ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿ 27 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಂಡಿತು.
ಪಂದ್ಯದಲ್ಲಿ ಟಾಸ್ ಸೋತು ಬೌಲಿಂಗ್ ಆರಿಸಿಕೊಂಡ ದಕ್ಷಿಣ ಆಫ್ರಿಕಾ ಎದುರಾಳಿ ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 212 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲ್‌ಔಟ್ ಆಗಿತ್ತು. ಬಳಿಕ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 138 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ 74 ರನ್‌ಗಳ ಹಿನ್ನಡೆ ಅನುಭವಿಸಿತು.
ಹೀಗೆ 74 ರನ್ ಲೀಡ್‌ನೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 207 ರನ್‌ಗಳಿಗೆ ಆಲ್‌ಔಟ್ ಆಗಿ 282 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಮಾರ್ಕ್ರಮ್ ಶತಕ ಹಾಗೂ ಟೆಂಬಾ ಬವುಮಾ ಅರ್ಧಶತಕದ ನೆರವಿನಿಂದ ಜಯ ಕಂಡ ದಕ್ಷಿಣ ಆಫ್ರಿಕಾಗೆ 30.98 ಕೋಟಿ ರೂ ಬಹುಮಾನ ಧನ ಸಿಕ್ಕಿದೆ. ಎರಡನೇ ಸ್ಥಾನ ಪಡೆದ ಆಸ್ಟ್ರೇಲಿಯಾಗೆ 18.58 ಕೋಟಿ ಲಭಿಸಿದೆ.
ಇನ್ನುಳಿದಂತೆ ಮೂರನೇ ಸ್ಥಾನ ಪಡೆದ ಭಾರತಕ್ಕೆ 12.39 ಕೋಟಿ, ನಾಲ್ಕನೇ ಸ್ಥಾನ ಪಡೆದ ನ್ಯೂಜಿಲೆಂಡ್ 10.32 ಕೋಟಿ, ಐದನೇ ಸ್ಥಾನ ಪಡೆದ ಇಂಗ್ಲೆಂಡ್‌ಗೆ 8.26 ಕೋಟಿ, ಆರನೇ ಸ್ಥಾನ ಪಡೆದ ಶ್ರೀಲಂಕಾಗೆ 7.22 ಕೋಟಿ, ಏಳನೇ ಸ್ಥಾನ ಪಡೆದ ಬಾಂಗ್ಲಾದೇಶಕ್ಕೆ 6.19 ಕೋಟಿ, ಎಂಟನೇ ಸ್ಥಾನ ಪಡೆದ ವೆಸ್ಟ್ ಇಂಡೀಸ್‌ಗೆ 5.16 ಕೋಟಿ ಹಾಗೂ ಒಂಬತ್ತನೇ ಸ್ಥಾನ ಪಡೆದ ಪಾಕಿಸ್ತಾನಕ್ಕೆ 4.13 ಕೋಟಿ ಲಭಿಸಿತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


