Tuesday, November 3, 2026
spot_img
More
    spot_img
    HomeCrimeಬೆಂಗಳೂರು: ಕಾರ್ಯಕ್ರಮಗಳಿಗೆ ಅತಿಥಿ ರೀತಿ ಬಂದು ಹಣ ಕದಿಯುತ್ತಿದ್ದವನ ಬಂಧನ

    ಬೆಂಗಳೂರು: ಕಾರ್ಯಕ್ರಮಗಳಿಗೆ ಅತಿಥಿ ರೀತಿ ಬಂದು ಹಣ ಕದಿಯುತ್ತಿದ್ದವನ ಬಂಧನ

    ಬೆಂಗಳೂರು: ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ನಡೆಯುವ ಕಾನ್ಫರೆನ್ಸ್, ಕಾರ್ಯಾಗಾರಗಳಿಗೆ ಅತಿಥಿಯ ಸೋಗಿನಲ್ಲಿ ಹೋಗಿ ಹಣ ದೋಚುತ್ತಿದ್ದ ಆರೋಪಿಯನ್ನು ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶದ ಚಿಂತಕಿಂದಿ ಶ್ರೀನಿವಾಸಲು (57) ಬಂಧಿತ ಆರೋಪಿ, ಜೂ.23ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಖಾಸಗಿ ಕಂಪನಿಯ ವಾರ್ಷಿಕ ಸಭೆಯಲ್ಲಿ ಅತಿಥಿಯಂತೆ ಭಾಗಿಯಾಗಿದ್ದ ಈತ, ಅತಿಥಿಯೊಬ್ಬರ ಬ್ಯಾಗ್‌ನಲ್ಲಿದ್ದ ವಿದೇಶಿ ಹಣ ಕದ್ದು ಪರಾರಿಯಾಗಿದ್ದ. ಈ ಕುರಿತು ಹೋಟೆಲ್‌ನ ಪ್ರತಿನಿಧಿ ನೀಡಿದ್ದ ದೂರಿನನ್ವಯ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಆರೋಪಿ ಅಂತಾರಾಷ್ಟ್ರೀಯ ಅತಿಥಿಗಳು ಭಾಗಿಯಾಗುವ ಕಾನ್ಫರೆನ್ಸ್, ಕಾರ್ಯಾಗಾರಗಳು ನಡೆಯುವ ಸ್ಥಳಗಳ ಕುರಿತು ಮಾಧ್ಯಮಗಳು, ಪತ್ರಿಕೆಗಳ ಮೂಲಕ ತಿಳಿದುಕೊಳ್ಳುತ್ತಿದ್ದ. ತಾನೂ ಸಹ ಆಹ್ವಾನಿತ ಅತಿಥಿಯ ಸೋಗಿನಲ್ಲಿ ವೇಷ ಭೂಷಣ ಧರಿಸಿ ಹೋಗುತ್ತಿದ್ದ. ಅಲ್ಲಿ ಅತಿಥಿಗಳು ತಮ್ಮ ಬ್ಯಾಗ್‌ ಇಟ್ಟು ಬೇರೆಡೆ ಹೋದ ಸಂದರ್ಭದಲ್ಲಿ ಹಣ ಕಳ್ಳತನ ಮಾಡುತ್ತಿದ್ದ, ಹೆಚ್ಚಾಗಿ ಅಧಿಕ ಮೌಲ್ಯ ಸಿಗಬಹುದು ಎಂದು ಅತಿಥಿಗಳ ಬ್ಯಾಗ್‌ನಲ್ಲಿರುವ ವಿದೇಶಿ ಹಣವನ್ನು ಕಳ್ಳತನ ಮಾಡುತ್ತಿದ್ದ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್‌ ಮಚ್ಚೇಂದ್ರ ತಿಳಿಸಿದ್ದಾರೆ.

    ಹೋಟೆಲ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು, ಮತ್ತಿತರ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ 270 ಯುಎಸ್ ಡಾಲರ್ಸ್, 2,00 ತೈವಾನ್‌ ಡಾಲರ್ಸ್ 200 ಆಸ್ಟ್ರೇಲಿಯನ್ ಡಾಲರ್ಸ್ 10,000 ಲಾವೋನ್ ಕಿಪ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ಸಂಸತ್‌ನಲ್ಲಿ ಇನ್ನುಮುಂದೆ ಇಡ್ಲಿ, ಜೋಳದ ಉಪ್ಪಿಟ್ಟು

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search