ಭಾರತದಲ್ಲಿ ಸೈನಿಕರೆಂದರೆ ಅಪಾರವಾದ ಗೌರವವಿದೆ. ದೇಶ ಕಾಯುವ ಯೋಧ ದೇವರಿಗೆ ಸಮಾನ ಎಂಬ ದೊಡ್ಡ ಗೌರವಯುತ ಮಾತುಗಳನ್ನು ಸೈನಿಕರ ಕುರಿತು ಆಡುತ್ತಾರೆ ಭಾರತೀಯರು. ಇಷ್ಟರ ಮಟ್ಟಕ್ಕೆ ಗೌರವಿಸುವ ಸೈನಿಕರಿಗೆ ಚೂರು ಅವಮಾನವಾದರೂ ಭಾರತೀಯರು ಸಹಿಸುವುದಿಲ್ಲ. ಸೈನಿಕರ ಪರ ಸಾಮಾಜಿಕ ಜಾಲತಾಣದಲ್ಲಿ ಸಿಡಿದೆದ್ದುಬಿಡುತ್ತಾರೆ.
ಇದೀಗ ಬಾಲಿವುಡ್‌ನ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಭಾರತೀಯ ಸೈನಿಕರಿಗೆ ಅವಮಾನ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಹೌದು, ಈ ಹಿಂದೆ ಹಲವಾರು ದೊಡ್ಡ ದೊಡ್ಡ ಧಾರಾವಾಹಿಗಳನ್ನು ನಿರ್ಮಿಸಿ ದೊಡ್ಡ ಹೆಸರು ಮಾಡಿರುವ ಏಕ್ತಾ ಕಪೂರ್ ಸಸ್ಯ ಅಡಲ್ಟ್ ವೆಬ್ ಸರಣಿಗಳನ್ನು ನಿರ್ಮಿಸಿ ಅವುಗಳನ್ನು ಆಲ್ಟ ಬಾಲಾಜಿ ಎಂಬ ತಮ್ಮದೇ ಒಟಿಟಿಯಲ್ಲಿ ಬಿಡಗುಡೆ ಮಾಡುತ್ತಿರುತ್ತಾರೆ.
ಅಂತಹದ್ದೇ ಮತ್ತೊಂದು ವೆಬ್ ಸರಣಿ ಬಿಡುಗಡೆಯಾಗಿದ್ದು, ಇದರಲ್ಲಿ ಭಾರತೀಯ ಸೈನಿಕನ ಪಾತ್ರಧಾರಿ ಸೇನೆಯ ಸಮವಸ್ತ್ರದಲ್ಲಿಯೇ ಲೈಂಗಿಕ ಕ್ರಿಯೆ ನಡೆಸುವ ದೃಶ್ಯವಿದೆ. ಈ ದೃಶ್ಯದಲ್ಲಿ ಸೇನೆಯ ವಸ್ತ್ರ ಬಳಸುವ ಮೂಲಕ ಸೈನಿಕರಿಗೆ ಅವಮಾನ ಮಾಡಲಾಗಿದೆ ಎಂದು ಖ್ಯಾತ ಯುಟ್ಯೂಬರ್ ಹಿಂದೂಸ್ತಾನ್ ಬಾವ್ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


