ಹೊಸದಿಲ್ಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೋರಿಕೆ ಮೇರೆಗೆ ಸಂಸತ್‌ನಲ್ಲಿ ಪೌಷ್ಟಿಕಾಂಶಯುಕ್ತ ಹೊಸ ದೇಸಿ ಆಹಾರ ಮೆನು ಸಿದ್ಧಪಡಿಸಲಾಗಿದೆ.
ಇದರಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಗಿ ಇಡ್ಲಿ ಮತ್ತು ಜೋಳ ಉಪ್ಪಿಟ್ಟುನಿಂದ ಹಿಡಿದು ಹೆಸರು ಬೇಳೆ ದೋಸ, ಬೇಯಿಸಿದ ತರಕಾರಿ ಮತ್ತು ಮೀನುಗಳವರೆಗೆ, ಹೊಸ ಆರೋಗ್ಯ ಮನು ಸಂಸದರು, ಅಧಿಕಾರಿಗಳು ಮತ್ತು ಸಂಸತ್‌ಗೆ ಆಗಮಿಸುವ ಅತಿಥಿಗಳಿಗೆ ಒಂದು ತಟ್ಟೆಯಷ್ಟು ಪೌಷ್ಟಿಕಾಂಶ ಒದಗಿಸಲು ಯೋಚಿಸಿದೆ.
ರುಚಿ ವಿಚಾರದಲ್ಲಿ ಯಾವುದೇ ರಾಜಿ ಮಾಡದೆ ಯೋಗಕ್ಷೇಮ ಬೆಂಬ ಲಿಸಲು ನವೀಕರಿಸಿದ ಆಹಾರ ಮೆನು ಸಂಸದರು ಮತ್ತು ಅಧಿಕಾರಿಗಳು ಸಂಸತ್ತಿನ ಅಧಿವೇಶನಗಳಲ್ಲಿ ದೀರ್ಘಾವಧಿಯ ಚರ್ಚೆಯಲ್ಲಿ ಪಾಲ್ಗೊಳ್ಳುವ ಅವರಿಗೆ ಈ ಮೂಲಕ ಇನ್ನಷ್ಟು ಪೌಷ್ಟಿಕಾಂಶಯುಕ್ತ ನೀಡುವ ಗುರಿ ಹೊಂದಿವೆ. ಸಂಸತ್‌ನ ಕ್ಯಾಂಟೀನ್ ಈ ವಿಶೇಷ ಮನುವನ್ನು ಹೊರತಂದಿದೆ. ಇದು ಆರೋಗ್ಯಕರ ಜೀವನಶೈಲಿ, ಉತ್ತೇಜಿಸಲು ಪೋಷಣೆಯೊಂದಿಗೆ ಸಂಪ್ರದಾಯವನ್ನು ಸಂಯೋಜಿಸುತ್ತದೆ.
ಏನೆಲ್ಲಾ ಇರಲಿದೆ?: ರುಚಿಕರವಾದ ಮೇಲೋಗರಗಳು, ಥಾಲಿ ಸಿರಿಧಾನ್ಯ ಆಧಾರಿತ ಊಟಗಳು, ನಾರಿನ ಸಮೃದ್ಧ ಸಲಾಡ್‌ಗಳು ಮತ್ತು ಪೋಟೀನ್ ಯುಕ್ತ ಸೂಪ್‌ಗಳು ಸಹ ಲಭ್ಯವಿವೆ. ಪ್ರತಿಯೊಂದು ಖಾದ್ಯದ ಕಾರ್ಬೋಹೈಡ್ರೈಟ್‌ಗಳು, ಸೋಡಿಯಂ ಮತ್ತು ಕ್ಯಾಲೋರಿಗಳು ಕಡಿಮೆ ಇರುವಂತೆ ಮತ್ತು ಅಗತ್ಯ ಪೋಷಕಾಂಶಗಳು ಹೆಚ್ಚಿರುವಂತೆ ಎಚ್ಚರಿಕೆಯಿಂದ ತಯಾರಿಸಲಾಗಿದೆ. ಇದಲ್ಲದೆ, ಆರೋಗ್ಯ ಮೆನುವಿನಲ್ಲಿ ಭಕ್ಷ್ಯಗಳ ಹೆಸರುಗಳ ಪಕ್ಕದಲ್ಲಿ ಕ್ಯಾಲೊರಿಗಳ ಸಂಖ್ಯೆ ಕೂಡ ನಮೂದಿಸಲಾಗಿದೆ.
ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಮೊಬೈಲ್ ಒಟಿಪಿ ಕಡ್ಡಾಯ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


