ಡಿಸೆಂಬರ್ ತಿಂಗಳು ಬಂದಿದ್ದೇ ತಡ ಹಿಂದಿನ ವರ್ಷಗಳ ಹಾಗೆ ಈ ವರ್ಷವೂ ಸಹ ಒಳ್ಳೆಯ ಗಳಿಕೆ ಮಾಡುವ ಕನ್ನಡ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ.
ಮೊದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್ ಬಿಡುಗಡೆಗೊಂಡಿದ್ದು, ತಿಂಗಳಾಂತ್ಯದಲ್ಲಿ ಮಾರ್ಕ್ ಹಾಗೂ 45 ಚಿತ್ರಗಳು ತೆರೆಗೆ ಬರಲಿವೆ.
ಡಿಸೆಂಬರ್ 11ರಂದು ತೆರೆಗೆ ಬಂದ ದಿ ಡೆವಿಲ್ ಇಂದಿಗೆ ( ಡಿಸೆಂಬರ್ 16 ) ಆರನೇ ದಿನದ ಪ್ರದರ್ಶನವನ್ನು ಕಾಣುತ್ತಿದೆ. ಮೊದಲ ದಿನ ಚಿತ್ರದ ನಿರ್ಮಾಣ ಸಂಸ್ಥೆಯೇ ತಿಳಿಸಿರುವ ಹಾಗೆ 13.8 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಭರ್ಜರಿ ಓಪನಿಂಗ್ ಪಡೆದುಕೊಂಡ ದಿ ಡೆವಿಲ್ ನಂತರದ ದಿನಗಳಲ್ಲಿ ಕುಸಿತ ಕಂಡಿದೆ.
ಇನ್ನು ಬುಕ್‌ಮೈಶೋನಲ್ಲೂ ಬುಕಿಂಗ್ ಕುಸಿದಿದ್ದು, ಟ್ರೆಂಡಿಂಗ್ ಸರ್ಚ್‌ನಲ್ಲಿ ಇನ್ನೂ ಹತ್ತು ದಿನಗಳ ಬಳಿಕ ಬಿಡುಗಡೆಯಾಗಲಿರುವ ಮಾರ್ಕ್ ಹಾಗೂ 45 ಚಿತ್ರಗಳಿಗಿಂತ ಹಿಂದಿದೆ.
ಹೌದು, ಬುಕ್‌ಮೈಶೋನ ಬೆಂಗಳೂರು ವಿಭಾಗದ ಟ್ರೆಂಡಿಂಗ್ ಸರ್ಚ್‌ನಲ್ಲಿ ಈ ಸಮಯಕ್ಕೆ ( ಡಿಸೆಂಬರ್ 16, ರಾತ್ರಿ 8 ) ಹಿಂದಿಯ ಧುರಂಧರ್ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಅರ್ಜುನ್ ಜನ್ಯ ನಿರ್ದೇಶನದ 45 ಇದೆ, ಮೂರನೇ ಸ್ಥಾನದಲ್ಲಿ ಪಡಯಪ್ಪ ಮರು ಬಿಡುಗಡೆ ಇದ್ದು, ನಾಲ್ಕನೇ ಸ್ಥಾನದಲ್ಲಿ ಅವತಾರ್, ಐದನೇ ಸ್ಥಾನದಲ್ಲಿ ಮಾರ್ಕ್ ಇದೆ ಹಾಗೂ ಆರನೇ ಸ್ಥಾನದಲ್ಲಿ ಡೆವಿಲ್ ಇದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


