ಬೆಳಗಾವಿ: ಬೀದರ್ ನಗರದಲ್ಲಿ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣ ಪ್ರಾರಂಭಿಸುವ ಬಗ್ಗೆ ಆಡಳಿತ ಪಕ್ಷದ ಮೂವರು ಸಚಿವರ ನಡುವೆ ಮಾತಿನ ಚಕಮಕಿ ನಡೆದ ಅಪರೂಪದ ಪ್ರಸಂಗ ವಿಧಾನಪರಿಷತ್‍ನಲ್ಲಿ ನಡೆಯಿತು.
ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್ ಹಾಗೂ ಈಶ್ವರ ಖಂಡ್ರೆ ಅವರುಗಳು ಪರಸ್ಪರ ಕಿತ್ತಾಡಿಕೊಂಡು ವಿರೋಧಪಕ್ಷದವರಿಗೆ ಪುಕ್ಕಟೆ ಮನರಂಜನೆಯನ್ನು ಒದಗಿಸಿದರು.
ಸಿಕ್ಕ ಅವಕಾಶವನ್ನೆ? ಬಳಸಿಕೊಂಡ ಪ್ರತಿಪಕ್ಷ ಬಿಜೆಪಿ ಸದಸ್ಯರು ಇದು ಕ್ಯಾಬಿನೇಟ್ ಜಗಳ. ಸಂಪುಟಕ್ಕೆ ಸೇರ್ಪಡೆಯಾಗುವವರ ಜಳ. ಕೆಲವರು ತಮನ್ನು ಸಂಪುಟದಿಂದ ಕೈಬಿಡಬಹುದು ಎಂಬ ಸುಳಿವನ್ನು ಅರಿತು ಈ ರೀತಿ ಕಿತ್ತಾಡಿಕೊಳ್ಳುತ್ತಿದ್ದಾರೆ. ದಾಯಾದಿ ಕಲಹ ಎಂದರೆ ಇದೇ ಅಲ್ಲವೇ? ಎಂದು ವಿರೋಧಪಕ್ಷದವರ ಕಾಲೆಳೆಯುವ ಪ್ರಯತ್ನ ಮಾಡಿದರು.
ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿಯವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್?ನ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರು ಪ್ರಶ್ನೆ ಕೇಳಿದರು. ಈ ವೇಳೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರು ಉತ್ತರಿಸಲು ಮುಂದಾದರು. ಇದನ್ನು ಗಮನಿಸದ ಸಚಿವ ಶಿವಾನಂದ ಪಾಟೀಲರು ಆಗಲೇ ಸದಸ್ಯರಿಗೆ ಉತ್ತರ ಕೊಡಲು ಮುಂದಾಗಿದ್ದರು.
ನೀವು ಉಡಾನ್ ಯೋಜನೆಯಡಿ ಬೀದರ್ ನಗರದ ವಿಮಾನ ಯೋಜನೆ ಬಗ್ಗೆ ಮಾತನಾಡುತ್ತಿದ್ದೀರ ಎಂದು ಎಂ.ಬಿ.ಪಾಟೀಲರನ್ನು ಪ್ರಶ್ನಿಸಿದರು.
ಯಾರಿಗೆ ಮಾತನಾಡಿ ವಿಮಾನಯಾನ ಆರಂಭಿಸುತ್ತಿದ್ದೀರಿ. ಇದು ಉಡಾನ್ ಯೋಜನೆಯೇ? ಎಂದು ಶಿವಾನಂದ ಪಾಟೀಲ್ ಆಕ್ರೊ?ಶದಿಂದಲೇ ಎಂ.ಬಿ.ಪಾಟೀಲರನ್ನು ಪ್ರಶ್ನೆ ಮಾಡಿದರು. ಆಗ ಎಂ.ಬಿ.ಪಾಟೀಲ್‍ರವರು ನಾವು ಅಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಬಳಸಿಕೊಂಡು ವಿಮಾನನಿಲ್ದಾಣ ಕಾಮಗಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಉಡಾನ್ ಯೋಜನೆಯಡಿ ಕೇಂದ್ರ ಸರ್ಕಾರ ವಿಮಾನಯಾನ ಅವಧಿಯನ್ನು ಹೆಚ್ಚಳ ಮಾಡಿದೆ. ಈಗಿನ ಪ್ರಕಾರ ಕೇವಲ 3 ವರ್ಷ ಮಾತ್ರ ವಿಮಾನವು ಬೇರೆ ಸಂಸ್ಥೆಗಳಿಂದ ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ ಕೇಂದ್ರ ಸರ್ಕಾರದ ನೆರವು ಇಲ್ಲದೆ ವಿಮಾನಯಾನ ನಡೆಸುವುದು ಕಷ್ಟ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಆಗ ಸಚಿವ ಈಶ್ವರ ಖಂಡ್ರೆ, ಕಲಬುರಗಿ ವಿಮಾನಯಾನವೇ ಬೇರೆ. ಬೀದರ್ ವಿಮಾನಯಾನವೇ ಬೇರೆ. ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ಆಕ್ಷೇಪಿಸಿದರು.
ಇದಕ್ಕೆ ಕೆರಳಿದ ಶಿವಾನಂದ ಪಾಟೀಲ್, ಕಲಬುರಗಿ ವಿಮಾನಯಾನವನ್ನು ಅನುಮತಿ ಇಲ್ಲದೆ ಬೀದರ್‍ಗೆ ಹೇಗೆ ಶಿಫ್?? ಮಾಡುತ್ತಿ?ರಿ. ಇಲ್ಲಿ ಕಲಬುರಗಿ ವಿಷಯವನ್ನಷ್ಟೆ? ಪ್ರಸ್ತಾಪಿಸಿ, ಬೇರೆ ವಿಷಯ ಬೇಡ ಎಂದು ಅಸಮಾಧಾನದಿಂದಲೇ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಖಂಡ್ರೆ, ಕಲಬುರಗಿ ಹಾಗೂ ಬೀದರ್ ಅನ್ನು ಒಗ್ಗೂಡಿಸಿ ಗೊಂದಲ ಮೂಡಿಸುತ್ತಿದ್ದೀರಿ ಎಂದು ಹೇಳಿದಾಗ ಮೂವರ ನಡುವೆ ಮಾತಿನ ಚಕಮಕಿ ನಡೆಯಿತು.
ಆಗ ಕಾಲೆಳೆದ ಪ್ರತಿಪಕ್ಷದವರು ಸಿವ ಸಂಪುಟದಲ್ಲಿ ಎಲ್ಲವೂ ಸರಿಯಿಲ್ಲ. ಎಲ್ಲಿಯ ಒಗ್ಗಟ್ಟು ಎಂದು ಕಾಲೆಳೆಯುವ ಪ್ರಯತ್ನ ಮಾಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


