Wednesday, July 8, 2026
spot_img
More
    spot_img
    HomeLatest newsಕನ್ನಡಕ ಧರಿಸಿ ಬೇಸತ್ತಿದ್ದೀರಾ? ಚಿಂತೆ ಬೇಡ ಈ ಐ ಡ್ರಾಪ್ಸ್‌ ಹಾಕಿದರೆ ಕನ್ನಡಕವೇ ಬೇಕಾಗಿಲ್ಲ!

    ಕನ್ನಡಕ ಧರಿಸಿ ಬೇಸತ್ತಿದ್ದೀರಾ? ಚಿಂತೆ ಬೇಡ ಈ ಐ ಡ್ರಾಪ್ಸ್‌ ಹಾಕಿದರೆ ಕನ್ನಡಕವೇ ಬೇಕಾಗಿಲ್ಲ!

    ಕನ್ನಡಕ ಧರಿಸಿ ಬೇಸತ್ತಿರುವ ಕೋಟ್ಯಂತರ ಜನರಿಗೆ ಇದೊಂದು ಒಳ್ಳೆಯ ಸುದ್ದಿ. ವೈದ್ಯಕೀಯ ಲೋಕದಲ್ಲಿ ಮಹತ್ವದ ಆವಿಷ್ಕಾರವೊಂದು ನಡೆದಿರುವ ಕಾರಣ, ಕನ್ನಡಕಗಳ ಬಳಕೆ ಇತಿಹಾಸವಾಗುವ ಸಾಧ್ಯತೆ ಇದೆ. ಹೌದು, ದೀರ್ಘದೃಷ್ಟಿ ಸಮಸ್ಯೆ (Long-sightedness) ಇರುವವರಿಗೆ ಪರಿಹಾರ ನೀಡುವ ವಿಶೇಷ ಕಣ್ಣಿನ ಹನಿಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

    Advertisement

    ಕೋಪನ್ ಹ್ಯಾಗನ್‌ನಲ್ಲಿ ನಡೆದ ಯುರೋಪಿಯನ್ ಸೊಸೈಟಿ ಆಫ್ ಕ್ಯಾಟರಾಕ್ಟ್ ಅಂಡ್ ರಿಫ್ರಾಕ್ಟಿವ್ ಸರ್ಜನ್ಸ್ (ESCRS) ಸಮ್ಮೇಳನದಲ್ಲಿ ಮಂಡಿಸಿದ ಅಧ್ಯಯನದ ಪ್ರಕಾರ, ಈ ಕಣ್ಣಿನ ಹನಿಗಳನ್ನು ಬಳಸಿದ ಜನರು ಕಣ್ಣಿನ ಪರೀಕ್ಷಾ ಪಟ್ಟಿಯಲ್ಲಿ ಹೆಚ್ಚುವರಿ ಸಾಲುಗಳನ್ನು ಓದಲು ಸಾಧ್ಯವಾಯಿತು. ಮತ್ತು ಈ ಸುಧಾರಣೆ ಎರಡು ವರ್ಷಗಳ ಕಾಲ ಮುಂದುವರಿಯಿತು ಎಂದು ವರದಿ ತಿಳಿಸಿದೆ.

    ಪ್ರೆಸ್ಬಿಯೋಪಿಯಾ ಎಂದರೇನು?

    ಕಣ್ಣಿನ ಮಸೂರವು ತನ್ನ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಾಗ, ಹತ್ತಿರದ ವಸ್ತುಗಳನ್ನು ನೋಡಲು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ‘ಪ್ರೆಸ್ಬಿಯೋಪಿಯಾ’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ 40 ವರ್ಷ ದಾಟಿದವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದುವರೆಗೆ ಇದಕ್ಕೆ ಕನ್ನಡಕ ಅಥವಾ ದುಬಾರಿ ಶಸ್ತ್ರಚಿಕಿತ್ಸೆಯೇ ಏಕೈಕ ಪರಿಹಾರವಾಗಿತ್ತು.

    ಸಾಮಾನ್ಯವಾಗಿ 40 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವ ಪ್ರೆಸ್ಬಿಯೋಪಿಯಾ ಒಂದು ರೀತಿಯ ದೀರ್ಘದೃಷ್ಟಿ ಸಮಸ್ಯೆಯಾಗಿದೆ. ಕಣ್ಣಿನ ಮಸೂರವು ತನ್ನ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಹತ್ತಿರದ ವಸ್ತುಗಳ ಮೇಲೆ ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಈ ಸಮಸ್ಯೆಗೆ ಕನ್ನಡಕಗಳು ಅಥವಾ ಶಸ್ತ್ರಚಿಕಿತ್ಸೆಯು ಸಾಮಾನ್ಯ ಪರಿಹಾರವಾಗಿದೆ. ಆದರೆ, ಅನೇಕರಿಗೆ ಕನ್ನಡಕ ಧರಿಸುವುದು ಕಿರಿಕಿರಿ ಅನ್ನಿಸಿದರೆ, ಶಸ್ತ್ರಚಿಕಿತ್ಸೆಯು ದುಬಾರಿಯಾಗಿರುತ್ತದೆ.

    ಆದರೆ, ಈ ಹೊಸ ಕಣ್ಣಿನ ಹನಿಗಳು ಈ ಸಮಸ್ಯೆಗೆ ಸರಳ ಮತ್ತು ಕೈಗೆಟುಕುವ ಪರಿಹಾರವನ್ನು ನೀಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಇದು ವೈದ್ಯಕೀಯ ಜಗತ್ತಿನಲ್ಲಿ ಒಂದು ಮಹತ್ವದ ಆವಿಷ್ಕಾರವಾಗಿದ್ದು, ಲಕ್ಷಾಂತರ ಜನರಿಗೆ ಪ್ರಯೋಜನಕಾರಿಯಾಗಲಿದೆ.

    ಧರ್ಮಸ್ಥಳ: 13ನೇ ಗುಂಡಿ ಅಗೆಯುವಾಗಲೇ ಎಸ್‌ಐಟಿ ತನಿಖೆ ನಿಲ್ಲಿಸಲು ಯುಟ್ಯೂಬರ್ಸ್‌ ಮೇಲೆ ಹಲ್ಲೆ; ಸುಮಂತ್‌ನ ಮತ್ತೊಂದು ಆಡಿಯೊ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading