ನವದೆಹಲಿ: ಇಂದು (ಫೆಬ್ರವರಿ 17) ಬೆಳ್ಳಂಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆ ದಾಖಲಾಗಿದೆ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಜನರು ಹಂಚಿಕೊಂಡಿರುವ ವಿಡಿಯೊಗಳು ಭೂಕಂಪದ ತೀವ್ರತೆ 4ರಷ್ಟಲ್ಲ ಎಂಬುದನ್ನು ಕೂಗಿ ಹೇಳುವಂತಿವೆ. ಆದರೆ ಕೆಲ ಕಿಡಿಗೇಡಿಗಳು ದೆಹಲಿಯ ಭೂಕಂಪದ ಕುರಿತಾಗಿ ನಕಲಿ ವಿಡಿಯೊಗಳನ್ನೂ ಸಹ ಹಂಚಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸುವ ಕೆಲಸ ಮಾಡಿದ್ದಾರೆ.
ವೈರಲ್ ಆದ ದೆಹಲಿ ಭೂಕಂಪ ವಿಡಿಯೊಗಳ ಪೈಕಿ ಕೆಲವೊಂದು ಮಾತ್ರ ನಿಜ. ಆದರೆ ಇಡೀ ಸಿಸಿಟಿವಿಯೇ ಅಲುಗಾಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದು ಇದೇ ತಿಂಗಳ 15ರಂದು ಇಸ್ತಾನ್ಬುಲ್ನಲ್ಲಿ ಸಂಭವಿಸಿದಿ ಭೂಕಂಪದ ವಿಡಿಯೊವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


