Monday, November 2, 2026
spot_img
More
    spot_img
    HomeTop Storyಒಕ್ಕಲಿಗ ನಾಯಕ ಡಿಕೆಶಿ ಸರಿ; ನಮ್ಮ ಲಿಂಗಾಯತ ಸಚಿವರು ಅಸಮರ್ಥರು ರಾಜೀನಾಮೆ ಕೊಡಲಿ ಎಂದ ಕಾಂಗ್ರೆಸ್...

    ಒಕ್ಕಲಿಗ ನಾಯಕ ಡಿಕೆಶಿ ಸರಿ; ನಮ್ಮ ಲಿಂಗಾಯತ ಸಚಿವರು ಅಸಮರ್ಥರು ರಾಜೀನಾಮೆ ಕೊಡಲಿ ಎಂದ ಕಾಂಗ್ರೆಸ್ ಶಾಸಕ!

    ದಾವಣಗೆರೆ: ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಪಕ್ಷದ ವಿರುದ್ಧವೇ ಕಿಡಿಕಾರಿರುವ ಶಾಸಕ ಶಿವಗಂಗಾ ಬಸವರಾಜ್ ಲಿಂಗಾಯತ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.

    ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿಯವರನ್ನು ಏಕೆ ಇಷ್ಟು ಇಷ್ಟ ಪಡುತ್ತೇವೆ ಅಂದ್ರೆ ಸಮಾಜಕ್ಕೆ ಅನ್ಯಾಯ ಆಗುತ್ತದೆ ಅಂದತಕ್ಷಣ ಸಭೆ ಕರೆದರು. ಆದರೆ ನಮ್ಮ ಲಿಂಗಾಯತ ಸಮಾಜದ 7 ಜನ ಸಚಿವರಿದ್ದರೂ ಧ್ವನಿ ಎತ್ತಿಲ್ಲ. ಶಾಸಕರು ಇದರ ಬಗ್ಗೆ ಚರ್ಚೆ ಮಾಡಲು ಫೋನ್ ಮಾಡಿದರೂ ಸಚಿವರು ರಿಸೀವ್ ಮಾಡಲ್ಲ. 7 ಜನ ಸಚಿವರು ಕೂಡ ಅಸಮರ್ಥರಿದ್ದಾರೆ ಕೂಡಲೇ ರಾಜೀನಾಮೇ ನೀಡಬೇಕು ಎಂದು ಲೇವಡಿ ಮಾಡಿದ್ದಾರೆ.

    ಮೊನ್ನೆ ಈಶ್ವರ್ ಖಂಡ್ರೆಯವರಿಗೆ ಕಾಲ್ ಮಾಡಿದ್ದರೂ ರಿಸೀವ್ ಮಾಡಲಿಲ್ಲ. ಆದ್ರೆ ಒಕ್ಕಲಿಗ ಸಮಾಜಕ್ಕೆ ಅನ್ಯಾಯ ಆಗಿದೆ ಅಂದಕೂಡಲೇ ಡಿಕೆಶಿ ಸಭೆ ಮಾಡಿದ್ದಾರೆ. ಆ ಸಮಾಜದ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ. ಆದ್ರೆ ಲಿಂಗಾಯತ ಸಮುದಾಯದ ಸಚಿವರು ಮಾತ್ರ ಚರ್ಚೆ ಮಾಡ್ತಾ ಇಲ್ಲ ಅಂತ ಸ್ವಪಕ್ಷದ ಸಚಿವರ ವಿರುದ್ದ ಅಕ್ರೋಶ ಹೊರ ಹಾಕಿದ್ದಾರೆ.

    ನಮ್ಮ ಸಮಾಜದ ಸಚಿವರು ಅವರ ಸ್ವಾರ್ಥಕ್ಕಾಗಿ ಮಾತ್ರ ರಾಜಕೀಯ ಮಾಡ್ತಾ ಇದಾರೆ. ಜಾತಿಗಣತಿ ನಮ್ಮ ಸಚಿವರಿಗೆ ಅವಶ್ಯಕತೆ ಇಲ್ಲ. ಯಾವ ಯಾವ ಸಮುದಾಯಕ್ಕೆ ಅನ್ಯಾಯ ಆಗಿದೆಯೋ ಅವರೆಲ್ಲ ಸಭೆ ಮಾಡ್ತಿವಿ ಎಂದರಲ್ಲದೇ ಜಾತಿ ಜನಗಣತಿ ಮರುಸಮೀಕ್ಷೆಗೆ ಒತ್ತಾಯಿಸಿದ್ದಾರೆ.
    ನಾನು ಕೂಡ ನಮ್ಮ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸುತ್ತಿದ್ದೇನೆ. ಇನ್ನೇರಡು ಮೂರು ದಿನಗಳಲ್ಲಿ ವರದಿ ನೀಡುತ್ತೇನೆ. ನಾಳೆ ಜಾತಿ ಜನಗಣತಿ ವರದಿ ಚರ್ಚೆ ಮಾಡಲಿ, ಆದ್ರೆ ಬಿಡುಗಡೆ ಮಾಡುವುದು ಬೇಡ. ಎಲ್ಲರ ಸಮೀಕ್ಷೆ ಮುಗಿದ ನಂತರ ಬಿಡುಗಡೆ ಮಾಡಲಿ. ಕ್ಷೇತ್ರದಲ್ಲಿ ಉತ್ತರ ಕೊಡುವವರು ನಾವು, ಎಲ್ಲಾ ಸಮುದಾಯಕ್ಕೆ ಉತ್ತರ ಕೊಡಬೇಕಿದೆ ಎಂದು ಹೇಳಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search