ಸಾರ್ವಜನಿಕ ವಲಯದ ಬ್ಯಾಂಕ್ SBI ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಇಂದಿನಿಂದ ರೆಪೊ ದರವನ್ನು ಶೇ.6.50 ರಿಂದ ಶೇ.6.25ಕ್ಕೆ ಇಳಿಸುವುದಾಗಿ ಘೋಷಿಸಿದೆ. ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ಚಿಲ್ಲರೆ ಸಾಲಗಳ ಮೇಲಿನ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಲಾಗಿದೆ ಎಂದು SBI ಹೇಳಿದೆ. ಹೊಸ ಸಾಲಗಾರರಿಗೆ ಇದು ಉತ್ತಮ ಅವಕಾಶ ಎಂದು ಹೇಳಲಾಗುತ್ತಿದೆ. MCLR ಮತ್ತು BPLR ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿದುಬಂದಿದೆ.ಇತ್ತೀಚೆಗೆ ರೆಪೊ ದರವನ್ನು 0.25% (25 ಬೇಸಿಸ್ ಪಾಯಿಂಟ್‌ಗಳು) ಕಡಿತಗೊಳಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ಬಡ್ಡಿದರಗಳು ಫೆಬ್ರವರಿ 15, 2025 ರಿಂದ ಅನ್ವಯವಾಗುತ್ತವೆ.ಇತ್ತೀಚೆಗೆ ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‌ಗಳು ರೆಪೊ ದರಕ್ಕೆ ಸಂಬಂಧಿಸಿದ ಸಾಲ ದರಗಳನ್ನು ಕಡಿತಗೊಳಿಸಿದವು. ಎಸ್.ಬಿ.ಐ. ಕೂಡ ಗೃಹ, ವಾಹನ, ವೈಯಕ್ತಿಕ, ವಾಣಿಜ್ಯ ಸಾಲದ ಮೇಲಿನ ಬಡ್ಡಿ ದರಗಳನ್ನು ಕಡಿಮೆ ಮಾಡಿದೆ. ಗ್ರಾಹಕರ ಮಾಸಿಕ ಇಎಂಐ(EMI) ಮೊತ್ತದಲ್ಲಿ ಇಳಿಕೆಯಾಗಲಿದೆ.

ಎಸ್‌ಬಿಐ ಬಡ್ಡಿ ದರ ಏಕೆ ತಗ್ಗಿಸಿದೆ?
ಎಸ್‌ಬಿಐ(SBI) ತನ್ನ ಬಡ್ಡಿ ದರವನ್ನು ಇಳಿಸುವುದಕ್ಕೆ ಪ್ರಮುಖ ಕಾರಣವೇನೆಂದರೆ, RBI ಕಳೆದ ವಾರ ಎಂಪಿಸಿ ಸಭೆಯಲ್ಲಿ ರೆಪೊ ದರವನ್ನು 0.25% ರಷ್ಟು ಕಡಿತಗೊಳಿಸಿದ್ದು. ಇದರ ಪರಿಣಾಮವಾಗಿ, ಎಸ್‌ಬಿಐ ತನ್ನ EBLR (ಬಾಹ್ಯ ಮಾನದಂಡ ಸಾಲ ದರ) ಮತ್ತು RLLR (Repo Linked Lending Rate) ಅನ್ನು ಕಡಿತಗೊಳಿಸಿದೆ.EBLR ಹಿಂದಿನ ದರ ಶೇ.9.15 + CRP + BSP ಇತ್ತು, ಆದರೆ ಇದೀಗ ಹೊಸ ದರ ಶೇ.8.90 + CRP + BSP ಆಗಿದ್ದು, EBLR 0.25% ಇಳಿದಿದೆ.RLLR ಹಿಂದಿನ ದರ ಶೇ.8.75 + CRP ಇತ್ತು, ಆದರೆ ಹೊಸ ದರ ಶೇ.8.50 + CRP ಆಗಿದ್ದು, RLLR ಕೂಡ 0.25% ಇಳಿದಿದೆ.CRP ಎಂದರೆ ಕ್ರೆಡಿಟ್ ರಿಸ್ಕ್ ಪ್ರೀಮಿಯಂ, BSP ಎಂದರೆ ಬಿಜಿನೆಸ್ ಸ್ಟ್ರಾಟರ್ಜಿ ಪ್ರೀಮಿಯಂ. ಇವುಗಳು ಸಾಲಗಾರರ ಅಪಾಯ ಮಟ್ಟ ಮತ್ತು ಬ್ಯಾಂಕಿನ ವ್ಯವಹಾರ ತಂತ್ರವನ್ನು ಅವಲಂಬಿಸಿ ಬದಲಾಗುತ್ತವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


