Wednesday, August 5, 2026
spot_img
More
    spot_img
    HomeStateDistrictನಮ್ಮ ಮೆಟ್ರೋ ಹಳದಿ ಮಾರ್ಗ: ಮುಂದಿನ ವಾರದಿಂದಲೇ 12 ನಿಮಿಷಕ್ಕೊಂದು ರೈಲು

    ನಮ್ಮ ಮೆಟ್ರೋ ಹಳದಿ ಮಾರ್ಗ: ಮುಂದಿನ ವಾರದಿಂದಲೇ 12 ನಿಮಿಷಕ್ಕೊಂದು ರೈಲು

    ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಬಿಗ್ ಅಪ್‌ಡೇಟ್ ಇದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಮುಂದಿನ ವಾರದಿಂದಲೇ 12 ನಿಮಿಷಕ್ಕೊಂದು ರೈಲು ಸಂಚಾರವನ್ನು ನಡೆಸಲಿದೆ. ಈ ವರ್ಷದ ಆಗಸ್ಟ್‌ 11ರಂದು ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿತ್ತು.

    Advertisement

    16 ನಿಲ್ದಾಣಗಳನ್ನು ಹೊಂದಿರುವ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸದ್ಯ 5 ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಡಿಸೆಂಬರ್ 22ರಿಂದ 6ನೇ ರೈಲು ಸಂಚಾರವನ್ನು ನಡೆಸಲಿದೆ. ಆದ್ದರಿಂದ 12 ನಿಮಿಷಕ್ಕೊಂದು ರೈಲು ಓಡಲಿದೆ.

    ನವೆಂಬರ್ ಕೊನೆಯ ವಾರದಲ್ಲಿ ಹಳದಿ ಮಾರ್ಗದ 6ನೇ ರೈಲು ಬೆಂಗಳೂರು  ನಗರಕ್ಕೆ ಆಗಮಿಸಿತ್ತು. ಈಗ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದ್ದು, ಮುಂದಿನ ವಾರದಿಂದ ಅದನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ.

    ಹಳದಿ ಮಾರ್ಗಕ್ಕೆ ಪಶ್ಚಿಮ ಬಂಗಾಳದ ಟಿಟಾಗರ್‌ ರೈಲ್ ಸಿಸ್ಟಂ ಲಿಮಿಟೆಡ್‌ (ಟಿಆರ್‌ಎಸ್‌ಎಲ್‌) ಮೆಟ್ರೋ ರೈಲುಗಳನ್ನು ಒದಗಿಸಲಿದೆ. 15 ರೈಲುಗಳು ಸೇರಿದಂತೆ ಒಟ್ಟು 36 ರೈಲು ಕೋಚ್‌ ಸೆಟ್‌ಗಳನ್ನು 1,578 ಕೋಟಿ ವೆಚ್ಚದಲ್ಲಿ ಪೂರೈಸಬೇಕಿದೆ. ಈಗ 6ನೇ ರೈಲು ನಗರಕ್ಕೆ ಆಗಮಿಸಿದೆ.

    ಚೀನಾ ಮೂಲದ ಸಿಆರ್‌ಆರ್‌ಸಿ 36 ರೈಲುಗಳನ್ನು ಪೂರೈಕೆ ಮಾಡಲು ಟೆಂಡರ್ ಪಡೆದಿದೆ. ಇದು ಭಾರತದಲ್ಲಿ ಟಿಆರ್‌ಎಸ್‌ಎಲ್‌ ಮೂಲಕ ಬೋಗಿಯನ್ನು ಉತ್ಪಾದನೆ ಮಾಡುತ್ತಿದೆ. ಹಳದಿ ಮಾರ್ಗಕ್ಕೆ 1 ರೈಲು ಚೀನಾದಿಂದ ಉಳಿದ 5 ರೈಲುಗಳು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದಿವೆ.

    ಮೆಟ್ರೋ ರೈಲಿನ ವಾಣಿಜ್ಯ ಸಂಚಾರಕ್ಕೆ ಮುನ್ನ 750 ಕಿ.ಮೀ. ಪ್ರಾಯೋಗಿಕ ಸಂಚಾರ, ವಿವಿಧ ಪರೀಕ್ಷೆಗಳನ್ನು ಮಾಡಬೇಕಿದೆ. ಹಗಲು ಹೊತ್ತಿನಲ್ಲಿ ಹಳದಿ ಮಾರ್ಗದಲ್ಲಿ ಮಟ್ರೋ ಸಂಚಾರ ಇರುವ ಕಾರಣ ರಾತ್ರಿಯ ಹೊತ್ತಿನಲ್ಲಿ ಮಾತ್ರ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗುತ್ತಿದೆ.

    ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಡಿಸೆಂಬರ್ 22ರಂದು 6ನೇ ರೈಲನ್ನು ಹಳದಿ ಮಾರ್ಗದಲ್ಲಿ ಓಡಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಪೀಕ್ ಅವರ್‌ನಲ್ಲಿ 12 ನಿಮಿಷಕ್ಕೊಂದು ರೈಲು ಓಡಲಿದೆ. ಆದರೆ ಮಾರ್ಗದಲ್ಲಿ ಬೆಳಗ್ಗೆ 6 ಗಂಟೆಗೆ ರೈಲು ಸಂಚಾರ ಆರಂಭವಾಗುತ್ತದೆ.

    19.15 ಕಿ.ಮೀ. ಉದ್ದದ ಹಳದಿ ಮಾರ್ಗವಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10ರಂದು ಲೋಕಾರ್ಪಣೆ ಮಾಡಿದ್ದರು. ಆಗಸ್ಟ್ 11ರಿಂದ 3 ರೈಲುಗಳ ಮೂಲಕ ಮಾರ್ಗದಲ್ಲಿ ಮೆಟ್ರೋ ಸಂಚಾರವನ್ನು ಆರಂಭಿಸಲಾಯಿತು. ಆಗ 25 ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತಿತ್ತು.

    ನವೆಂಬರ್ 1ರಿಂದ 5ನೇ ರೈಲು ಸಂಚಾರ ಆರಂಭಿಸಿದ ಬಳಿಕ 15 ನಿಮಿಷಕ್ಕೊಂದು ರೈಲು ಸಂಚಾರ ಆರಂಭವಾಗಿದೆ. ಆದರೆ ಹಳದಿ ಮಾರ್ಗದಲ್ಲಿ ಬೆಳಗ್ಗೆ 5 ಗಂಟೆಗೆ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಇದೆ. ಆದರೆ ರೈಲುಗಳ ಕೊರತೆ ಕಾರಣ ಸದ್ಯಕ್ಕೆ 5 ಗಂಟೆಗೆ ಸಂಚಾರ ಆರಂಭ ಮಾಡುತ್ತಿಲ್ಲ.

    ನಮ್ಮ ಮೆಟ್ರೋ ಹಳದಿ ಮಾರ್ಗ ಆರ್.ವಿ.ರಸ್ತೆ-ಬೊಮ್ಮಸಂದ್ರ (ಡೆಲ್ಟಾ ಎಲೆಕ್ಟ್ರಾನಿಕ್) ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಎಲೆಕ್ಟ್ರಾನಿಕ್ ಸಿಟಿಗೆ ಈ ಮಾರ್ಗ ಸಂಪರ್ಕವನ್ನು ಕಲ್ಪಿಸುವ ಕಾರಣ ಟೆಕ್ಕಿಗಳಿಗೆ ಬಹಳ ಉಪಯೋಗವಾಗಿದೆ. ಪ್ರತಿದಿನ 80,000ಕ್ಕೂ ಅಧಿಕ ಜನರು ಈ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತಿದ್ದಾರೆ.

    ಈ ಮೆಟ್ರೋ ಮಾರ್ಗ ಲೋಕಾರ್ಪಣೆ ಬಳಿಕ ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಡಿಸೆಂಬರ್ ಅಂತ್ಯ ಅಥವ ಜನವರಿಯಲ್ಲಿ ಈ ಮಾರ್ಗ ಸಾಗುವ ಡಬಲ್ ಡೆಕ್ಕರ್ ಫ್ಲೈ ಓವರ್‌ನ ಎರಡು ಬದಿಯಲ್ಲಿಯೂ ವಾಹನ ಸಂಚಾರ ಆರಂಭವಾಗಲಿದೆ. ಆಗ ಸಂಚಾರ ದಟ್ಟಣೆ ಇನ್ನಷ್ಟು ಪರಿಹಾರವಾಗಲಿದೆ ಎಂದು ಅಂದಾಜಿಸಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading