ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತ್ತೆ ಇಳಿಕೆಯ ಹಾದಿ ಹಿಡಿದಿದ್ದು, ನಿನ್ನೆಯ (ಸೋಮವಾರ) ಅನಿರೀಕ್ಷಿತ ಏರಿಕೆಯ ಬಳಿಕ ಇಂದು ‘ಕೂಲ್ ಆಫ್’ ಆಗಿದೆ. ಕಳೆದ ವಾರದ ವೀಕೆಂಡ್‌ನಲ್ಲಿ ಇಳಿಕೆಯಾಗಿದ್ದ ಬೆಲೆಗಳು, ಸೋಮವಾರ ದಿಢೀರ್ ಏರಿಕೆಯಾಗಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದವು. ಆದರೆ ಮಂಗಳವಾರ ಮತ್ತೆ ದರಗಳು ತಗ್ಗಿದೆ.
ಸೋಮವಾರ ₹75 ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ (Gold Rate) ಮಂಗಳವಾರ ₹80 ಇಳಿಕೆ ಕಂಡಿದೆ. ಇದೇ ರೀತಿ, ನಿನ್ನೆ ₹3 ಹೆಚ್ಚಳವಾಗಿದ್ದ ಬೆಳ್ಳಿ ಬೆಲೆ ಇಂದು ₹3 ತಗ್ಗಿದೆ.ಇಂದು (ಮಂಗಳವಾರ) ಮಾರುಕಟ್ಟೆಯಲ್ಲಿ, 10 ಗ್ರಾಂ 22 ಕ್ಯಾರಟ್ ಚಿನ್ನದ (ಆಭರಣ ಚಿನ್ನ) ಬೆಲೆಯು ₹1,22,700 ರಷ್ಟಿದ್ದು, ಇದು ₹1,23,000 ಗಡಿಯೊಳಗೆ ಉಳಿದಿದೆ. ಅಂತೆಯೇ, 10 ಗ್ರಾಂ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,33,860 ಆಗಿದ್ದು, ಇದು ₹1,34,000 ಗಡಿಯೊಳಗೆ ಇದೆ. ಇನ್ನು ಬೆಳ್ಳಿ ದರವನ್ನು ಗಮನಿಸಿದರೆ, 100 ಗ್ರಾಂ ಬೆಳ್ಳಿಯ ಬೆಲೆ ₹19,900 ರಷ್ಟಿದ್ದು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಇದೇ ದರಗಳು ಚಾಲ್ತಿಯಲ್ಲಿವೆ.
ಭಾರತದಲ್ಲಿ ಇಂದಿನ (ಡಿಸೆಂಬರ್ 16) ಚಿನ್ನ ಮತ್ತು ಬೆಳ್ಳಿ ದರಗಳು
ಚಿನ್ನ24 ಕ್ಯಾರಟ್ (ಅಪರಂಜಿ)1 ಗ್ರಾಂ13,386
ಚಿನ್ನ22 ಕ್ಯಾರಟ್ (ಆಭರಣ)1 ಗ್ರಾಂ12,270a
ಚಿನ್ನ18 ಕ್ಯಾರಟ್1 ಗ್ರಾಂ10,039
ಬೆಳ್ಳಿ-1 ಗ್ರಾಂ199
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,33,860
ನಾಗ್ಪುರ ₹1,33,860
ಮುಂಬೈ ₹1,33,860
ಚೆನ್ನೈ ₹1,34,730
ಕೋಲ್ಕತ್ತಾ ₹1,33,860
ಪಾಟ್ನಾ ₹1,33,910
ಸೂರತ್ ₹1,33,910
ಚಂಡೀಗಢ ₹1,34,010
ಲಕ್ನೋ ₹1,34,010
2025 ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಆರೋಗ್ಯ ಲಕ್ಷಣಗಳು!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


