Tuesday, November 3, 2026
spot_img
More
    spot_img
    HomeLatest newsವಿಶಾಖಪಟ್ಟಣದಲ್ಲಿ ಗೂಗಲ್‌ ಎಐ ಹಬ್: ಪಕ್ಕದ ರಾಜ್ಯದವರಿಗೆ ಉರಿ ಶುರು ಎಂದು ಕರ್ನಾಟಕ ಕಾಲೆಳೆದ ಆಂಧ್ರ...

    ವಿಶಾಖಪಟ್ಟಣದಲ್ಲಿ ಗೂಗಲ್‌ ಎಐ ಹಬ್: ಪಕ್ಕದ ರಾಜ್ಯದವರಿಗೆ ಉರಿ ಶುರು ಎಂದು ಕರ್ನಾಟಕ ಕಾಲೆಳೆದ ಆಂಧ್ರ ಮಂತ್ರಿ

    ಬೆಂಗಳೂರು: ಗೂಗಲ್‌ ಭಾರತದ ಪ್ರಥಮ ಎಐ ಹಬ್‌ ಅನ್ನು ನೆರೆಯ ಆಂಧ್ರಪ್ರದೇಶದ ವಿಶಾಖಪಟ್ಟಣ ನಗರದಲ್ಲಿ ತೆರೆಯಲು ಮುಂದಾಗಿದೆ.

    ಬರೋಬ್ಬರಿ 1500 ಕೋಟಿ ಡಾಲರ್‌ ಹೂಡಿಕೆಯಲ್ಲಿ ಈ ಹಬ್‌ ನಿರ್ಮಾಣವಾಗಲಿದ್ದು, ಇದರಲ್ಲಿ ಎಐ ಮೂಲಸೌಕರ್ಯ, ಡೇಟಾ ಕೇಂದ್ರಗಳು ಇರಲಿದ್ದು ಇದು ದೇಶದ ಮೊದಲ ಗಿಗಾವ್ಯಾಟ್‌ ಪ್ರಮಾಣದ ಡೇಟಾ ಸೆಂಟರ್‌ ಹಬ್‌ ಆಗಲಿದೆ.

    ಇನ್ನು ಇದರಿಂದ ಬರೋಬ್ಬರಿ 30 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಇದು ಬೆಂಗಳೂರಿನ ಕೈತಪ್ಪಿತು ಎಂಬ ಚರ್ಚೆಗಳೂ ಸಹ ಇದೇ ಸಮಯದಲ್ಲಿ ಮುನ್ನೆಲೆಗೆ ಬಂದಿವೆ.

    ಹೀಗೆ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲೇ ತೆಲುಗು ದೇಶಂ ಪಾರ್ಟಿಯ ಶಾಸಕ, ಆಂಧ್ರ ಸಂಪುಟದ ಸಚಿವ ನಾರಾ ಲೋಕೇಶ್‌ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಒಂದನ್ನು ಹಂಚಿಕೊಂಡಿದ್ದು, ನೆರೆಯ ರಾಜ್ಯಗಳ ಕಾಲೆಳೆಯುವ ಯತ್ನ ಮಾಡಿದ್ದಾರೆ.

    ಆಂಧ್ರ ಪ್ರದೇಶದ ಆಹಾರ ಖಾರವಾಗಿರುತ್ತವೆ ಎಂದು ಹೇಳುತ್ತಾರೆ. ಅದೇ ರೀತಿ ನಮ್ಮ ಹೂಡಿಕೆಗಳೂ ಸಹ ಖಾರವಾಗಿದ್ದು, ಕೆಲ ನೆರೆ ರಾಜ್ಯಗಳು ಈಗಾಗಲೇ ಅದರ ಉರಿಯನ್ನು ಅನುಭವಿಸಲು ಆರಂಭಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದು ತಮ್ಮ ನೆರೆಯ ತೆಲಂಗಾಣಕ್ಕೆ ಕೊಟ್ಟ ಟಕ್ಕರ್‌ ಎಂದು ಕೆಲ ನೆಟ್ಟಿಗರು ಕಾಮೆಂಟ್‌ ಹಾಕಿದ್ದರೆ, ಇನ್ನೂ ಕೆಲವರು ಇದು ಕರ್ನಾಟಕಕ್ಕೆ ಮಾಡಿದ ಕಾಮೆಂಟ್‌ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search