Monday, August 10, 2026
spot_img
More
    spot_img
    HomeStateDistrictರಾಯಚೂರಿನಲ್ಲಿ ಕೆಲಸ ಖಾಲಿ ಇದೆ: ವೇತನ 18 ರಿಂದ 33 ಸಾವಿರ ರೂ.ಗಳು.

    ರಾಯಚೂರಿನಲ್ಲಿ ಕೆಲಸ ಖಾಲಿ ಇದೆ: ವೇತನ 18 ರಿಂದ 33 ಸಾವಿರ ರೂ.ಗಳು.

    ರಾಯಚೂರಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕಾಗಿ ತಾಂತ್ರಿಕ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು, ಅರ್ಹರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು 24/12/2025.

    Advertisement

    ತಾಂತ್ರಿಕ ಸಂಯೋಜಕರು 2, ತಾಲೂಕು ಎಂಐಎಸ್ ಸಂಯೋಜಕರು 2, ಆಡಳಿತ ಸಹಾಯಕರು 3, ಗಣಕಯಂತ್ರ ನಿರ್ವಾಹಕರು (ಅನುಷ್ಠಾನ ಇಲಾಖೆ) 2 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಎಲ್ಲಾ ಹುದ್ದೆಗಳ ವಯೋಮಿತಿ ಗರಿಷ್ಠ 40 ವರ್ಷಗಳು.

    ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 10.12.2025, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24.12.2025 ಮತ್ತು ಅಭ್ಯರ್ಥಿಗಳ ವಯೋಮಾನವನ್ನು ದಿನಾಂಕ 24.12.2025ರ ಅಂತ್ಯಕ್ಕೆ ಪರಿಗಣಿಸಲಾಗುವುದು ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ.

    ಸೂಚನೆಗಳು

    • ಆಯ್ಕೆಯಾದ ಅಭ್ಯರ್ಥಿಗಳು ಕೇವಲ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ನೌಕರರಾಗಿದ್ದು, ಯಾವುದೇ ಕಾರಣಕ್ಕೂ ಖಾಯಂ ಹುದ್ದೆಯಾಗಿರುವುದಿಲ್ಲ.
    • ರಾಯಚೂರು ಜಿಲ್ಲಾ ಪಂಚಾಯತಿ ಕಾರ್ಯಾಲಯ ಹಾಗೂ ಅಧೀನ ಕಚೇರಿಗಳಲ್ಲಿ ಕಳೆದ 5 ವರ್ಷಗಳಲ್ಲಿ ಸೇವೆಯಿಂದ ತೆಗೆದುಹಾಕಿದ/ ವಜಾಗೊಳಿಸಿದ/ ರಾಜೀನಾಮೆ ನೀಡಿದ/ ಸೇವೆ ಹಿಂತಿರುಗಿಸಿದ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
    • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೊನೆಯಲ್ಲಿ ನಮೂದಿಸಿರುವ ದಾಖಲೆಗಳಾದ ವಿದ್ಯಾರ್ಹತೆ/ ಸೇವಾನುಭವಕ್ಕೆ ಸಂಬಂಧಪಟ್ಟ ಎಲ್ಲಾ ಮೂಲ ಪ್ರಮಾಣ ಪತ್ರ/ ದಾಖಲೆಗಳನ್ನು ಕಡ್ಡಾಯವಾಗಿ upload ಮಾಡುವುದು.
    • Online ನಲ್ಲಿ upload ಮಾಡದೇ ಇರುವ ಯಾವ ದಾಖಲಾತಿಗಳನ್ನು ಪರಿಶೀಲನಾ ಸಮಯದಲ್ಲಿ ಪರಿಗಣಿಸುವುದಿಲ್ಲ. ದಾಖಲಾತಿ ಪರಿಶೀಲನೆಯಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಹೊಂದಿದ ಅಂಕಗಳು ಹಾಗೂ ಪಡೆದ ಸೇವಾ ಅನುಭವದ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರು ಮಾಡಲಾಗುತ್ತದೆ.
    • ಸೇವಾ ಅನುಭವದ ದೃಢೀಕರಣದ ಜೊತೆಗೆ ಸೇವೆಯ ಸಂದರ್ಭದಲ್ಲಿ ಪಡೆಯಲಾದ ವೇತನದ ಬ್ಯಾಂಕ್ ಪಾಸ್ ಶೀಟ್ ಪ್ರತಿಯನ್ನು ಲಗತ್ತಿಸುವುದು ಕಡ್ಡಾಯವಾಗಿರುತ್ತದೆ. ತಪ್ಪಿದಲ್ಲಿ ಸದರಿ ಅಭ್ಯರ್ಥಿಗಳ ಸೇವಾನುಭವದ ದಾಖಲಾತಿಯನ್ನು ಪರಿಗಣಿಸುವುದಿಲ್ಲ.
    • ಹುದ್ದೆಗಳನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡಬಹುದಾಗಿರುತ್ತದೆ.

    ಮಾಸಿಕ ಸಂಭಾವನೆ: ತಾಂತ್ರಿಕ ಸಂಯೋಜಕ ಹುದ್ದೆಗೆ ಮಾಸಿಕ ಸಂಭಾವನೆ ರೂ. 33,0000 ಹಾಗೂ ಪ್ರಯಾಣ ಭತ್ಯೆ ರೂ. 2,000/-ಗಳು. ತಾಲೂಕು ಎಂ.ಐ.ಎಸ್ ಸಂಯೋಜಕರ ಹುದ್ದೆಗೆ ಮಾಸಿಕ ಸಂಭಾವನೆ ರೂ. 28,000. ಆಡಳಿತ ಸಹಾಯಕರು ಹುದ್ದೆಗೆ ಮಾಸಿಕ ಸಂಭಾವನೆ ರೂ. 22,000/-ಗಳು ಹಾಗೂ ಗಣಕಯಂತ್ರ ನಿರ್ವಾಹಕರು ಹುದ್ದೆಗೆ ಸಂಭಾವನೆ ರೂ.18480/-ಗಳು.

    ಆಯ್ಕೆಯ ವಿಧಾನ: ಈ ಕೆಳಕಂಡ ವಿಧಾನವನ್ನು ಅಳವಡಿಸಿ ಮೆರಿಟ್ ಪಟ್ಟಿ ಸಿದ್ಧಪಡಿಸಿ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು. ತಾಂತ್ರಿಕ ಸಂಯೋಜಕರು (TC) ಕನಿಷ್ಠ ವಿದ್ಯಾರ್ಹತೆಗೆ 100 ಅಂಕಗಳು, ಸ್ನಾತಕೋತ್ತರ ಪದವಿಗೆ 10 ಅಂಕ ಮತ್ತು ಅನುಭವಕ್ಕೆ ಗರಿಷ್ಠ 10 ಅಂಕಗಳು.

    ತಾಂತ್ರಿಕ ಸಂಯೋಜಕರು (TMIS). ಕನಿಷ್ಠ ವಿದ್ಯಾರ್ಹತೆಗೆ 100 ಅಂಕಗಳು, ಸ್ನಾತಕೋತ್ತರ ಪದವಿಗೆ 10 ಅಂಕ ಮತ್ತು ಅನುಭವಕ್ಕೆ ಗರಿಷ್ಠ 10 ಅಂಕಗಳು.

     ಆಡಳತಿ ಸಹಾಯಕ. ಕನಿಷ್ಠ ವಿದ್ಯಾರ್ಹತೆಗೆ 100 ಅಂಕಗಳು, ಸ್ನಾತಕೋತ್ತರ ಪದವಿಗೆ 10 ಅಂಕ ಮತ್ತು ಅನುಭವಕ್ಕೆ ಗರಿಷ್ಠ 10 ಅಂಕಗಳು.

    ಗಣಕಯಂತ್ರ ನಿರ್ವಾಹಕರು. ಕನಿಷ್ಠ ವಿದ್ಯಾರ್ಹತೆಗೆ 100 ಅಂಕಗಳು, ಸ್ನಾತಕೋತ್ತರ ಪದವಿಗೆ 10 ಅಂಕ ಮತ್ತು ಅನುಭವಕ್ಕೆ ಗರಿಷ್ಠ 10 ಅಂಕಗಳು.

    ಆಸಕ್ತರು ಮತ್ತು ಅರ್ಹರು ಅರ್ಜಿ ಸಲ್ಲಿಕೆ ಮಾಡಲು ಅಥವ ಹೆಚ್ಚಿನ ಮಾಹಿತಿಗಾಗಿ https://zpraichur.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading