ಮಂಗಳೂರು: ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬುವ ವೇಳೆ ನಡೆಸಿದ ದರೋಡೆ ಪ್ರಕರಣ ನಡೆದ ಮಾರನೇ ದಿನವೇ ಮಂಗಳೂರಿನ ಉಲ್ಲಾಳದಲ್ಲಿ ಹಾಡುಹಗಲೇ ದರೋಡೆಕಾರರು ಸಿನಿಮೀಯ ರೀತಿಯಲ್ಲಿ ಸಹಕಾರ ಸಂಘಕ್ಕೆ ಸೇರಿದ ಬ್ಯಾಂಕ್ ದೋಚಿರುವ ಘಟನೆ ನಡೆದಿದೆ.
ಬ್ಯಾಂಕ್ ನಲ್ಲಿದ್ದ 15 ಕೋಟಿಯನ್ನು ( 5 ಲಕ್ಷ ನಗದು ಹಾಗೂ ಚಿನ್ನ ) ಮಂದಿ ಮುಸುಕುಧಾರಿಗಳು ಮಂಗಳೂರು ಸಮೀಪದ ಉಲ್ಲಾಳದ ಕೋಟೆಕಾರ್ ವ್ಯವಸಾಯ ಸಹಕಾರ ಸಂಘದಲ್ಲಿ ದೋಚಿ ಪರಾರಿಯಾಗಿದ್ದಾರೆ.
ಗ್ಯಾಂಗ್ ನಲ್ಲಿ ಆರು ಜನರಿದ್ದು, ಐವರು ಬ್ಯಾಂಕ್ ಗೆ ನುಗ್ಗಿ ಓರ್ವ ರಸ್ತೆಯಲ್ಲಿದ್ದ. ಪಿಸ್ತೂಲು ಮತ್ತು ತಲವಾರು ತೋರಿಸಿದ ಗ್ಯಾಂಗ್ ಬ್ಯಾಂಕ್ ನಿಂದ ಸುಮಾರು ಐದು ಲಕ್ಷ ರೂ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದೆ. ಒಟ್ಟು ಹತ್ತು ಕೋಟಿ ರೂ ಮೌಲ್ಯದ ದರೋಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಒಟ್ಟು ಆರು ಜನರಿದ್ದ ದರೋಡೆಕೋರರ ತಂಡವು ಕೋಟೆಕಾರು ಬ್ಯಾಂಕ್ ಕೆ.ಸಿರೋಡು ಶಾಖೆಗೆ ನುಗ್ಗಿ, ಪಿಸ್ತೂಲು ಮತ್ತು ತಲವಾರು ತೋರಿಸಿ ಲೂಟಿ ಮಾಡಿದೆ.
ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಕೆ.ಸಿ.ರೋಡು ಜಂಕ್ಷನ್ ನಲ್ಲಿ (ಜನವರಿ 17) ಮಧ್ಯಾಹ್ನ ಪ್ರಾರ್ಥನೆ ಕಾರಣ ಜನಸಂಚಾರ ವಿರಳವಾಗಿತ್ತು. ಇದೇ ಸಮಯ ನೋಡಿಕೊಂಡು ದರೋಡೆಕೋರರ ಗುಂಪು ಬ್ಯಾಂಕ್ ಗೆ ದಾಳಿ ನಡೆಸಿದೆ.ಕಾರಿನಲ್ಲಿ ಬಂದ ಆರು ಮಂದಿ ದರೋಡೆಗಿಳಿಯುತ್ತಿದ್ದಂತೆ ಬ್ಯಾಂಕ್ನಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿ ಬೊಬ್ಬೆಯೊಡೆಯಲು ಮುಂದಾದಾಗ ಅವರನ್ನು ಬೆದರಿಸಿದ ದರೋಡೆಕೋರರು ಸುಮ್ಮನಿರದಿದ್ದರೆ ಪ್ರಾಣ ತೆಗೆಯುತ್ತೇವೆ ಎಂದು ಹೆದರಿಸಿದರು. ಇದಕ್ಕೆ ಹೆದರಿದ ಸಿಬ್ಬಂದಿಗಳು ತಮ್ಮ ಕಣ್ಣ ಮುಂದೆಯೇ ಬ್ಯಾಂಕ್ ದರೋಡೆಯಾಗುತ್ತಿದ್ದರೂ ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


