ನವದೆಹಲಿ: ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್, ಅಲರ್ಜಿ, ಮಧುಮೇಹದ ಚಿಕಿತ್ಸೆಯಲ್ಲಿ ಬಳಸುವ 71 ಪ್ರಮುಖ ಔಷಧಗಳ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ.
ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಔಷಧಗಳ ಬೆಲೆ ನಿಗದಿಗೊಳಿಸಿ ಅಧಿಸೂಚನೆ ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್, ಗ್ಯಾಸ್ಟಿಕ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ರಿಲಯನ್ಸ್ ಲೈಫ್ ಸೈನ್ಸಸ್ ನ ಟ್ರಾಸ್ಟುಜುಮಾಬ್ ಔಷಧದ ಬೆಲೆಯನ್ನು ಪ್ರತಿ ಬಾಟಲಿಗೆ 11,966 ರೂ. ನಿಗದಿಪಡಿಸಿದೆ. ಟೊರೆಂಟ್ ಫಾರ್ಮಾಕ್ಯೂಟಿಕಲ್ಸ್ ತಯಾರಿಸುವ ಹೊಟ್ಟೆಯ ಒಳಪದರದ ಮೇಲಿನ ಹುಣ್ಣು-ಪೆಪ್ಟಿಕ್ ಹುಣ್ಣು ಕಾಯಿಲೆಗೆ ಚಿಕಿತ್ಸೆ ನೀಡಲು ಬಳಸುವ ಕ್ಲಾರಿಥೋಮೈಸಿನ್, ಎಸೊಮೆಪ್ರಜೋಲ್ ಮತ್ತು ಅಮೋಕ್ಸಿಸಿಲಿನ್ ಸಂಯುಕ್ತಗಳನ್ನು ಹೊಂದಿರುವ ಔಷಧಗಳ ಬೆಲೆಯನ್ನು ಪ್ರತಿ ಟ್ಯಾಬ್ಲೆಟ್‌ಗೆ 162.5 ರೂ.ಗೆ ನಿಗದಿಪಡಿಸಿದೆ.
ಮಾರಣಾಂತಿಕ ಸೋಂಕುಗಳ ಚಿಕಿತ್ಸೆಗೆ ಬಳಸುವ ಸೆಫಿಯಾಕ್ರೋನ್, ಡಿಸೋಡಿಯಂ ಎಡಿಟೇಟ್ ಮತ್ತು ಸಾಕ್ಷಮ್ ಪೌಡರ್‌ನ ಕಾಂಬಿ ಪ್ಯಾಕ್ ಬೆಲೆ ಪ್ರತಿ ಬಾಟಲಿಗೆ 626 ರೂ. ನಿಗದಿಪಡಿಸಲಾಗಿದೆ.
ಮಧುಮೇಹ ಚಿಕಿತ್ಸೆಯಲ್ಲಿ ಬಳಸುವ ಸಿಟಾಗ್ಲಿಪಿನ್‌ನನ್ನು ಒಂದು ಘಟಕವಾಗಿ ಹೊಂದಿರುವ 25 ಔಷಧಗಳ ಚಿಲ್ಲರೆ ಮಾರಾಟ ಬೆಲೆಯನ್ನೂ ಎನ್‌ಪಿಪಿಎ ನಿಗದಿಪಡಿಸಿದೆ.
ಕಳೆದ ಫೆಬ್ರವರಿಯಲ್ಲಿ ಎನ್‌ಪಿಪಿಎ ಔಷಧ ತಯಾರಕರು ಔಷಧಗಳ ಬೆಲೆಯನ್ನು ಎಲ್ಲ ವಿತರಕರು, ರಾಜ್ಯ ಔಷಧ ನಿಯಂತ್ರಕರು ಮತ್ತು ಸರ್ಕಾರಕ್ಕೆ ನೀಡಬೇಕು ಎಂದು ಆದೇಶಿಸಿತ್ತು. ಈ ಬೆಲೆ ಪಟ್ಟಿಯನ್ನು ಔಷಧ ಮಾರಾಟಗಾರರು, ಮೆಡಿಕಲ್ ಸ್ಟೋರ್ ಗಳಲ್ಲಿ ಪ್ರದರ್ಶಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದ್ದು, ಇದರಿಂದ ಗ್ರಾಹಕರು ತಾವು ಖರೀದಿಸುತ್ತಿರುವ ಔಷಧಗಳ ಬೆಲೆ ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ಎನ್ ಪಿಪಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿ ಬಾಸ್ ಕೈನಲ್ಲಿನ ಮೊಬೈಲ್ ಬೆಲೆ ಕಂಡು ಹೌಹಾರಿದ ನೆಟ್ಟಿಗರು
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


