ನಡಿಗೆ ದೇಹ ಮತ್ತು ಮನಸ್ಸನ್ನು ಉಲ್ಲಾಸಿತವಾಗಲು ಸಹಾಯ ಮಾಡುತ್ತದೆ. ಕೀಲು ನೋವು, ಹೃದಯದ ಸಮಸ್ಯೆಗಳು, ಒತ್ತಡ, ಖಿನ್ನತೆಯಿಂದ ಬಳಲುತ್ತಿದ್ದರೆ ವಾಕಿಂಗ್ ಮಾಡುವುದು ಒಳ್ಳೆಯ ಅಭ್ಯಾಸ.ಫಿಟ್ನೆಸ್(Fitness) ವಿಷಯಕ್ಕೆ ಬಂದರೆ ವಾಕಿಂಗ್ ಅತಿಮುಖ್ಯವಾದುದು.ವಾಕಿಂಗ್ ಮಾಡುವ ಈ ಅಭ್ಯಾಸವನ್ನು ನೀವು ಸರಿಯಾಗಿ ಅಳವಡಿಸಿಕೊಂಡರೆ, ಸಣ್ಣ ಆಗುವುದರ ಜೊತೆಗೆ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀವು ಪಡೆಯಬಹುದು.ವಾಕಿಂಗ್ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅನೇಕ ಲಾಭಗಳನ್ನು ನೀಡುತ್ತದೆ. ನಡಿಗೆ ಅಂದರೆ ವಾಕಿಂಗ್(Walking) ವ್ಯಾಯಾಮದ ಸರಳ ಮತ್ತು ಅತ್ಯಂತ ಸುಲಭ ರೂಪಗಳಲ್ಲಿ ಒಂದಾಗಿದೆ.ಇದು ಸುಲಭ ಮತ್ತು ಎಲ್ಲಾ ವಯಸ್ಸಿನವರು ಅನುಸರಿಸಬಹುದಾದ ವ್ಯಾಯಾಮವಾಗಿದೆ.ನಡಿಗೆಯಿಂದ ಸ್ನಾಯುಗಳ ಶಕ್ತಿ ವೃದ್ಧಿ ಆಗುತ್ತದೆ. ದೇಹದ ಎಲ್ಲ ಸ್ನಾಯುಗಳೂ ಚಲನಶೀಲವಾಗುತ್ತವೆ. ಯಾಕೆಂದರೆ ನಿಮ್ಮ ದೇಹಕ್ಕೆ ವ್ಯಾಯಾಮದ ಅಭ್ಯಾಸವಿಲ್ಲದ ಕಾರಣ ಆರಂಭದಲ್ಲಿ ಸ್ವಲ್ಪ ನೋವಾದಂತೆ ಅನಿಸಬಹುದು. ಆದರೆ ನಡಿಗೆ ಅಭ್ಯಾಸವನ್ನು ಬಿಡದೆ ಮುಂದುವರೆಸಿದರೆ, ಉತ್ತಮ ಫಲಿತಾಂಶ ಮಾತ್ರ ಗ್ಯಾರಂಟಿ.

ವಾಕಿಂಗ್ ನಿಂದಾಗುವ ಮುಖ್ಯ ಆರೋಗ್ಯ ಲಾಭಗಳು ಹೀಗಿವೆ:
ಹೃದಯ ಆರೋಗ್ಯಕ್ಕೆ ಉತ್ತಮ:
ಹೃದಯದ ರಕ್ತನಾಳಗಳ ಆರೋಗ್ಯದ ಮಟ್ಟಿಗೆ ನಡಿಗೆಯೇ ಅತ್ಯುತ್ತಮ.ನಿತ್ಯ ವಾಕಿಂಗ್ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ, ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ, ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.ಸಾಮಾನ್ಯ ನಡಿಗೆಗಿಂತ ವೇಗದ ನಡಿಗೆ ಉತ್ತಮ.ನಿಯಮಿತವಾದ ಸಂಜೆಯ ನಡಿಗೆಯು ಹೃದಯದ ಚಟುವಟಿಕೆಯನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ತೂಕ ನಿಯಂತ್ರಣ:
ನಡಿಗೆ ಕೂಡ ತೂಕ ನಿರ್ವಹಣೆಗೆ ಸಹಾಯಕವಾಗಿದೆ ಮತ್ತು ದೇಹದಲ್ಲಿ ಹೆಚ್ಚಾಗಿರುವ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಓಟ ಅಥವಾ ಜಿಮ್ ವರ್ಕೌಟುಗಳಿಗಿಂತ ಬಿರುಸು ಕಡಿಮೆ ತೀವ್ರವಾಗಿದ್ದರೂ ಬಿರುಸು ನಡಿಗೆಯ ಮೂಲಕ ಕ್ಯಾಲೊರಿಗಳನ್ನು ಪರಿಣಾಮಕಾರಿಯಾಗಿ ಕರಗಿಸಬಹುದು.ದೇಹವು ಕ್ಯಾಲೊರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ದಹಿಸುತ್ತದೆ. ಇದಲ್ಲದೇ ಮಧುಮೇಹ ಸೇರಿದಂತೆ ಬೊಜ್ಜು ಸಂಬಂಧಿತ ಪರಿಸ್ಥಿತಿಗಳನ್ನು ತಡೆಯುತ್ತದೆ.ಮಲಗುವ ಮುನ್ನ ಪ್ರತಿದಿನ ನಡೆಯುವುದರಿಂದ ಕ್ಯಾಲೊರಿಗಳನ್ನು ಸುಡುತ್ತದೆ, ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಇಂದಿನ ಜಡ ಜೀವನಶೈಲಿಗೆ ನಡಿಗೆ ಹೇಳಿಮಾಡಿಸಿದ ಚಟುವಟಿಕೆ. ದೇಹವನ್ನು ಹಗುರವಾಗಿಸುವುದರ ಜೊತೆಗೆ ನಡಿಗೆಯು ಸೋಂಕುಗಳ ವಿರುದ್ಧ ಹೋರಾಡಲು ಬಲ ನೀಡುತ್ತದೆ.ಅತಿಯಾದ ದೈಹಿಕ ದಂಡನೆಯ ಬದಲಾಗಿ ವಾಕಿಂಗ್ ಮತ್ತು ಪೌಷ್ಟಿಕ ಆಹಾರಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುತ್ತವೆ. ಹಾಗಾಗಿ ಪ್ರತಿ ನಿತ್ಯ ವಾಕಿಂಗ್ ಮಾಡುವುನ್ನು ರೂಢಿಸಿಕೊಳ್ಳಿ. ಇದು ಅನಾರೋಗ್ಯದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.ಇದು ಹೊಟ್ಟೆ ಉಬ್ಬುವುದು, ಅಸ್ವಸ್ಥತೆ ಮತ್ತು ಮಲಬದ್ಧತೆಯಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನಿಯಮಿತ ವಾಕಿಂಗ್ ಸಹ ಕರುಳಿನ ಕ್ಯಾನ್ಸರಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಮಧುಮೇಹ ನಿಯಂತ್ರಣ:
ವಾಕಿಂಗ್ ರಕ್ತದಲ್ಲಿ ಶಕ್ಕರೆಯ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ ದಿನಗಳಲ್ಲಿ ಮಧುಮೇಹ ಕಾಯಿಲೆ ಸಾಮಾನ್ಯ. ಟೈಪ್ 2 ಡಯಾಬಿಟಿಸ್ ತಡೆಯಲು ದಿನಕ್ಕೆ 5 ಸಾವಿರ ಹೆಜ್ಜೆ ಹಾಕುವುದು ಒಳ್ಳೆಯದು. ಅದರಲ್ಲೂ 3 ಸಾವಿರ ಹೆಜ್ಜೆ ಬಿರುಸಿನ ನಡಿಗೆಯಾಗಿದ್ದರೆ ಇನ್ನೂ ಒಳ್ಳೆಯದು. ಪ್ರತಿದಿನ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ.
ನಿದ್ರೆಯ ಗುಣಮಟ್ಟದಲ್ಲಿ ಸುಧಾರಣೆ
ಮಲಗುವ ಮುನ್ನ ಹಗುರವಾದ ನಡಿಗೆಯು ದೇಹದ ಉಷ್ಣತೆಯನ್ನು ಸ್ವಲ್ಪ ಕಡಿಮೆ ಮಾಡುತ್ತದೆ, ಇದು ಉತ್ತಮ ನಿದ್ರೆಗೆ ಅಗತ್ಯವಾಗಿರುತ್ತದೆ.ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಸುಲಭವಾಗಿ ನಿದ್ರೆ ಮಾಡುತ್ತದೆ.ವಾಕಿಂಗ್ ನಿದ್ರೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ದೇಹದ ಗಡಿಯಾರವನ್ನು (ಸಿರ್ಕಾಡಿಯನ್ ಕ್ಲಾಕ್) ನಿಯಂತ್ರಿಸಲು, ನಿದ್ರಾಹೀನತೆಯನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸ್ನಾಯುಗಳ ಶಕ್ತಿ ವೃದ್ಧಿ:
ನಡಿಗೆಯಿಂದ ಸ್ನಾಯುಗಳ ಶಕ್ತಿ ವೃದ್ಧಿಸುತ್ತದೆ. ದೇಹದ ಎಲ್ಲ ಸ್ನಾಯುಗಳೂ ಚಲನಶೀಲವಾಗುತ್ತವೆ. ಯಾಕೆಂದರೆ ನಿಮ್ಮ ದೇಹಕ್ಕೆ ವ್ಯಾಯಾಮದ ಅಭ್ಯಾಸವಿಲ್ಲದ ಕಾರಣ ಆರಂಭದಲ್ಲಿ ಸ್ವಲ್ಪ ನೋವಾದಂತೆ ಅನಿಸಬಹುದು. ವಾಕಿಂಗ್ ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕೀಲುಗಳನ್ನು ಸಹ ಬಲಪಡಿಸುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


