ಮೈಸೂರು: ಇಲ್ಲಿನ ವಸ್ತು ಪ್ರದರ್ಶನದ ಆವರಣದಲ್ಲಿ ಕನ್ನಡದ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ವಿವಾಹ ಕಾರ್ಯಕ್ರಮ ಜರುಗಿತು. ಸಾವಿರಾರು ಜನ ಜಮಾಯಿಸಿದ್ದ ಈ ಕಾರ್ಯಕ್ರಮ ಅದ್ದೂರಿಯಾಗಿಯೇ ನಡೆದಿದೆ. ಕನ್ನಡದ ಹಲವು ತಾರೆಯರು, ರಾಜಕಾರಣಿಗಳು ಹಾಗೂ ಅಭಿಮಾನಿಗಳು ಮದುವೆ ಕಾರ್ಯಕ್ರಮಕ್ಕೆ ಹಾಜರಾಗಿ ನವ ವಧು ವರರಿಗೆ ಹಾರೈಸಿದ್ದಾರೆ.
ಇನ್ನು ಈ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಕರೆದಿಲ್ವಾ ಎಂಬ ಪ್ರಶ್ನೆಗೆ ಡಾಲಿ ನೀಡಿದ್ದ ಉತ್ತರ ಅವರ ಅಭಿಮಾನಿಗಳಲ್ಲಿ ಕೋಪವನ್ನೂ ಸಹ ಉಂಟುಮಾಡಿತ್ತು. ಇನ್ನು ಮದುವೆಗೆ ಬಂದಿದ್ದ ನಟ ಪ್ರಥಮ್ ಮಾಧ್ಯಮದವರ ಜೊತೆ ಮಾತನಾಡುವಾಗ ದರ್ಶನ್ ಅಭಿಮಾನಿಯೊಬ್ಬ ಬೇಕಂತಲೇ ʼಜೈ ಡಿ ಬಾಸ್ʼ ಎಂದು ಘೋಷಣೆ ಕೂಗಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿದ ನಟ ಪ್ರಥಮ್ “ಅವರ ಅಪ್ಪ ಅಮ್ಮ ಅವರಿಗೆ ಬಾಸ್ ಆಗಬೇಕು. ಯಾವನೋ ಪೆದ್ದ ಬಂದುಬಿಟ್ಟವ್ನೆ. ಕುಡಿದುಬಿಟ್ಟವ್ನೆ, ಕ್ವಾರ್ಟರ್ ಹಾಕಿಬಿಟ್ಟವ್ನೆ, ಮರೆತುಬಿಡಿ. ನೀವು ಸಿನಿಮಾ ನೋಡಿದ್ರೆ ನಾನು ನಟ. ಹೀಗಾಗಿ ನನಗೆ ನೀವೇ ಬಾಸ್. ನಿಮಗೆ ನಿಮ್ಮ ಅಪ್ಪ ಅಮ್ಮ ಬಾಸ್ ಆಗಬೇಕು. ಯಾವ ಮಗನಿಗೆ ಅಪ್ಪ ಅಮ್ಮ ಬಾಸ್ ಅಲ್ಲ ಬನ್ನಿ ಮುಂದೆ. ಕರ್ನಾಟಕದಲ್ಲಿ ಕನ್ನಡ ಬಾಸ್. ಕನ್ನಡಿಗರು ನಮಗೆ ಬಾಸ್. ನೀವೆಲ್ಲಾ ಕನ್ನಡಿಗರಾಗಿದ್ರೆ ನನಗೆ ಬಾಸ್. ಇಲ್ಲಿ ಯಾರಾದ್ರೂ ಬೆರಕೆಗಳಿದ್ರೆ ಅವರು ನಂಗೆ ಬಾಸ್ ಅಲ್ಲ. ಯಾರಿದೀರಾ? ಯಾರು ಇಲ್ಲ ತಾನೇ? ನೀವೆಲ್ಲ ನನಗೆ ಬಾಸ್. ನಿಮಗೆ ನಿಮ್ಮ ಅಪ್ಪ ಅಮ್ಮ ಮಾತ್ರ ಬಾಸ್ ಆಗಬೇಕು. ಪ್ರಥಮ್‌ನ ದೇವರು ಮಾಡಬೇಡಿ. ಪ್ರಥಮ್ ಬಂದ ಕೂಡಲೇ ತಲೆ ಮೇಲೆ ಕೂರಿಸಿಕೊಳ್ಳಬೇಡಿ. ನಾವೆಲ್ಲ ಸೊನ್ನೆಯಿಂದ ಬಂದಿರ್ತಿವಿ. ನೀವು ನೋಡಿದ್ರೆ ಕಣ್ರಯ್ಯ ಮರ್ಯಾದೆ ಸಿಗೋದು. ನಿಮ್ಮಿಂದ ಅನ್ನ ತಿಂತೀವಿ. ಯಾವ್ ಮಗನ್ನೂ ಸ್ಟಾರ್, ದೇವ್ರು ಮಾಡಬೇಡಿ. ಪ್ರಥಮ್ ಸೊನ್ನೆ, ಕಲಾವಿದರು ಸೊನ್ನೆ, ಇದನ್ನು ತಲೆಲಿ ಇಟ್ಕೊಳಿ. ನೀವು ಬಾಸ್ ಆಗ್ರಯ್ಯ. ನೀವು ಬಾಸ್ ಆಗೋದು ಯಾವಾಗ್ರಯ್ಯ? ನೀವು ಹೋಗಿ ಇನ್ನೊಬ್ಬನಿಗೆ ಬಾಸ್ ಅಂದ್ರೆ ಎಲ್ಲಿಗೂ ಬಂತು ಸಂಸ್ಕಾರ?” ಎಂದು ಹೇಳಿ ಸ್ಟಾರ್‌ಗಳನ್ನು ಬಾಸ್ ಎಂದು ಕೂಗುವ ಯುವ ಜನತೆಗೆ ಬುದ್ದಿವಾದ ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


