ಕಲಬುರಗಿ: ಇಲ್ಲಿ ನಡೆಯುತ್ತಿರುವ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ ಜಾತಿಗಣತಿ ಕುರಿತು ಹೇಳಿಕೆಗಳ್ನು ನೀಡಿದರು ಹಾಗೂ ಇದರ ವಿರುದ್ಧವಾಗಿ ನಿಂತಿರುವವರ ಬಗ್ಗೆಯೂ ಸಹ ಪ್ರತಿಕ್ರಿಯೆಯನ್ನು ನೀಡಿದರು.
ಅದರಲ್ಲಿಯೂ ಕಾಂಗ್ರೆಸ್‌ನವರೇ ಆದ ಶಾಮನೂರು ಶಿವಶಂಕರಪ್ಪ ತಮ್ಮ ಪಕ್ಷದ ನಿಲುವಿನ ವಿರುದ್ಧ ಮಾತನಾಡಿ ‘ವರದಿ ಬಿಡುಗಡೆ ಮಾಡಿ ಏನು ಮಾಡುತ್ತಾರೆ? ರಾಜ್ಯದಲ್ಲಿ ಇರುವ ಜನಸಂಖ್ಯೆಯಲ್ಲಿ ಲಿಂಗಾಯತರು ಮೊದಲು ಹಾಗೂ ಒಕ್ಕಲಿಗರು ಎರಡನೆಯವರು. ಈ ಇಬ್ಬರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡೋಕೆ ಆಗುತ್ತಾ?’ ಎಂದು ಹೇಳಿಕೆ ನೀಡಿದ್ದಕ್ಕೂ ಸಹ ಸಿಎಂ ಪ್ರತಿಕ್ರಿಯಿಸಿದರು.
ಇಷ್ಟು ದೊಡ್ಡ ಹೇಳಿಕೆಗೆ ಕೇವಲ ಒಂದೇ ಸಾಲಿನಲ್ಲಿ ಸಿದ್ದರಾಮಯ್ಯ ‘ನೋಡಪ್ಪ ಇದು ಸೋಷಿಯೋ ಎಕಾನಮಿಕ್ ಸರ್ವೆ. ಯಾರಿಗೂ ಅನ್ಯಾಯ ಆಗಲ್ಲ. ಅನ್ಯಾಯ ಆಗೋದಕ್ಕೆ ನಾವು ಬಿಡಲ್ಲ’ ಎಂದು ಉತ್ತರ ನೀಡಿ ಮುಗಿಸಿದರು.
ಇನ್ನು ಒಕ್ಕಲಿಗ ಶಾಸಕರು ನಡೆಸಿದ ಸಭೆ ಬಗ್ಗೆ ಸಹ ಮಾತನಾಡಿದ ಸಿದ್ದರಾಮಯ್ಯ ಮಾಡಲಿ ಬಿಡಿ ಐದು ಒಕ್ಕಲಿಗ ಸಚಿವರಿದ್ದಾರೆ, ಚರ್ಚೆ ಮಾಡಲಿ ನಾಳೆ ನಡೆಯುವ ಸಭೆಯಲ್ಲಿ ಮಾತನಾಡಲಿ ಮುಂದಿನದ್ದು ನೋಡೋಣ ಎಂದು ಹೇಳಿದರು.
ಒಟ್ಟಿನಲ್ಲಿ ಎಷ್ಟೇ ವಿರೋಧಗಳು ವ್ಯಕ್ತವಾಗುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಸಿದ್ದರಾಮಯ್ಯ ನಾಳೆ ಸಚಿವ ಸಂಪುಟದಲ್ಲಿ ಜಾತಿಗಣತಿ ವರದಿ ಕುರಿತು ಚರ್ಚಿಸಲು ಅಣಿಯಾಗಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


