Monday, August 3, 2026
spot_img
More
    spot_img
    HomeEntertainment45 ಚಿತ್ರದ ಟ್ರೈಲರ್ ಬಿಡುಗಡೆ: ಮಹಿಳೆ ವೇಷದಲ್ಲಿ ಮಿಂಚಿದ ಶಿವಣ್ಣ; ಸಿನಿ ರಸಿಕರ ಹುಚ್ಚೆಬ್ಬಿಸಿದ ಟ್ರೈಲರ್...

    45 ಚಿತ್ರದ ಟ್ರೈಲರ್ ಬಿಡುಗಡೆ: ಮಹಿಳೆ ವೇಷದಲ್ಲಿ ಮಿಂಚಿದ ಶಿವಣ್ಣ; ಸಿನಿ ರಸಿಕರ ಹುಚ್ಚೆಬ್ಬಿಸಿದ ಟ್ರೈಲರ್ ದೃಶ್ಯಗಳು

    ಡಿಸೆಂಬರ್ ಆಗಮನವಾಗುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳ ಹಾವಳಿ ಜೋರಾಗಿದೆ. ಕಳೆದ ವಾರವಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಬಿಡುಗಡೆಯಾಗಿದ್ದು, ತಿಂಗಳ ಕೊನೆಯ ವಾರದಲ್ಲಿ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಮತ್ತು ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 45 ಚಿತ್ರ ಬಿಡುಗಡೆಯಾಗಲಿದೆ.

    Advertisement

    ಈ ಎರಡೂ ಚಿತ್ರಗಳೂ ಡಿಸೆಂಬರ್ 25ರಂದು ಕ್ರಿಸ್‌ಮಸ್‌ ದಿನದಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದ್ದು, ಚಿತ್ರತಂಡಗಳು ಚಿತ್ರಗಳ ಟ್ರೈಲರ್ ಬಿಡುಗಡೆ ಮಾಡಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುವ ಕೆಲಸವನ್ನು ಮಾಡಿವೆ.

    ಇಂದು ( ಡಿಸೆಂಬರ್ 15 ) 45 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಕಟ್ ವಿಭಿನ್ನವಾಗಿದೆ. ಸಂಗೀತ ನಿರ್ದೆಶಕ ಅರ್ಜುನ್ ಜನ್ಯ ನಿರ್ದೇಶನವಿರುವ ಈ ಚಿತ್ರ ಟ್ರೈಲರ್ ವೀಕ್ಷಿಸಿದ ಸಿನಿ ರಸಿಕರಿಗೆ ಉಪೇಂದ್ರ ಚಿತ್ರಗಳ ಶೈಲಿಯ ಅನುಭವವನ್ನು ನೀಡಿದೆ.

    ಘೋರಿ ಮೇಲೆ ಬರೆಯುವ ಜನನ ಹಾಗೂ ಮರಣದ ನಡುವೆ ಇರುವ ಒಂದು ಸಣ್ಣ ಡ್ಯಾಶ್ ಮನುಷ್ಯನ ಜೀವನ ಎಂಬ ಗಮನ ಸೆಳೆಯುವ ಡೈಲಾಗ್ ಮೂಲಕ ಆರಂಭವಾಗುವ ಟ್ರೈಲರ್‌ನಲ್ಲಿ ಅರ್ಜುನ್ ಜನ್ಯ ಎಲ್ಲಿಯೂ ಚಿತ್ರದ ಕಥೆಯನ್ನು ಬಿಟ್ಟುಕೊಟ್ಟಿಲ್ಲ.

    ರಾಜ್ ಬಿ ಶೆಟ್ಟಿ ಯೋಜನೆಯೊಂದರಲ್ಲಿ ಸಿಲುಕಿ ಅದರ ಒತ್ತಡಕ್ಕೆ ಸಿಲುಕಿ ಅವಾಂತರಗಳನ್ನು ಮಾಡಿಕೊಳ್ಳುವ ದೃಶ್ಯವಿದ್ದು, ಉಪೇಂದ್ರ ಹಾಗೂ ಶಿವಣ್ಣ ಗ್ಯಾಂಗ್‌ ಲೀಡರ್‌ಗಳ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಯುದ್ಧ ಶಸ್ತ್ರಾಸ್ತ್ರಗಳಿರುವ ಯುದ್ಧ ಭೂಮಿ, ಹೊಡೆದಾಡುವ ಜನರ ಗುಂಪಿನ ದೃಶ್ಯಗಳನ್ನು ಟ್ರೈಲರ್‌ನಲ್ಲಿ ತೋರಿಸಿರುವ ಅರ್ಜುನ್ ಜನ್ಯ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪಾತ್ರಗಳ ಬಗ್ಗೆ ಗೌಪ್ಯತೆಯನ್ನು ಬಿಟ್ಟುಕೊಟ್ಟಿಲ್ಲ.

    ಟ್ರೈಲರ್‌ನಲ್ಲಿ ಒಂದಷ್ಟು ಕಡೆ ವಿಎಫ್‌ಎಕ್ಸ್ ಇನ್ನೂ ಚೆನ್ನಾಗಿ ಇರಬೇಕಿತ್ತು ಎನಿಸುವಂತಿದೆ. ಟ್ರೈಲರ್‌ನ ಅಂತಿಮ ದೃಶ್ಯದಲ್ಲಿ ಶಿವಣ್ಣ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡಿದ್ದು, ಇದು ಪ್ರೇಕ್ಷಕರ ಪಾಲಿಗೆ ಅನಿರೀಕ್ಷಿತವೆನಿಸಿದೆ ಹಾಗೂ ಭಾರೀ ಕುತೂಹಲವನ್ನನೂ ಸಹ ಮೂಡಿಸಿದೆ. ಒಟ್ಟಿನಲ್ಲಿ ಟ್ರೈಲರ್ ಕನ್ನಡ ಸಿನಿ ರಸಿಕರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಟ್ರೈಲರ್ ನೋಡಿ ಬಂದ ಎಕ್ಸ್ ಬಳಕೆದಾರರು ಈ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಲೇಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading