ನಿನ್ನೆ (ಫೆಬ್ರವರಿ 16) ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ದ ಡೆವಿಲ್ ಚಿತ್ರದ ಟೀಸರ್ ಬಿಡುಗಡೆಯಾಯಿತು. ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರ ದರ್ಶನ್ ಜೈಲಿನಿಂದ ಆಚೆ ಬಂದ ಬಳಿಕ ತೆರೆಗೆ ಬರಲಿರುವ ಮೊದಲ ಚಿತ್ರವಾದ ಕಾರಣ ಬೃಹತ್ ನಿರೀಕ್ಷೆ ಈ ಚಿತ್ರದ ಮೇಲಿದೆ.
ಇನ್ನು ನಿನ್ನೆ ಬಿಡುಗಡೆಗೊಳಿಸಿದ ಟೀಸರ್‌ನಲ್ಲಿ ದರ್ಶನ್ ಪಬ್ ಒಂದರಲ್ಲಿ ವಿಲನ್‌ಗಳ ಜತೆ ಹೊಡೆದಾಡುವ ದೃಶ್ಯಗಳಿದ್ದು, ಇದೊಂದು ಕಂಪ್ಲೀಟ್ ಮಾಸ್ ಟೀಸರ್ ಆಗಿದೆ. ಇನ್ನು ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ 3 ಮಿಲಿಯನ್ ವೀಕ್ಷಣೆ ಪಡೆದುಕೊಳ್ಳುವತ್ತ ಸಾಗಿದ್ದು, ಅಭಿಮಾನಿಗಳ ಕಡೆಯಿಂದ ಒಳ್ಳೆಯ ಅಭಿಪ್ರಾಯವೇ ವ್ಯಕ್ತವಾಗುತ್ತಿದೆ.
ಅದೇ ಸಮಯಕ್ಕೆ ಟೀಸರ್ ಕುರಿತಾಗಿ ಟೀಕೆಯೊಂದೂ ಸಹ ವ್ಯಕ್ತವಾಗುತ್ತಿದ್ದು, ಟೀಸರ್‌ನಲ್ಲಿರುವ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ 2023ರಲ್ಲಿ ತೆರೆಗೆ ಬಂದಿದ್ದ ಅನಿಮಲ್ ಚಿತ್ರದ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ನ ಕಾಪಿ ಎಂದಿದ್ದಾರೆ. ಹೌದು, ಹೀಗೊಂದು ಟ್ರೋಲ್ ಎಕ್ಸ್‌ನಲ್ಲಿ ಹರಿದಾಡುತ್ತಿದ್ದು, ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಮತ್ತೊಮ್ಮೆ ಕದ್ದ ಆಪಾದನೆ ಎದುರಿಸುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


