Monday, September 21, 2026
spot_img
More
    spot_img
    HomeStateDistrictನಂಜನಗೂಡು: ಹೊಸ ಮನೆಗೆ ಸಾಮಗ್ರಿ ಶಿಫ್ಟ್ ಮಾಡಿ ಹಳೆ ಮನೆಯಲ್ಲಿ ಮಲಗಿದ ಶಿಕ್ಷಕ; 180 ಗ್ರಾಂ...

    ನಂಜನಗೂಡು: ಹೊಸ ಮನೆಗೆ ಸಾಮಗ್ರಿ ಶಿಫ್ಟ್ ಮಾಡಿ ಹಳೆ ಮನೆಯಲ್ಲಿ ಮಲಗಿದ ಶಿಕ್ಷಕ; 180 ಗ್ರಾಂ ಚಿನ್ನ ಕದ್ದ ಕಳ್ಳರು

    ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಳ್ಳರ ಹಾವಳಿ ಮುಂದುವರಿದಿದ್ದು, ಸೂರ್ಯೋದಯ ನಗರ ಬಡಾವಣೆಯಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.

    Advertisement

    ಮುಸುಕುಧಾರಿ ವ್ಯಕ್ತಿಗಳಿಂದ ಈ ಕೃತ್ಯ ನಡೆದಿದ್ದು, ದೇವರಾಯಶೆಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಜಯಪ್ರಕಾಶ್ ಎಂಬುವವರ ಮನೆಯಲ್ಲಿದ್ದ 180 ಗ್ರಾಂ ಚಿನ್ನ ಕಳುವುವಾಗಿದೆ.

    ಮಾರಕಾಸ್ತ್ರಗಳನ್ನು ಹಿಡಿದ ನಾಲ್ವರು ಮುಸುಕುಧಾರಿಗಳಿಂದ ಈ ಕೃತ್ಯ ನಡೆದಿದ್ದು, ಕಳ್ಳರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಜುಬಿಲಿಯೆಂಟ್ ಬಡಾವಣೆಯಲ್ಲಿ ಬಾಡಿಗೆಗೆ ಇದ್ದ ಜಯಪ್ರಕಾಶ್ ಅವರು, ಸೂರ್ಯೋದಯ ಬಡಾವಣೆಯಲ್ಲಿ ಹೊಸ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು.   

    ಕಳೆದ ಗುರುವಾರ ನಗದು ಮತ್ತು ಚಿನ್ನಾಭರಣಗಳ ಸಮೇತ ಪೀಠೋಪಕರಣಗಳನ್ನು ಹೊಸಮನೆಗೆ ಶಿಫ್ಟ್ ಮಾಡಿದ್ದರು. ಮರುದಿನ ಆ ಮನೆಯ ವಾಸಕ್ಕೆ ಬರಲು ನಿರ್ಧರಿಸಿ ಹಳೆಯ ಮನೆಯಲ್ಲಿ  ಮಲಗಿದ್ದರು.

    ಬೆಳಿಗ್ಗೆ ಎದ್ದು ಹೊಸ ಮನೆಗೆ ತೆರಳಿದಾಗ ಬಾಗಿಲ ಬೀಗ ಮುರಿದು ಕಳ್ಳತನವಾಗಿರುವ ದೃಶ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading