ನವದೆಹಲಿ: ತತ್ಕಾಲ್ನಲ್ಲಿ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಒಟಿಪಿ ಮೂಲಕ ಪರಿಶೀಲನೆ ನಡೆಸುವುದು ಕಡ್ಡಾಯವಾಗಿದೆ.
ತತ್ಕಾಲ್ ಟಿಕೆಟ್ ವಿತರಣೆಯಲ್ಲಿ ನ್ಯಾಯಯುತ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. ಆಧಾರ್ ಒಟಿಪಿ ಪರಿಶೀಲನೆ ಇಲ್ಲದೆ ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಐಆರ್ಸಿಟಿಸಿಯ ವೆಬ್ಸೈಟ್, ಮೊಬೈಲ್ ಅಪ್ಲಿಕೇಶನ್ ಅಥವಾ ಭಾರತೀಯ ರೈಲ್ವೆಯ ಟಿಕೆಟ್ ಕೌಂಟರ್ಗಳಲ್ಲಿ ತಾತ್ಕಾಲ್ ಬುಕಿಂಗ್ ಮಾಡಲು ಅವಕಾಶವಿದೆ. ಏಜೆಂಟ್ಗಳು ಟಿಕೆಟ್ ಬುಕ್ ಮಾಡುವಾಗಲೂ ಒಟಿಪಿ ಕಡ್ಡಾಯವಾಗಿರುತ್ತದೆ.
ಹಾಗಾಗಿ ಪ್ರಯಾಣಿಕರು ಆಧಾರ್ ಕಾರ್ಡ್ಗೆ ಲಿಂಕ್ ಮಾಡಿರುವ ಮೊಬೈಲ್ ನಂಬರ್ ಅನ್ನು ಜತೆಯಲ್ಲಿ ಕೊಂಡೊಯ್ಯಬೇಕು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ನೇಹಿತರಿಂದಲೇ ಪತ್ನಿ ಮೇಲೆ ಅತ್ಯಾಚಾರ ಎಸಗಿಸಿದ ಕಾನ್ಸ್ಟೇಬಲ್; ಕಾಪಾಡಲು ಬಂದವನಿಂದಲೂ ಅತ್ಯಾಚಾರ!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


