿಯಲ್ಲಿ ಪತಿಯೇ ಪತ್ನಿಗೆ ಇಂಜೆಕ್ಷನ್‌ ನೀಡಿ ಕೊಲೆ ಮಾಡಿರುವುದು ಗೊತ್ತಾಗಿದೆ.

    ಮಹೇಂದ್ರ ರೆಡ್ಡಿ ತನ್ನ ವೈದ್ಯಕೀಯ ಬುದ್ದಿ ಬಳಸಿ ಈ ಕೊಲೆ ಮಾಡಿದ್ದು, ಕೊಲೆಗೆ ಕಾರಣ ಕೃತಿಕಾಗಿದ್ದ ಅನಾರೋಗ್ಯ ಸಮಸ್ಯೆ ಎಂಬುದು ತಿಳಿದುಬಂದಿದೆ. ಕೃತಿಕಾ ರೆಡ್ಡಿಗೆ ಅಜೀರ್ಣ, ಗ್ಯಾಸ್ಟ್ರಿಕ್‌ ಮತ್ತು ಲೋ ಶುಗರ್‌ ಇತ್ತು ಎಂಬ ವಿಷಯವನ್ನು ಮದುವೆಯಾದ ಬಳಿಕ ಮನಗಂಡ ಪತ್ನಿ ಮಹೇಂದ್ರ ರೆಡ್ಡಿ ಈ ಕೃತ್ಯ ಎಸಗಿದ್ದಾನೆ.

    ಇನ್ನು ಕೃತಿಕಾ ರೆಡ್ಡಿ ಮರಣ ಹೊಂದಿದ ಸಂದರ್ಭದಲ್ಲಿ ಆಕೆಯ ಮರಣೋತ್ತರ ಪರೀಕ್ಷೆ ಮಾಡಲು ಪೊಲೀಸರು ಮುಂದಾದಾಗ ಸ್ವತಃ ಪೋಷಕರೇ ಅದನ್ನು ವಿರೋಧಿಸಿದ್ದರು. ಈಗಾಗಲೇ ಅನಾರೋಗ್ಯದಿಂದ ಬಳಲಿದ್ದ ಮಗಳ ದೇಹವನ್ನು ಕೊಯ್ಯುವುದು ತಮಗೆ ಇಷ್ಟವಿಲ್ಲ ದೇಹವನ್ನು ತಮಗೆ ಹಸ್ತಾಂತರಿಸಿ ಎಂದು ಕೇಳಿಕೊಂಡಿದ್ದರು. ಆದರೆ ಕೆಲ ಅನುಮಾನಗಳಿವೆ ಎಂದಿದ್ದ ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ಮಾಡಲೇಬೇಕು, ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಪೋಷಕರನ್ನು ಒಪ್ಪಿಸಿದ್ದರು.

    ಮರಣೋತ್ತರ ಪರೀಕ್ಷೆ ಮುಗಿದ ಆರು ತಿಂಗಳ ಬಳಿಕ ಇದೀಗ ಎಫ್‌ಎಸ್‌ಎಲ್‌ ವರದಿ ಬಂದಿದ್ದು, ಪತಿ ಮಹೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರ್‌ಎಸ್‌ಎಸ್‌ಗೆ ಅವಕಾಶ ನೀಡಬಾರದು ಎಂದ ಪ್ರಿಯಾಂಕ್‌ ಖರ್ಗೆಗೆ ಅಂಧ ಭಕ್ತರಿಂದ ಜೀವ ಬೆದರಿಕೆ: ದಿನೇಶ್‌ ಗುಂಡೂರಾವ್‌


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

    ಕ್ಯಾಪ್‌ಜೆಮಿನಿ ಕ್ಯಾಂಪಸ್‌ನ ಡೇ ಕೇರ್‌ನಲ್ಲಿ ಪುಟ್ಟ ಮಕ್ಕಳಿಗೆ ಹಿಂಸೆ ನೀಡಿದ ಆರೋಪದ ವಿಡಿಯೊ ವೈರಲ್; ಐವರು ಮಹಿಳಾ ಆರೈಕೆದಾರರ ವಿರುದ್ಧ ಪ್ರಕರಣ ದಾಖಲು.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading