ಕನ್ನಡ ಚಿತ್ರರಂಗದ ಮುಂಚೂಣಿಯಲ್ಲಿದ್ದ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕೊಲೆ ಆರೋಪದಡಿಯಲ್ಲಿ ಮತ್ತೊಮ್ಮೆ ಜೈಲು ಸೇರಿದ್ದಾರೆ.
ಚಿತ್ರದುರ್ಗದ ತನ್ನದೇ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್ ಹೈಕೋರ್ಟ್ನಿಂದ ಜಾಮೀನು ಪಡೆದು ಹೊರಬಂದಿದ್ದರಾದರೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಇದೀಗ ಮತ್ತೊಮ್ಮೆ ಜೈಲು ಪಾಲಾಗಿದ್ದಾರೆ.
ಹೀಗೆ ದರ್ಶನ್ ಜೈಲು ಸೇರಿದ್ದರ ಕುರಿತು ಕನ್ನಡ ಚಲನಚಿತ್ರರಂಗದ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಸೇರಿದಂತೆ ಚಿತ್ರರಂಗದ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ದರ್ಶನ್ ನಟನೆಯ ಚಿಂಗಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಮಹದೇವ್ ಸಹ ಈ ಕುರಿತು ಮಾತನಾಡಿದ್ದು, ದರ್ಶನ್ ಅಭಿಮಾನಿಗಳು ಸಹ ದರ್ಶನ್ ಈ ಸ್ಥಿತಿಗೆ ಬರಲು ಕಾರಣ ಎಂದಿದ್ದಾರೆ. ಬೇರೆ ಹೀರೊಗಳನ್ನು ಹೀಯಾಳಿಸುವವರು, ಬೇರೊಬ್ಬರ ಪೋಸ್ಟ್ಗೆ ಹೋಗಿ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ತನಗೆ ಎಲ್ಲ ರೀತಿಯ ಅಭಿಮಾನಿಗಳಿದ್ದಾರೆ, ಈ ರೀತಿ ಕಾಮೆಂಟ್ ಮಾಡುವ ಅಭಿಮಾನಿಗಳು ತನಗೆ ಬೇಡ ಎನ್ನಬೇಕಿತ್ತು, ಆದರೆ ದರ್ಶನ್ ಕೊನೆಯವರೆಗೂ ಆ ಮಾತನ್ನು ಹೇಳಲೇ ಇಲ್ಲ, ಕೆಟ್ಟ ಹೆಸರು ಬರಲು ಅವರ ಅಭಿಮಾನಿಗಳೇ ಕಾರಣ ಎಂದು ಬೇಸರ ಹೊರಹಾಕಿದರು.
ಕರ್ನಾಟಕದ 19 ಧೈರ್ಯಶಾಲಿ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಸಂಪೂರ್ಣ ಪಟ್ಟಿ ಇಲ್ಲಿದೆ!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


