Wednesday, September 23, 2026
spot_img
More
    spot_img
    HomeTop Storyಏರ್‌ಇಂಡಿಯಾ ದುರಂತದ ಮತ್ತೊಂದು ವಿಡಿಯೊ: ಪ್ರಾಣ ಉಳಿಸಿಕೊಳ್ಳಲು ಮಹಡಿಯಿಂದ ಜಿಗಿದಿದ್ದ ವಿದ್ಯಾರ್ಥಿಗಳು

    ಏರ್‌ಇಂಡಿಯಾ ದುರಂತದ ಮತ್ತೊಂದು ವಿಡಿಯೊ: ಪ್ರಾಣ ಉಳಿಸಿಕೊಳ್ಳಲು ಮಹಡಿಯಿಂದ ಜಿಗಿದಿದ್ದ ವಿದ್ಯಾರ್ಥಿಗಳು

    ಬೆಂಗಳೂರು: ಜೂನ್‌ 12ರಂದು ಅಹ್ಮದಾಬಾದ್‌ನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹಾರಿದ್ದ ಎಐ 171 ಏರ್‌ಇಂಡಿಯಾ ವಿಮಾನ ಕೆಲ ಟೇಕ್‌ಆಫ್‌ ಆದ 40 ಸೆಕೆಂಡುಗಳಲ್ಲೇ ನೆಲಕ್ಕೆ ಕುಸಿದಿತ್ತು.

    ಅಹ್ಮದಾಬಾದ್‌ನ ಮೇಘಾನಿ ನಗರ ಪ್ರದೇಶದಲ್ಲಿನ ಬಿಜೆ ಮೆಡಿಕಲ್‌ ಕಾಲೇಜಿನ ಹಾಸ್ಟೆಲ್‌ ಮೇಲೆ ವಿಮಾನ ಬಿದ್ದಿದ್ದು, ವಿಮಾನದಲ್ಲಿದ್ದ 241 ಮಂದಿ ಸೇರಿದಂತೆ ಒಟ್ಟು 270 ಮಂದಿ ಈ ಅವಘಡದಲ್ಲಿ ಮೃತಪಟ್ಟರು.

    ಇನ್ನು ವಿಮಾನ ಬಿದ್ದ ಸಮಯಕ್ಕೆ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಬಂದಿದ್ದು ದುರಂತ ಅಂತ್ಯ ಕಂಡಿದ್ದಾರೆ. ಈ ಸಮಯದಲ್ಲಿ ದೊಡ್ಡ ಸ್ಪೋಟವಾಗಿದ್ದು, ಹಾಸ್ಟೆಲ್‌ನ ಇನ್ನಿತರ ಭಾಗಗಳಲ್ಲಿದ್ದ ವಿದ್ಯಾರ್ಥಿಗಳು ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಹರಸಾಹಸಪಟ್ಟಿದ್ದಾರೆ.

    ಈ‍ ಘಟನೆ ಸಂಭವಿಸಿದ ಸ್ಥಳದ ವಿಡಿಯೊಗಳು ಒಂದೊಂದಾಗಿ ನಿಧಾನವಾಗಿ ಹೊರಬರುತ್ತಿದ್ದು, ಇದೀಗ ಬಿಜೆ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳು ಸ್ಪೋಟ ಸಂಭವಿಸಿದ ಸಮಯಕ್ಕೆ ಪ್ರಾಣಕ್ಕೆ ಹೆದರಿ ಹಾಸ್ಟೆಲ್‌ ಮಹಡಿಗಳಿಂದ ಕೆಳಕ್ಕೆ ಜಿಗಿದಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಇನ್ನು ಮೃತಪಟ್ಟವರನ್ನು ಡಿಎನ್‌ಎ ಮೂಲಕ ಗುರುತಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದ್ದು, ಕೇಂದ್ರ ಸರ್ಕಾರ ಈಗಾಗಲೇ ತನಿಖೆಗೆ ತಂಡವನ್ನು ರಚಿಸಿ 90 ದಿನಗಳ ಒಳಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading