ಬೆಂಗಳೂರು: ಒಂದಲ್ಲ ಒಂದು ವಿಷಯಕ್ಕೆ ಸುದ್ದಿ ಆಗುತ್ತಲೇ ಇರುವ ಖ್ಯಾತ ನಟ ದರ್ಶನ್ ಇದೀಗ ತಾವು ಹಿಡಿದ ದುಬಾರಿ ಮೊಬೈಲ್‌ನಿಂದಾಗಿ ಸದ್ದು ಮಾಡುತ್ತಿದ್ದಾರೆ.
ಸೆಲೆಬ್ರಿಟಿಗಳೆಂದ ಮೇಲೆ ದುಬಾರಿ ವಸ್ತುಗಳನ್ನು ಬಳಸುವುದು ಕಾಮನ್. ಆದರೆ ದರ್ಶನ್ ಕಾರು, ಬೈಕ್ ಬಿಟ್ಟರೆ ಬಟ್ಟೆ, ವಾಚ್ ಹಾಗೂ ಮೊಬೈಲ್ ರೀತಿಯ ವಸ್ತುಗಳನ್ನು ದುಬಾರಿ ಹಣ ಸುರಿದು ಖರೀದಿಸಿದ್ದು ಆಗೊಮ್ಮೆ, ಈಗೊಮ್ಮೆ. ಇದೀಗ ಹೊಸ ಹುವಾವೆ ಮೇಟ್ XT ಅಲ್ಟಿಮೇಟ್ ಸ್ಮಾರ್ಟ್‌ಫೋನ್ ಹಿಡಿದಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಇಂದು ಬುಧವಾರ ಮಧ್ಯಾಹ್ನ ಎರಡೂವರೆಗೆ ಪೋಸ್ಟ್ ಮಾಡಿದ ರವನ್ (ವಿಶಾಲ್ ಡಾಡ್) ಎಂಬ ಬಳಕೆದಾರನು ಡಿ ಬಾಸ್ ತಮ್ಮ ಕೈಯಲ್ಲಿ ಈ ಆಕರ್ಷಕ ಫೋನ್ ಹಿಡಿದಿರುವ ಚಿತ್ರವನ್ನು ಶೇರ್ ಮಾಡಿದ್ದಾರೆ. ಈ ಫೋನ್‌ನ ಬೆಲೆ ಭಾರತದಲ್ಲಿ ಸುಮಾರು ₹3,59,999 ರೂ ಆಗಿದೆ.
ಹುವಾವೆಯ ಈ ಮಾದರಿ ತ್ರಿಪಲ್ ಫೋಲ್ಡ್ ಡಿಸೈನ್‌ನೊಂದಿಗೆ 10.2 ಇಂಚಿನ LTPO OLED ಸ್ಕ್ರೀನ್ ಮತ್ತು ಕಿರಿನ್ 9010 ಪ್ರೊಸೆಸರ್‌ನಂತಹ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ.
ಉದ್ಯಮಿಗಳನ್ನು ಆಂಧ್ರಕ್ಕೆ ಕರೆದ ನಾರಾ ಲೋಕೇಶ್‌ಗೆ ಎಂಬಿ ಪಾಟೀಲ್ ತಿರುಗೇಟು
ಎಐ ಕೃಷಿ ಕನ್ನಡ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


