ಮೈಸೂರು: ನಗರದ ವಿಶ್ವೇಶ್ವರಯ್ಯನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪತಿ, ಪತ್ನಿ, ತಾಯಿ ಹಾಗೂ ಮಗನ ಶವ ಪತ್ತೆಯಾಗಿದೆ.
45 ವರ್ಷದ ಚೇತನ್ ಎಂಬಾತ ತನ್ನ ಪತ್ನಿ ರೂಪಾಯಿ (43), ತಾಯಿ ಪ್ರಿಯಂವಧಾ (62) ಹಾಗೂ ಮಗ ಕುಶಾಲ್ (15) ಈ ಮೂವರಿಗೂ ಮೊದಲಿಗೆ ವಿಷವುಣಿಸಿ ಸಾಯಿಸಿ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ವಿದ್ಯಾರಣ್ಯಪುರ ಇನ್ಸ್ಪೆಕ್ಟರ್ ಮೋಹಿತ್ ಹಾಗೂ ಡಿಸಿಪಿ ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಕುರಿತು ಮಾತನಾಡಿದ ಕಮಿಷನರ್ ಸೀಮಾ ಲಾಟ್ಕರ್ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಒಂದೇ ಅಪಾರ್ಟ್‌ಮೆಂಟ್‌ನ ಅಕ್ಕಪಕ್ಕದ ಮನೆಯಲ್ಲಿ ತಾಯಿ ಹಾಗೂ ಮಗ ವಾಸವಿದ್ದರು. ಮೃತ ಚೇತನ್ ಹಾಸನದ ಗೊರೂರು ಮೂಲದವರು. ಬೆಳಗ್ಗೆ ಗೊರೂರು ದೇವಸ್ಥಾನಕ್ಕೆ ಹೋಗಿ ಸಂಜೆ ವಾಪಸ್ ಬಂದಿದ್ದರು. ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸುತ್ತೇವೆ, ಚೇತನ್ ಕಾರ್ಮಿಕರನ್ನು ಸೌದಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಇನ್ನು ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ʼನಮ್ಮ ಸಾವಿಗೆ ನಾವೇ ಕಾರಣ. ಹಣಕಾಸಿನ ಸಮಸ್ಯೆಯಿಂದಾಗಿ ನಾವೆಲ್ಲಾ ಸಾಯುತ್ತಿದ್ದೇವೆ. ನಮ್ಮ ಸಾವಿಗೆ ಬೇರೆ ಯಾರೂ ಕಾರಣರಲ್ಲ. ನನ್ನ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಯಾರೂ ತೊಂದರೆ ಕೊಡಬೇಡಿ. ನಮ್ಮನ್ನು ಕ್ಷಮಿಸಿಬಿಡಿ. I am sorry’ ಎಂದು ಬರೆಯಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


