ನಿನ್ನೆ ( ಡಿಸೆಂಬರ್ 16 ) ಅಬುಧಾಬಿಯ ಇತಿಹಾದ್ ಅರೆನಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಖಾಲಿಯಿದ್ದ ಎಂಟು ಆಟಗಾರರ ಸ್ಥಾನವನ್ನು ಪೂರ್ಣಗೊಳಿಸಿಕೊಂಡಿದೆ.
ಕಳೆದ ತಿಂಗಳು ನಡೆದ ಐಪಿಎಲ್ ರಿಟೆನ್ಷನ್‌ನಲ್ಲಿ ಒಟ್ಟು 17 ಆಟಗಾರರನ್ನು ಉಳಿಸಿಕೊಂಡು, 8 ಆಟಗಾರರನ್ನು ಕೈಬಿಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 16.40 ಕೋಟಿ ರೂಪಾಯಿಗಳೊಂದಿಗೆ ಮಿನಿ ಹರಾಜು ಪ್ರಕ್ರಿಯೆಗೆ ಪ್ರವೇಶಿಸಿತು.
ಸ್ಪೋಟಕ ಬ್ಯಾಟ್ಸ್‌ಮನ್ ವೆಂಕಟೇಶ್ ಐಯ್ಯರ್‌ರನ್ನು 7 ಕೋಟಿ ರೂಗೆ ಖರೀದಿಸಿದ ಆರ್‌ಸಿಬಿ ನ್ಯೂಜಿಲೆಂಡ್‌ನ ವೇಗಿ ಜೇಕಬ್ ಡಫ್ಫಿಯನ್ನು 2 ಕೋಟಿ ರೂಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು. ಜತೆಗೆ ಅನ್‌ಕ್ಯಾಪ್ಡ್ ಆಟಗಾರ ಮಂಗೇಶ್ ಯಾದವ್‌ಗೆ 5 ಕೋಟಿ 20 ಲಕ್ಷ ನೀಡಿ ಖರೀದಿಸಿದೆ. ಅಲ್ಲದೇ ಅಬ್ಬರದ ಬ್ಯಾಟಿಂಗ್ ನಡೆಸಬಲ್ಲ ಜಾರ್ಡನ್ ಕಾಕ್ಸ್, ಎದುರಾಳಿ ತಂಡಗಳಿಗೆ ತಲೆ ನೋವಾಗಿ ಪರಿಣಮಿಸಬಲ್ಲ ವಿಕ್ಕಿ ರೀತಿಯ ಸ್ಪಿನ್ ಬೌಲರ್ ಸಹ ತಂಡ ಸೇರಿದ್ದಾರೆ.
ಹೀಗೆ ತಂಡಕ್ಕೆ ಆಸರೆಯಾಗಿ ವಿವಿಧ ವಿಭಾಗಗಳಲ್ಲಿ ಬಲ ಹೆಚ್ಚಿಸಬಲ್ಲ ಆಟಗಾರರನ್ನೇ ಆರಿಸಿಕೊಂಡಿರುವ ಆರ್‌ಸಿಬಿ ಫ್ರಾಂಚೈಸಿ ಕಳೆದ ಮೆಗಾ ಹರಾಜಿನ ಹಾಗೆ ಈ ಬಾರಿಯೂ ಸಹ ಸಮತೋಲನವಾದ ಬಿಡ್ಡಿಂಗ್ ಮಾಡಿದೆ. ಹಾಗಾದರೆ ಈ ಬಾರಿಯ ಹರಾಜಿನಲ್ಲಿ ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಆರ್‌ಸಿಬಿ ಸೇರಿದರು, ಹರಾಜಿನ ಬಳಿಕ ಆರ್‌ಸಿಬಿ ಸಂಪೂರ್ಣ ತಂಡ ಹೇಗಿದೆ ಎಂಬ ಮಾಹಿತಿ ಮುಂದಿದೆ.
ವೆಂಕಟೇಶ್ ಅಯ್ಯರ್ (7 ಕೋಟಿ), ಜೇಕಬ್ ಡಫಿ (2 ಕೋಟಿ), ಸಾತ್ವಿಕ್ ದೇಶ್‌ವಾಲ್ (30 ಲಕ್ಷ), ಮಂಗೇಶ್ ಯಾದವ್ (5.2 ಕೋಟಿ), ಜೋರ್ಡನ್ ಕಾಕ್ಸ್ (75 ಲಕ್ಷ), ವಿಕ್ಕಿ ಓಸ್ತ್ವಾಲ್ (30 ಲಕ್ಷ), ವಿಹಾನ್ ಮಲ್ಹೋತ್ರಾ (30 ಲಕ್ಷ), ಕನಿಷ್ಕ್ ಚೌಹಾನ್ ( 30 ಲಕ್ಷ)
ಹರಾಜಿನ ಬಳಿಕ ಆರ್‌ಸಿಬಿ ಸಂಪೂರ್ಣ ತಂಡ: ರಜತ್ ಪಟೀದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಜಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ಸಲಾಂ, ಅಭಿನಂದನ್ ಸಿಂಗ್ ಸುಯಶ್ ಶರ್ಮ, ವೆಂಕಟೇಶ್ ಅಯ್ಯರ್, ಜೇಕಬ್ ಡಫಿ, ಸಾತ್ವಿಕ್ ದೇಶ್‌ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್ , ವಿಕ್ಕಿ ಓಸ್ತ್ವಾಲ್ , ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾನ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


