Friday, November 6, 2026
spot_img
More
    spot_img
    HomeEntertainmentಮಾರ್ಟಿನ್‌ ಒಟಿಟಿ ಬಿಡುಗಡೆ ಯಾವಾಗ? ಯಾವ ಆಪ್‌ನಲ್ಲಿ ಬರಲಿದೆ ಚಿತ್ರ?

    ಮಾರ್ಟಿನ್‌ ಒಟಿಟಿ ಬಿಡುಗಡೆ ಯಾವಾಗ? ಯಾವ ಆಪ್‌ನಲ್ಲಿ ಬರಲಿದೆ ಚಿತ್ರ?

    ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ಚಿತ್ರ ಮಾರ್ಟಿನ್‌ ಕಳೆದ ಅಕ್ಟೋಬರ್‌ 11ರಂದು ತೆರೆಕಂಡಿತ್ತು. ಚಿತ್ರ ಬಿಡುಗಡೆಗೂ ಮುನ್ನ ಮಾಡಿದ್ದ ಸದ್ದು ಬಾಕ್ಸ್‌ ಆಫೀಸ್‌ನಲ್ಲಿ ಕೇಳಿಸಲಿಲ್ಲ. ಚಿತ್ರ ಬಿಡುಗಡೆಯಾದ ಮೊದಲ ಪ್ರದರ್ಶನದಿಂದಲೇ ತೀವ್ರವಾದ ನಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿತ್ತು.

    ಕೋಟಿ ಕೋಟಿ ದುಡ್ಡು ಸುರಿದು ತಯಾರಿಸಿದ್ದ ಪ್ಯಾನ್‌ ಇಂಡಿಯಾ ಸಿನಿಮಾ ಮಾರ್ಟಿನ್‌ ಅನ್ನು ಎಲ್ಲಾ ಭಾಷೆಯ ಸಿನಿ ರಸಿಕರೂ ತಿರಸ್ಕರಿಸಿದ್ದರು. ಹೀಗೆ ಮೊದಲ ಶೋನಲ್ಲೇ ಮುಗ್ಗರಿಸಿದ ಮಾರ್ಟಿನ್‌ ಮತ್ತೆ ಎಲ್ಲಿಯೂ ಸದ್ದು ಮಾಡಲಿಲ್ಲ. ಕೆಟ್ಟ ವಿಮರ್ಶೆ ಹಾಗೂ ಕೆಲ ವಿವಾದಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದ್ದ ಈ ಚಿತ್ರ ಒಳ್ಳೆ ಅಂಶಗಳಿಂದ ಟ್ರೆಂಡಿಂಗ್‌ ಪಟ್ಟಿ ಸೇರಲೇ ಇಲ್ಲ.

    ಇನ್ನು ಚಿತ್ರದುದ್ದಕ್ಕೂ ಅನಗತ್ಯವಾದ ದೃಶ್ಯಗಳು, ಅತಿರೇಕವೆನಿಸುವ ಆಕ್ಷನ್ಸ್‌ ಕುರಿತು ಹೆಚ್ಚಾಗಿ ನೆಗೆಟಿವ್‌ ಕಾಮೆಂಟ್‌ ಕೇಳಿಬಂದಿತ್ತು. ಹೀಗೆ ಬಿಡುಗಡೆಯಾದ ಬಳಿಕ ಟ್ರೋಲ್‌ ಮೂಲಕವೇ ಸದ್ದು ಮಾಡಿದ ಮಾರ್ಟಿನ್‌ ಯಾವಾಗ ಒಟಿಟಿಗೆ ಬರಲಿದೆ ಎಂಬ ಪ್ರಶ್ನೆ ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಇದೆ. ಈ ಪ್ರಶ್ನೆಗೆ ಇದೀಗ ಉತ್ತರ ದೊರೆತಿದ್ದು, ನವೆಂಬರ್‌ 23ರಂದು ಮಾರ್ಟಿನ್‌ ಜೀ5 ಅಪ್ಲಿಕೇಶನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

    ಚಿತ್ರಮಂದಿರದಲ್ಲಿ ಊಹಿಸಿರದ ರೀತಿ ಕೆಟ್ಟ ವಿಮರ್ಶೆ ಪಡೆದುಕೊಂಡ ಮಾರ್ಟಿನ್‌ ಒಟಿಟಿಯಲ್ಲಾದರೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಾ ಎಂಬುದು ಸದ್ಯ ಸಿನಿ ರಸಿಕರ ಪ್ರಶ್ನೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search