Tuesday, November 3, 2026
spot_img
More
    spot_img
    HomeLatest newsಇಂಡಿಗೊ ವಿಮಾನದಲ್ಲಿ ಸಿಲುಕಿದ್ದ ಕರ್ನಾಟಕದ 21 ಶಾಸಕರು, 7 ಸಚಿವರು

    ಇಂಡಿಗೊ ವಿಮಾನದಲ್ಲಿ ಸಿಲುಕಿದ್ದ ಕರ್ನಾಟಕದ 21 ಶಾಸಕರು, 7 ಸಚಿವರು

    ನವದೆಹಲಿ: ದೆಹಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7 ಸಚಿವರು ಇಂಡಿಗೋ ವಿಮಾನದಲ್ಲೇ ಸಿಲುಕಿರುವ ಘಟನೆ ನಡೆದಿದೆ.

    ಶಾಸಕರ ವಿಮಾನ ಬೆಳಗ್ಗೆ 5:30ಕ್ಕೆ ದೆಹಲಿಯಿಂದ ಹೊರಡಬೇಕಿತ್ತು. ವಿಮಾನದ ಒಳಗಡೆ ಕುಳಿತುಕೊಂಡ ಬಳಿಕ ದಟ್ಟವಾದ ಹೊಗೆಯಿಂದಾಗಿ ವಿಮಾನ ಟೇಕಾಫ್ ಆಗಲಿಲ್ಲ.ಸುಮಾರು 4 ಗಂಟೆಯಿಂದ ಶಾಸಕರು ವಿಮಾನದಲ್ಲೇ ಕುಳಿತ್ತಿದ್ದರು.ಬೆಳಗ್ಗೆ 10 ಗಂಟೆಯಾದರೂ ವಿಮಾನ ಟೇಕಾಫ್ ಆಗಿಲ್ಲ. ವಿಮಾನ ಎಷ್ಟು ಗಂಟೆಗೆ ಟೇಕಾಫ್ ಆಗಲಿದೆ ಎಂಬ ಮಾಹಿತಿಯನ್ನು ಸಿಬ್ಬಂದಿ ನೀಡಿಲ್ಲ. ದೆಹಲಿಯಲ್ಲಿ ಹವಾಮಾನ ವೈಪರೀತ್ಯದಿಂದ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್‍ಗೆ ಸಮಸ್ಯೆಯಾಗಿದೆ.

    ಮಾಹಿತಿಯ ಪ್ರಕಾರ, ಈ ವಿಮಾನ ಬೆಳಗ್ಗೆ 5.30ಕ್ಕೆ ದೆಹಲಿಯಿಂದ ಟೇಕ್‍ಆಫ್ ಆಗಬೇಕಿತ್ತು. ಆದರೆ ವಿಮಾನದಲ್ಲಿ ಪ್ರಯಾಣಿಕರು ಕುಳಿತ ನಂತರವೇ ದೆಹಲಿಯಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದ್ದು, ಇದರಿಂದ ವಿಮಾನ ಹಾರಾಟಕ್ಕೆ ಅನುಮತಿ ಲಭ್ಯವಾಗಿಲ್ಲ. ಪರಿಣಾಮವಾಗಿ, ಬೆಳಗ್ಗೆ 10 ಗಂಟೆಯಾದರೂ ವಿಮಾನ ಟೇಕ್‍ಆಫ್ ಆಗಲಿಲ್ಲ.

    ಸುಮಾರು ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಶಾಸಕರು ಮತ್ತು ಸಚಿವರು ವಿಮಾನದಲ್ಲೇ ಕುಳಿತು ಕಾಯುವಂತಾಯಿತು. ವಿಮಾನ ಸಿಬ್ಬಂದಿಯಿಂದ ಸ್ಪಷ್ಟ ಮಾಹಿತಿಯ ಕೊರತೆಯೂ ಅಸಮಾಧಾನಕ್ಕೆ ಕಾರಣವಾಗಿದೆ. “ವಿಮಾನ ಯಾವಾಗ ಟೇಕ್‍ಆಫ್ ಆಗುತ್ತದೆ ಎಂಬುದರ ಬಗ್ಗೆ ಸಿಬ್ಬಂದಿ ಯಾವುದೇ ಖಚಿತ ಮಾಹಿತಿ ನೀಡುತ್ತಿಲ್ಲ” ಎಂದು ಕೆಲ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

    ದೆಹಲಿ ವಿಮಾನ ನಿಲ್ದಾಣದಲ್ಲಿ ಉಂಟಾದ ತೀವ್ರ ಹವಾಮಾನ ವೈಪರೀತ್ಯ ಮತ್ತು ದಟ್ಟ ಹೊಗೆಯ ಪರಿಣಾಮವಾಗಿ ಹಲವಾರು ವಿಮಾನಗಳ ಟೇಕ್‍ಆಫ್ ಹಾಗೂ ಲ್ಯಾಂಡಿಂಗ್ ಕಾರ್ಯಾಚರಣೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ದೆಹಲಿಯಿಂದ ವಿವಿಧ ನಗರಗಳಿಗೆ ಹೊರಡುವ ಮತ್ತು ಆಗಮಿಸುವ ವಿಮಾನಗಳು ವಿಳಂಬವಾಗಿವೆ.

    ಈ ವಿಮಾನದಲ್ಲಿ ಕರ್ನಾಟಕದ ಹಲವು ಪ್ರಮುಖ ನಾಯಕರು ಪ್ರಯಾಣಿಸುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್, ಶರಣ ಪ್ರಕಾಶ್ ಪಾಟೀಲ್, ಹೆಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ರೆಹಮಾನ್ ಖಾನ್ ಸೇರಿದಂತೆ 20ಕ್ಕೂ ಹೆZದಟ್ಟವಾದ ಮಂಜು, ಹೊಗೆಯಿಂದ ಕರ್ನಾಟಕದ (ಏಚಿಡಿಟಿಚಿಣಚಿಞಚಿ) 21 ಶಾಸಕರು ಇಂಡಿಗೋ(Iಟಿಜiಉo) ವಿಮಾನದ ಒಳಗಡೆಯೇ ಸಿಲುಕಿದ್ದಾರೆ.

    ವಿಮಾನದಲ್ಲಿ ಯಾರಿದ್ದಾರೆ?

    ಕೋನರೆಡ್ಡಿ, ಬಸನಗೌಡ ಬಾದರ್ಲಿ, ಆನಂದ್ ಗಡದೇವರಮಠ, ಹೆಚ್‍ಕೆ ಪಾಟೀಲ್, ಲಕ್ಷ್ಮೀ ಹೆಬಾಳ್ಕರ್, ಶರಣ ಪ್ರಕಾಶ್ ಪಾಟೀಲ್, ರಾಜು ಗೌಡ, ಸಲೀಂ ಅಹಮದ್, ತನ್ವೀರ್ ಸೇಠ್, ಸತೀಶ್ ಜಾರಕಿಹೊಳಿ, ಜಿ ಎಸ್ ಪಾಟೀಲ್, ಮಾಲೀಕಯ್ಯ ಗುತ್ತೇದಾರ್, ಈಶ್ವರ್ ಖಂಡ್ರೆ, ಜೆ ಟಿ ಪಾಟೀಲ್, ತಿಪ್ಪಣ್ಣ ಕಾಮಕನೂರ್, ನಾಗೇಂದ್ರ, ಎಂ ಬಿ ಪಾಟೀಲ್, ಅಲ್ಲಮಪ್ರಭು, ರೆಹಮಾನ್ ಖಾನ್, ಕೆಜೆ ಜಾರ್ಜ್. ಸೇರಿದಂತೆ ಶಾಸಕರು ಮತ್ತು ಸಚಿವರು ವಿಮಾನದಲ್ಲೇ ಸಿಲುಕಿದ್ದರು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search