ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಇದೀಗ ಜೈಲಿನಲ್ಲಿದ್ದಾರೆ. ಮೊದಲಿಗೆ ಬಂಧನಕ್ಕೊಳಗಾದ ಬಳಿಕ ರಾಜ್ಯದ ಹೈಕೋರ್ಟ್‌ನಲ್ಲಿ ಜಾಮೀನು ಪಡೆದು ಹೊರಬಂದ ದರ್ಶನ್ ದ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಥಾಯ್ಲೆಂಡ್‌ಗೂ ಸಹ ಚಿತ್ರತಂಡದ ಜೊತೆ ಹಾರಿದ್ದ ದರ್ಶನ್ ಚಿತ್ರದ ಸಂಪೂರ್ಣ ಕೆಲಸವನ್ನು ಮುಗಿಸಿಕೊಟ್ಟಿದ್ದರು. ಹೀಗೆ ಡೆವಿಲ್ ಚಿತ್ರದ ಕೆಲಸವನ್ನು ಪೂರ್ಣಗೊಳಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜಾಮೀನು ರದ್ದಾಗಿದ್ದು, ದರ್ಶನ್ ಮತ್ತೆ ಜೈಲು ಸೇರಿದ್ದಾರೆ.
ಇನ್ನು ದರ್ಶನ್ ಮೊದಲಿಗೆ ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದಿದ್ದರು. ಆಪರೇಷನ್ ಅಗತ್ಯವಿದೆ ಎಂಬ ಕಾರಣವನ್ನೂ ಸಹ ನೀಡಿದ್ದರು. ಆದರೆ ದರ್ಶನ್ ಜಾಮೀನು ಪಡೆದ ಬಳಿಕ ಯಾವುದೇ ಆಪರೇಷನ್ ಮಾಡಿಸಿಲ್ಲ. ಹೀಗಾಗಿ ಬೆನ್ನು ನೋವು ಎಂಬುದು ನೆಪ ಮಾತ್ರ ಎಂದು ಹೇಳಲಾಗುತ್ತಿತ್ತು.
ಇನ್ನು ದರ್ಶನ್ ಕ್ಯಾಮೆರಾ ಮುಂದೆ ಬಂದಾಗ ಮಾತ್ರ ಬೆನ್ನು ನೋವಿದೆ ಎನ್ನುವ ಹಾಗೆ ನಟಿಸುತ್ತಿದ್ದಾರೆ ಎಂಬ ಆರೋಪವೂ ಸಹ ಕೇಳಿಬಂದಿತ್ತು. ಆದರೆ ಇದೀಗ ಡೆವಿಲ್ ಚಿತ್ರದ ಶೂಟಿಂಗ್ ಸಮಯದಲ್ಲಿ ದರ್ಶನ್ ಬೆನ್ನು ನೋವಿನಿಂದ ನೆಲದ ಮೇಲೆ ಮಲಗಿ ನರಳಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊವನ್ನು ಹಂಚಿಕೊಳ್ಳುತ್ತಿರುವ ಅಭಿಮಾನಿಗಳು ನಿಜಕ್ಕೂ ಬಾಸ್‌ಗೆ ಬೆನ್ನು ನೋವಿದೆ, ಅದನ್ನು ಡ್ರಾಮಾ ಎನ್ನದಿರಿ ಎಂದು ಬರೆದುಕೊಳ್ಳುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


