ಬೆಂಗಳೂರು: ಧರ್ಮಸ್ಥಳದ ಸರಣಿ ಕೊಲೆ ಪ್ರಕರಣ ಸದ್ಯ ತೀವ್ರ ತಿರುವು ಪಡೆದುಕೊಂಡಿದ್ದು, ಸದ್ದೇ ಇಲ್ಲದಿದ್ದ ಪ್ರಕರಣ ದಿಢೀರನೆ ತನಿಖೆ ನಡೆಯುವ ಹಂತಕ್ಕೆ ಬಂದು ತಲುಪಿದೆ.
ಒಂದೆಡೆ ನಿಗೂಢ ಹಂತಕರ ಎದೆಯಲ್ಲಿ ನಡುಕ ಶುರುವಾದರೆ, ಹಲವಾರು ದಿನಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಹೃದಯಗಳು ನೆಮ್ಮದಿಯ ಬಡಿತ ಮಿಡಿದಿವೆ.
ಧರ್ಮಸ್ಥಳದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ತಾನು ಕೆಲಸಕ್ಕಿದ್ದ ಅವಧಿಯಲ್ಲಿ ಹೂತು ಹಾಕಿದ್ದ ಕೊಲೆ ಹಾಗೂ ಅತ್ಯಾಚಾರ ಕೊಲೆಗೊಳಗಾದ ಶವಗಳನ್ನು ತೆಗೆದು ತೋರಿಸುವುದಾಗಿ ಪೊಲೀಸರಿಗೆ ಪತ್ರ ಬರೆದು ಎಫ್‌ಐಆರ್ ಸಹ ದಾಖಲಿಸಿದ್ದ.
ಹೀಗೆ ಬೃಹತ್ ತಿರುವು ಪಡೆದುಕೊಂಡ ಧರ್ಮಸ್ಥಳ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಸೂಕ್ಷ್ಮ ಪ್ರಕರಣವನ್ನು ನಿಭಾಯಿಸುವುದು ದೊಡ್ಡ ಜವಾಬ್ದಾರಿಯಾಗಿದೆ. ಸಿದ್ದರಾಮಯ್ಯನವರಿಗೆ ಈ ಕುರಿತು ಮನವಿಗಳೂ ಸಹ ಬರುತ್ತಿದ್ದು, ಇಂದು ( ಜುಲೈ 16 ) ಹಿರಿಯ ವಕೀಲರಾದ ಬಾಲನ್ ಮತ್ತು ಸಿ.ಎಸ್.ದ್ವಾರಕನಾಥ್ ಅವರ ನೇತೃತ್ವದ ವಕೀಲರ ನಿಯೋಗದವರು ಸಿದ್ದರಾಮಯ್ಯನವರನ್ನು ಭೇಟಿಯಾಗಿ, ಧರ್ಮಸ್ಥಳ ಪ್ರಕರಣದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. ಈ ಕುರಿತಂತೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಫೋಟೊ ಹಂಚಿಕೊಂಡಿದ್ದಾರೆ.
ಡಿ ಬಾಸ್ ಕೈನಲ್ಲಿನ ಮೊಬೈಲ್ ಬೆಲೆ ಕಂಡು ಹೌಹಾರಿದ ನೆಟ್ಟಿಗರು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


